bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Nehemiah 12
Nehemiah 12
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 11
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 13 →
1
ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್, ಯೇಷೂವ ಇವರೊಡನೆ [ಯೆಹೂದ ದೇಶಕ್ಕೆ] ಬಂದ ಯಾಜಕರೂ ಲೇವಿಯರೂ.
2
ಸೆರಾಯ, ಯೆರೆಮೀಯ, ಎಜ್ರ, ಅಮರ್ಯ,
3
ಮಲ್ಲೂಕ್, ಹಟ್ಟೂಷ್, ಶೆಕನ್ಯ, ರೆಹುಮ್,
4
ಮೆರೇಮೋತ್, ಇದ್ದೋ, ಗಿನ್ನೆತೋನ್, ಅಬೀಯ,
5
ವಿುಯ್ಯಾಮೀನ್, ಮಾದ್ಯ, ಬಿಲ್ಗ, ಶೆಮಾಯ,
7
ಯೋಯಾರೀಬ್, ಯೆದಾಯ, ಸಲ್ಲೂ, ಆಮೋಕ್, ಹಿಲ್ಕೀಯ, ಯೆದಾಯ ಇವರು ಯೇಷೂವನ ಕಾಲದಲ್ಲಿ ಯಾಜಕರ ಮತ್ತು ಅವರ ಬಂಧುಗಳ ಪ್ರಧಾನರು.
8
ಲೇವಿಯರು - ಯೇಷೂವ, ಬಿನ್ನೂಯ್, ಕದ್ಮೀಯೇಲ್, ಶೇರೇಬ್ಯ, ಯೆಹೂದ, ಮತ್ತನ್ಯ ಇವರು. ಮತ್ತನ್ಯನೂ ಅವನ ಸಹೋದರರೂ ಕೃತಜ್ಞತಾಭಜನ ನಾಯಕರು.
9
ಇವರ ಸಹೋದರರಾದ ಬಕ್ಬುಕ್ಯ, ಉನ್ನೀ ಎಂಬವರು ಭಜನಸೇವೆಯಲ್ಲಿ ಇವರೆದುರಿಗೆ ನಿಂತು ಹಾಡುವವರು.
10
ಯೇಷೂವನು ಯೋಯಾಕೀಮನನ್ನೂ ಯೋಯಾಕೀಮನು ಎಲ್ಯಾಷೀಬನನ್ನೂ ಎಲ್ಯಾಷೀಬನು ಯೋಯಾದನನ್ನೂ
11
ಯೋಯಾದನು ಯೋನಾತಾನನನ್ನೂ ಯೋನಾತಾನನು ಯದ್ದೂವನನ್ನೂ ಪಡೆದರು.
12
ಯೋಯಾಕೀಮನ ಕಾಲದಲ್ಲಿ ಯಾಜಕರಾಗಿದ್ದ ಗೋತ್ರಪ್ರಧಾನರು - ಸೆರಾಯನ ಗೋತ್ರದ ಮೆರಾಯ,
13
ಯೆರೆಮೀಯನ ಗೋತ್ರದ ಹನನ್ಯ, ಎಜ್ರನ ಗೋತ್ರದ ಮೆಷುಲ್ಲಾಮ್, ಅಮರ್ಯನ ಗೋತ್ರದ ಯೆಹೋಹಾನಾನ್,
14
ಮಲ್ಲೂಕಿಯ ಗೋತ್ರದ ಯೋನಾತಾನ್, ಶೆಬನ್ಯನ ಗೋತ್ರದ ಯೋಸೇಫ್,
15
ಹಾರಿಮನ ಗೋತ್ರದ ಅದ್ನ, ಮೆರಾಯೋತನ ಗೋತ್ರದ ಹೆಲ್ಕೈ,
16
ಇದ್ದೋವಿನ ಗೋತ್ರದ ಜೆಕರ್ಯ, ಗಿನ್ನೆತೋನನ ಗೋತ್ರದ ಮೆಷುಲ್ಲಾಮ್,
17
ಅಬೀಯನ ಗೋತ್ರದ ಜಿಕ್ರೀ, ವಿುನ್ಯಾಮೀನನ ಮತ್ತು ಮೋವದ್ಯನಗೋತ್ರದ ಪಿಲ್ಟೈ,
18
ಬಿಲ್ಗಾಗೋತ್ರದ ಶಮ್ಮೂವ, ಶೆಮಾಯನ ಗೋತ್ರದ ಯೆಹೋನಾತಾನ್,
19
ಯೋಯಾರೀಬನ ಗೋತ್ರದ ಮತ್ತೆನೈ, ಯೆದಾಯನ ಗೋತ್ರದ ಉಜ್ಜೀ,
20
ಸಲ್ಲೈ ಗೋತ್ರದ ಕಲ್ಲೈ, ಆಮೋಕನ ಗೋತ್ರದ ಏಬೆರ್,
21
ಹಿಲ್ಕೀಯನ ಗೋತ್ರದ ಹಷಬ್ಯ, ಯೆದಾಯನ ಗೋತ್ರದ ನೆತನೇಲ್ ಇವರು.
