bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Nehemiah 7
Nehemiah 7
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 6
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 8 →
1
ಗೋಡೆಯನ್ನು ಕಟ್ಟಿ ತೀರಿಸಿದ ನಂತರ ನಾನು ಕದಗಳನ್ನು ಹಚ್ಚಿಸಿದೆನು; ದ್ವಾರಪಾಲಕರೂ ಗಾಯಕರೂ ಲೇವಿಯರೂ ನೇವಿುಸಲ್ಪಟ್ಟರು.
2
ಆಮೇಲೆ ನನ್ನ ತಮ್ಮನಾದ ಹನಾನಿಗೂ ಬಲು ನಂಬಿಗಸ್ತನೂ ದೇವರಲ್ಲಿ ವಿಶೇಷ ಭಯಭಕ್ತಿಯುಳ್ಳವನೂ ದುರ್ಗಾಧಿಕಾರಿಯೂ ಆದ ಹನನ್ಯನಿಗೂ ಯೆರೂಸಲೇವಿುನ ಮೇಲ್ವಿಚಾರಣೆಯನ್ನು ಒಪ್ಪಿಸಿ
3
ಅವರಿಗೆ - ಬಿಸಿಲು ಬಲಿಯುವದಕ್ಕಿಂತ ಮೊದಲು ಯೆರೂಸಲೇವಿುನ ಬಾಗಲುಗಳನ್ನು ತೆರೆಯಬಾರದು; ಕಾವಲುಗಾರರು ಇನ್ನೂ ಇರುವಷ್ಟರಲ್ಲೇ ಕದಗಳನ್ನು ಮುಚ್ಚಿ ಭದ್ರಪಡಿಸಬೇಕು. ಇದಲ್ಲದೆ ಯೆರೂಸಲೇವಿುನ ನಿವಾಸಿಗಳೊಳಗೆ ಕಾವಲುಗಾರರನ್ನು ಗೊತ್ತುಮಾಡಿರಿ. ಅವರಲ್ಲಿ ಪ್ರತಿಯೊಬ್ಬನನ್ನು ಅವನವನ ಮನೆಯ ಎದುರಿನಲ್ಲಿ ಕಾವಲಿರುವಂತೆ ನೇವಿುಸಬೇಕು ಎಂದು ಆಜ್ಞಾಪಿಸಿದೆನು.
4
ಪಟ್ಟಣವು ಎಲ್ಲಾ ಕಡೆಗಳಲ್ಲಿ ವಿಸ್ತಾರವಾಗಿದ್ದರೂ ಅದರೊಳಗೆ ಬಹು ಸ್ವಲ್ಪಜನರಿದ್ದರು. ಮನೆಗಳನ್ನು ಇನ್ನೂ ಕಟ್ಟಿರಲಿಲ್ಲ.
5
ಹೀಗಿರಲಾಗಿ ನಾನು ನನ್ನ ದೇವರ ಪ್ರೇರಣೆಯಿಂದ ಶ್ರೀಮಂತರನ್ನೂ ಅಧಿಕಾರಿಗಳನ್ನೂ ಸಾಧಾರಣಜನರನ್ನೂ ಖಾನೇಷುಮಾರಿಗೋಸ್ಕರ ಕೂಡಿಸಿದೆನು. ಆಗ [ಯೆರೂಸಲೇವಿುಗೆ] ಮೊದಲು ಬಂದವರ ಹೆಸರುಗಳ ಪಟ್ಟಿಯು ನನಗೆ ಸಿಕ್ಕಿತು. ಅದರಲ್ಲಿ ಬರೆದಿದ್ದದ್ದೇನಂದರೆ -
6
ಸೆರೆಯಿಂದ ತಿರಿಗಿ ಬಂದ [ಯೆಹೂದ] ಸಂಸ್ಥಾನದವರ ಖಾನೇಷುಮಾರಿ. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಂದ ಸೆರೆ ಒಯ್ಯಲ್ಪಟ್ಟವರಲ್ಲಿ ಯೆರೂಸಲೇವಿುಗೂ ಯೆಹೂದಪ್ರಾಂತದ ಸ್ವಂತ ಪಟ್ಟಣಗಳಿಗೂ
7
ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ವಿುಸ್ಪೆರೆತ್, ಬಿಗ್ವೈ, ನೆಹೂಮ್, ಬಾಣ ಎಂಬ ನಾಯಕರೊಡನೆ ತಿರಿಗಿ ಬಂದವರು ಯಾರಂದರೆ -
8
ಪರೋಷಿನವರು 2172
9
ಶೆಫಟ್ಯನವರು 372
10
ಆರಹನವರು 652
11