22
ಎಲ್ಯಾಷೀಬ್, ಯೋಯಾದ, ಯೋಹಾನಾನ್, ಯದ್ದೂವ ಇವರ ಕಾಲಗಳಲ್ಲಿದ್ದ ಲೇವಿಯ ಗೋತ್ರ ಪ್ರಧಾನರ ಪಟ್ಟಿಯೂ ಪಾರಸಿಯನಾದ ದಾರ್ಯಾವೇಷ ರಾಜನ ಆಳಿಕೆಯವರೆಗಿದ್ದ ಯಾಜಕರ ಪಟ್ಟಿಯೂ ಉಂಟು.
23
ಎಲ್ಯಾಷೀಬನ ಮೊಮ್ಮಗನಾದ ಯೋಹಾನಾನನ ಕಾಲದವರೆಗಿದ್ದ ಲೇವಿಯ ಗೋತ್ರಪ್ರಧಾನರ ಪಟ್ಟಿಯು ಪೂರ್ವಕಾಲವೃತ್ತಾಂತವೆಂಬ ಗ್ರಂಥದಲ್ಲಿ ಬರೆದಿರುತ್ತದೆ.
24
ಈ ಲೇವಿಗೋತ್ರಪ್ರಧಾನರಲ್ಲಿ ಯೇಷೂವನ ಮಗನೂ ಯೋಚಾದಾಕನ ಮೊಮ್ಮಗನೂ ಆದ ಯೋಯಾಕೀಮ್, ದೇಶಾಧಿಪತಿಯಾದ ನೆಹೆಮೀಯ, ಯಾಜಕನೂ ಧರ್ಮೋಪದೇಶಕನೂ ಆದ ಎಜ್ರ
25
ಇವರ ಕಾಲದಲ್ಲಿದ್ದವರು - ಹಷಬ್ಯ, ಶೇರೇಬ್ಯ, ಯೇಷೂವ, ಬಿನ್ನೂಯ್, ಕದ್ಮೀಯೇಲ್ ಇವರು. (ದೇವರ ಮನುಷ್ಯನಾದ ದಾವೀದನ ಅಪ್ಪಣೆಯ ಮೇರೆಗೆ ಇವರೂ ಇವರ ಸಹೋದರರೂ ಸರತಿಗೆ ಎರಡೆರಡು ವರ್ಗಗಳಾಗಿ ಪರಸ್ಪರ ಹಾಡುತ್ತಾ ಕೀರ್ತನೆಯನ್ನೂ ಕೃತಜ್ಞತಾಸ್ತುತಿಯನ್ನೂ ಮಾಡುತ್ತಿದ್ದರು.)
26
ಇವರಲ್ಲದೆ ಬಾಗಲುಗಳ ಬಳಿಯಲ್ಲಿದ್ದ ಉಗ್ರಾಣಗಳನ್ನು ಕಾಯತಕ್ಕ ದ್ವಾರಪಾಲಕರಾದ ಮತ್ತನ್ಯ, ಬಕ್ಬುಕ್ಯ, ಓಬದ್ಯ, ಮೆಷುಲ್ಲಾಮ್, ಟಲ್ಮೋನ್, ಅಕ್ಕೂಬ್ ಎಂಬವರು.
27
ಯೆರೂಸಲೇವಿುನ ಗೋಡೆಯನ್ನು ಪ್ರತಿಷ್ಠಿಸುವ ಸಮಯ ಬಂದಾಗ ಆಯಾ ಸ್ಥಳಗಳಲ್ಲಿದ್ದ ಲೇವಿಯರನ್ನು ಕೀರ್ತನಗಾಯನಗಳಿಂದಲೂ ತಾಳ ಸ್ವರಮಂಡಲ ಕಿನ್ನರಿ ಇವುಗಳಿಂದಲೂ ಪ್ರತಿಷ್ಠೆಯ ಉತ್ಸವವನ್ನು ಆಚರಿಸುವದಕ್ಕಾಗಿ ಯೆರೂಸಲೇವಿುಗೆ ಕರೆಯಿಸಿದರು.
28
ಆಗ ಯೆರೂಸಲೇವಿುನ ಸುತ್ತಣ ಪ್ರಾಂತಗಳಲ್ಲಿ ತಮಗೋಸ್ಕರ ಹಳ್ಳಿಗಳನ್ನು ಕಟ್ಟಿಕೊಂಡಿದ್ದ ಗಾಯಕ ಮಂಡಲಿಯವರು ಯೊರ್ದನ್ ಹೊಳೆಯ ತಗ್ಗು, ಯೆರೂಸಲೇವಿುನ ಸುತ್ತಣಪ್ರದೇಶ, ನೆಟೋಫಾತ್ಯರ ಗ್ರಾಮ,
29
ಬೇತ್ಹಗಿಲ್ಗಾಲ್, ಗೆಬ ಮತ್ತು ಅಜ್ಮಾವೇತ್ ಊರುಗಳಿಗೆ ಸೇರಿರುವ ಹಳ್ಳಿಗಳು ಇವುಗಳಿಂದ ಕೂಡಿ ಬಂದರು.
30
ಯಾಜಕರೂ ಲೇವಿಯರೂ ತಮ್ಮನ್ನು ಶುದ್ಧಿಪಡಿಸಿಕೊಂಡ ಮೇಲೆ ಜನರನ್ನೂ ಊರುಬಾಗಲುಗಳನ್ನೂ ಗೋಡೆಯನ್ನೂ ಶುದ್ಧಪಡಿಸಿದರು.
31
ಆಮೇಲೆ ನಾನು ಯೆಹೂದ ಪ್ರಭುಗಳನ್ನು ಗೋಡೆಯ ಮೇಲೆ ಕರಕೊಂಡು ಬಂದು ಭಜನ ಮಂಡಲಿಯವರಿಗೆ - ಎರಡು ದೊಡ್ಡ ಗುಂಪುಗಳಾಗಿ ಇಲ್ಲಿ ನಿಲ್ಲಬೇಕೆಂದು ಅಪ್ಪಣೆಮಾಡಿದೆನು. ಒಂದು ಗುಂಪಿನವರು ಮೆರವಣಿಗೆಯಿಂದ ಗೋಡೆಯ ಮೇಲೆ ತಿಪ್ಪೆಬಾಗಲಿನಿಂದ ಬಲಗಡೆಗೆ ಹೋದರು.
32
ಅವರ ಹಿಂದೆ ಯೆಹೂದ ಪ್ರಭುಗಳ ಅರ್ಧ ಜನರೊಡನೆ ಹೋಷಾಯನೂ
33
ತುತೂರಿಹಿಡಿದಿರುವ ಯಾಜಕರೊಡನೆ ಅಜರ್ಯ,
34
ಎಜ್ರ, ಮೆಷುಲ್ಲಾಮ್, ಯೆಹೂದ, ಬೆನ್ಯಾಮೀನ್, ಶೆಮಾಯ, ಯೆರೆಮೀಯ ಎಂಬವರೂ
35
ಆಸಾಫ್ ಸಂತಾನದ ಜಕ್ಕೂರನಿಗೆ ಹುಟ್ಟಿದ ಮೀಕಾಯನ ವಂಶದವನೂ ಮತ್ತನ್ಯನ ಮರಿಮಗನೂ ಶೆಮಾಯನ ಮೊಮ್ಮಗನೂ ಯೋನಾತಾನನ ಮಗನೂ ಆದ ಜೆಕರ್ಯನೂ
36
ದೇವರ ಮನುಷ್ಯನಾದ ದಾವೀದನ ವಾದ್ಯಗಳನ್ನು ಹಿಡಿದಿರುವ ಇವನ ಬಂಧುಗಳಾದ ಶೆಮಾಯ, ಅಜರೇಲ್, ವಿುಲಲೈ, ಗಿಲಲೈ, ಮಾಯೈ, ನೆತನೇಲ್, ಯೆಹೂದ, ಹನಾನೀ ಎಂಬವರೂ ಹೋದರು. ಧರ್ಮೋಪದೇಶಕನಾದ ಎಜ್ರನು ಇವರ ಮುಂದಾಳು.