ಪಹತ್ಮೋವಾಬಿನವರಾದ ಯೇಷೂವ ಮತ್ತು ಯೋವಾಬ್ ಸಂತಾನದವರು 2818
12
ಏಲಾವಿುನವರು 1254
13
ಜತ್ತೂವಿನವರು 845
14
ಜಕ್ಕೈಯವರು 760
15
ಬಿನ್ನೂಯವರು 648
16
ಬೇಬೈಯವರು 628
17
ಅಜ್ಗಾದಿನವರು 2322
18
ಅದೋನೀಕಾವಿುನವರು 667
19
ಬಿಗ್ವೈಯವರು 2067
20
ಆದೀನನವರು 655
21
ಆಟೇರಿನವರಾದ ಹಿಜ್ಕೀಯನ ಸಂತಾನದವರು 98
22
ಹಾಷುವಿುನವರು 328
23
ಬೇಚೈಯವರು 324
24
ಹಾರಿಫಿನವರು 112
25
ಗಿಬ್ಯೋನಿನವರು 95
26
ಬೇತ್ಲೆಹೇಮ್ ನೆಟೋಫ ಊರುಗಳವರು 188
27
ಅನಾತೋತ್ ಊರಿನವರು 128
28
ಬೇತಜ್ಮಾವೇತಿನವರು 42
29
ಕಿರ್ಯತ್ಯಾರೀಮ್ ಕೆಫೀರಾ ಬೇರೋತ್ ಊರುಗಳವರು 743
30
ರಾಮಾ ಗೆಬ ಊರುಗಳವರು 621
31
ವಿುಕ್ಮಾಸಿನವರು 122
32
ಬೇತೇಲ್ ಆಯಿ ಎಂಬ ಊರುಗಳವರು 123
33
ಎರಡನೆಯ ನೆಬೋವಿನವರು 52
34
ಎರಡನೆಯ ಏಲಾವಿುನವರು 1254
35
ಹಾರಿಮನವರು 320
36
ಯೆರಿಕೋವಿನವರು 345
37
ಲೋದ್, ಹಾದೀದ್, ಓನೋ ಎಂಬ ಊರುಗಳವರು 721
38
ಸೆನಾಹನವರು 3930
39
ಯಾಜಕರಲ್ಲಿ - ಯೆದಾಯನವರಾದ ಯೇಷೂವನ ಮನೆಯವರು 973
40
ಇಮ್ಮೇರನವರು 1052
41
ಪಷ್ಹೂರನವರು 1247
42
ಹಾರಿಮನವರು 1017
43
ಲೇವಿಯರಲ್ಲಿ - ಹೋದವ್ಯನವರಾದ ಯೇಷೂವ, ಕದ್ಮೀಯೇಲ್ ಇವರ ಸಂತಾನದವರು 74
44
ಗಾಯಕರಲ್ಲಿ - ಆಸಾಫ್ಯರು 148
45
ದ್ವಾರಪಾಲಕರಲ್ಲಿ - ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟಾ, ಶೋಬೈ ಇವರ ಸಂತಾನದವರು ಒಟ್ಟು 138
46
ದೇವಸ್ಥಾನದಾಸರಲ್ಲಿ - ಜೀಹ, ಹಸೂಫ ಟಬ್ಬಾವೋತ್,
47
ಕೇರೋಸ್, ಸೀಯ, ಪಾದೋನ್, ಲೆಬಾನ,
48
ಹಗಾಬ, ಸಲ್ಮೈ, ಹಾನಾನ್, ಗಿದ್ದೇಲ್,
50
ಗಹರ್, ರೆವಾಯ, ರೆಚೀನ್, ನೆಕೋದ,
52
ಗಜ್ಜಾಮ್, ಉಜ್ಜ, ಪಾಸೇಹ, ಬೇಸೈ, ಮೆಯನೀಮ್,
53
ನೆಫೀಷೆಸೀಮ್, ಬಕ್ಬೂಕ್, ಹಕ್ಕೂಫ, ಹರ್ಹೂರ್,
54
ಬಚ್ಲೂತ್, ಮೆಹೀದ, ಹರ್ಷ, ಬರ್ಕೋಸ್, ಸೀಸೆರ,
56
ತೆಮಹ, ನೆಚೀಹ, ಹಟೀಫ ಇವರ ಸಂತಾನದವರೂ.
57
ಸೊಲೊಮೋನನ ದಾಸರಲ್ಲಿ - ಸೋಟೈ,
58
ಸೋಫೆರೆತ್, ಪೆರೀದ, ಯಾಲ, ದರ್ಕೋನ್,
59
ಗಿದ್ದೇಲ್, ಶೆಫಟ್ಯ, ಹಟ್ಟೀಲ್, ಪೋಕೆರೆತ್, ಹಚ್ಚೆಬಾಯೀಮ್, ಆಮೋನ್ ಇವರ ಸಂತಾನದವರೂ.