37
ಇವರು ಬುಗ್ಗೆ ಬಾಗಲನ್ನು ಹಾದು ನೆಟ್ಟಗೆ ದಾವೀದನಗರದ ಸೋಪಾನಗಳ ಮಾರ್ಗವಾಗಿ ಗೋಡೆಯನ್ನನುಸರಿಸಿ ಅರಮನೆಯ ಮೇಲಣ ದಿನ್ನೆಯನ್ನು ಹತ್ತಿ ಪೂರ್ವದಿಕ್ಕಿನಲ್ಲಿರುವ ನೀರು ಬಾಗಲಿನವರೆಗೆ ಹೋದರು.
38
ಅವರನ್ನು ಎದುರುಗೊಳ್ಳುವ ಹಾಗೆ ಭಜನಮಂಡಲಿಯ ಎರಡನೆಯ ಗುಂಪಿನವರೂ ನಾನೂ ಉಳಿದ ಅರ್ಧಜನರೂ ಗೋಡೆಯ ಮೇಲೆ ಒಲೆಬುರುಜಿನಿಂದ ಅಗಲಗೋಡೆಯವರೆಗೂ
39
ಅಲ್ಲಿಂದ ಎಫ್ರಾಯೀಮ್ ಬಾಗಲು, ಯೆಷಾನಾ ಬಾಗಲು, ಮೀನು ಬಾಗಲು, ಹನನೇಲ್ ಬುರುಜು, ಹಮ್ಮೇಯಾ ಬುರುಜು ಇವುಗಳ ಮಾರ್ಗವಾಗಿ ಕುರಿಬಾಗಲಿನವರೆಗೂ ಹೋಗಿ ಸೆರೆಮನೆಯ ಬಾಗಲಿನ ಬಳಿಯಲ್ಲಿ ನಿಂತೆವು.
40
ಎರಡು ಭಜನಮಂಡಲಿಯ ಗುಂಪಿನವರೂ ನಾನೂ ನನ್ನ ಜೊತೆಯಲ್ಲಿದ್ದ ಅರ್ಧಮಂದಿ ಅಧಿಕಾರಿಗಳೂ
41
ತುತೂರಿ ಹಿಡಿದಿರುವ ಯಾಜಕರಾದ ಎಲ್ಯಾಕೀಮ್, ಮಾಸೇಯ, ವಿುನ್ಯಾಮೀನ್, ಮೀಕಾಯ, ಎಲ್ಯೋವೇನೈ, ಜೆಕರ್ಯ, ಹನನ್ಯ ಇವರೂ
42
ಮಾಸೇಯ, ಶೆಮಾಯ, ಎಲ್ಲಾಜಾರ್, ಉಜ್ಜೀ, ಯೆಹೋಹಾನಾನ್, ಮಲ್ಕೀಯ, ಏಲಾಮ್, ಎಜೆರ್ ಎಂಬವರೂ ದೇವಾಲಯದ ಬಳಿಯಲ್ಲಿ ನಿಂತಿರಲು ಗಾಯಕರು ಹಾಡತೊಡಗಿದರು. ಇಜ್ರಹ್ಯನು ಇವರ ನಾಯಕನು.
43
ದೇವರು ತಮಗೆ ವಿಶೇಷಾನಂದವನ್ನುಂಟುಮಾಡಿದ್ದರಿಂದ ಜನರು ಆ ದಿನದಲ್ಲಿ ಅನೇಕ ಯಜ್ಞಗಳನ್ನು ಸಮರ್ಪಿಸಿ ತಮ್ಮ ಹೆಂಡತಿ ಮಕ್ಕಳೊಡನೆ ಮಹೋತ್ಸವ ಮಾಡಿದರು. ಯೆರೂಸಲೇವಿುನ ಉತ್ಸವದ ಹರ್ಷಧ್ವನಿಯು ಬಹುದೂರದವರೆಗೂ ಕೇಳಿಸಿತು.
44
ಸೇವೆಮಾಡುತ್ತಿದ್ದ ಯಾಜಕರ ಮತ್ತು ಲೇವಿಯರ ವಿಷಯದಲ್ಲಿ ಯೆಹೂದ್ಯರಿಗೆ ಬಹು ಸಂತೋಷವುಂಟಾದದರಿಂದ ಆ ದಿನದಲ್ಲಿ ಅವರು ಧರ್ಮವಿಧಿಯ ಪ್ರಕಾರ ಆಯಾ ಊರುಗಳ ಭೂವಿುಯಿಂದ ಯಾಜಕರಿಗೂ ಲೇವಿಯರಿಗೂ ಸಿಕ್ಕತಕ್ಕ ಭಾಗಗಳನ್ನು ಅಂದರೆ ದೇವರಿಗೋಸ್ಕರ ಪ್ರತ್ಯೇಕಿಸತಕ್ಕ ವಸ್ತು, ಪ್ರಥಮಫಲ, ದಶಮಾಂಶ ಇವುಗಳನ್ನು ಸಂಗ್ರಹಮಾಡತಕ್ಕ ಕೊಠಡಿಗಳ ಮೇಲೆ ಪಾರುಪತ್ಯಗಾರರನ್ನು ನೇವಿುಸಿದರು.
45
ಆ ಯಾಜಕರೂ ಲೇವಿಯರೂ ತಮ್ಮ ದೇವರ ಸೇವಾಸಂಬಂಧದಲ್ಲಿಯೂ ಶುದ್ಧೀಕರಣಸಂಬಂಧದಲ್ಲಿಯೂ ತಮ್ಮ ಕರ್ತವ್ಯವನ್ನು ಜಾಗರೂಕತೆಯಿಂದ ನೆರವೇರಿಸುತ್ತಿದ್ದರು. ಅವರಂತೆ ಗಾಯಕರೂ ದ್ವಾರಪಾಲಕರೂ ಸಹ ದಾವೀದನಿಂದಲೂ ಅವನ ಮಗನಾದ ಸೊಲೊಮೋನನಿಂದಲೂ ಸ್ಥಾಪಿತವಾದ ಕ್ರಮಾನುಸಾರ ನಡೆಯುತ್ತಿದ್ದರು.
46
ಗಾಯನ ಮಂಡಲಿಗಳೂ ಕೃತಜ್ಞತಾಸ್ತುತಿಕೀರ್ತನೆಗಳ ದೇವಸೇವೆಯೂ ಪೂರ್ವಕಾಲದಲ್ಲಿ ಅಂದರೆ ದಾವೀದನ ಮತ್ತು ಆಸಾಫನ ಕಾಲದಲ್ಲಿ ಇದ್ದವಷ್ಟೆ.
47
ಜೆರುಬ್ಬಾಬೆಲ್, ನೆಹೆಮೀಯ ಇವರ ಕಾಲಗಳಲ್ಲಿ ಎಲ್ಲಾ ಇಸ್ರಾಯೇಲ್ಯರು ಗಾಯಕರಿಗೂ ದ್ವಾರಪಾಲಕರಿಗೂ ದಿನದಿನಕ್ಕೆ ಸಿಕ್ಕತಕ್ಕ ಭಾಗಗಳನ್ನು ಕೊಡುತ್ತಿದ್ದರು. ಇವರು ಅವುಗಳಲ್ಲಿ ದಶಮಾಂಶವನ್ನು ಲೇವಿಯರಿಗೂ ಲೇವಿಯರು ತಮ್ಮದರಲ್ಲಿ ದಶಮಾಂಶವನ್ನು ಆರೋನನ ಮಕ್ಕಳಿಗೂ ಕೊಡುತ್ತಿದ್ದರು.
← Chapter 11
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 13 →
All chapters:
1
2
3
4
5
6
7
8
9
10
11
12
13