60
ಎಲ್ಲಾ ದೇವಸ್ಥಾನದಾಸರೂ ಸೊಲೊಮೋನನ ದಾಸರೂ ಒಟ್ಟು 392 ಮಂದಿ.
61
ತೇಲ್ಮೆಲಹ, ತೇಲ್ಹರ್ಷ, ಕೆರೂಬದ್ದೋನ್, ಇಮ್ಮೇರ್ ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿ ತಾವು
62
ಇಸ್ರಾಯೇಲ್ಯರೆಂಬದನ್ನು ಸ್ಥಾಪಿಸಲಾರದವರಾದ ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು 642 ಮಂದಿ.
63
ಯಾಜಕರಲ್ಲಿ ಹೋಬಾಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು ತಮ್ಮ ವಂಶಾವಳಿಯನ್ನು ತೋರಿಸಲಾರದೆ ಹೋದರು. (ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣು ಮಕ್ಕಳಲ್ಲೊಬ್ಬಾಕೆಯನ್ನು ಮದುವೆಮಾಡಿಕೊಂಡು ಅವನ ಹೆಸರನ್ನೂ ಇಟ್ಟುಕೊಂಡಿದ್ದನು.)
64
ಇವರು ತಮ್ಮ ವಂಶಾವಳಿ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅಶುದ್ಧರೆಂದು ಯಾಜಕೋದ್ಯೋಗದಿಂದ ತಳ್ಳಲ್ಪಟ್ಟರು.
65
ಊರೀಮ್ ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳಲ್ಲಿ ಭೋಜನಮಾಡಬಾರದೆಂಬದಾಗಿ ದೇಶಾಧಿಪತಿಯು ತೀರ್ಪು ಮಾಡಿದನು.
66
ಸರ್ವಸಮೂಹದವರ ಒಟ್ಟು ಸಂಖ್ಯೆಯು ನಾಲ್ವತ್ತೆರಡು ಸಾವಿರದ ಮುನ್ನೂರರುವತ್ತು.
67
ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ದಾಸದಾಸಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ. ಅವರ ಗಾಯಕರೂ ಗಾಯಕಿಗಳೂ ಇನ್ನೂರ ನಾಲ್ವತ್ತೈದು ಮಂದಿ.
68
ಅವರಿಗೆ ಏಳುನೂರ ಮೂವತ್ತಾರು ಕುದುರೆಗಳೂ ಇನ್ನೂರ ನಾಲ್ವತ್ತೈದು ಹೇಸರಕತ್ತೆಗಳೂ
69
ನಾನೂರ ಮೂವತ್ತೈದು ಒಂಟೆಗಳೂ ಆರು ಸಾವಿರದ ಏಳುನೂರಿಪ್ಪತ್ತು ಕತ್ತೆಗಳೂ ಇದ್ದವು.
70
ಗೋತ್ರಪ್ರಧಾನರಲ್ಲಿ ಕೆಲವರು ಕೆಲಸಕ್ಕೋಸ್ಕರ ದ್ರವ್ಯಸಹಾಯಮಾಡಿದರು. ತಿರ್ಷಾತಾ ಅನ್ನಿಸಿಕೊಳ್ಳುವ ದೇಶಾಧಿಪತಿಯು ಭಂಡಾರಕ್ಕೆ ಕೊಟ್ಟದ್ದು - ಸಾವಿರ ಬಂಗಾರದ ಪವನುಗಳು, ಐವತ್ತು ಬೋಗುಣಿಗಳು, ಐನೂರಮೂವತ್ತು ಯಾಜಕವಸ್ತ್ರಗಳು.
71
ಬೇರೆ ಕೆಲವು ಮಂದಿ ಗೋತ್ರ ಪ್ರಧಾನರು ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು - ಇಪ್ಪತ್ತು ಸಾವಿರ ಬಂಗಾರದ ಪವನುಗಳು, ಒಂದು ಲಕ್ಷ ಹತ್ತು ಸಾವಿರ ತೊಲೆ ಬೆಳ್ಳಿ;
72
ಉಳಿದ ಜನರು ಕೊಟ್ಟದ್ದು - ಇಪ್ಪತ್ತು ಸಾವಿರ ಬಂಗಾರದ ಪವನುಗಳು, ಒಂದು ಲಕ್ಷ ತೊಲೆ ಬೆಳ್ಳಿ, ಅರುವತ್ತೇಳು ಯಾಜಕವಸ್ತ್ರಗಳು.
73
ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ಸಾಧಾರಣಜನರಿಗೆ ಸೇರಿದವರು, ದೇವಸ್ಥಾನದಾಸರು ಅಂತೂ ಇಸ್ರಾಯೇಲ್ಯರೆಲ್ಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.
← Chapter 6
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 8 →
All chapters:
1
2
3
4
5
6
7
8
9
10
11
12
13