bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Nehemiah 6
Nehemiah 6
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 5
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 7 →
1
ನಾನು ಗೋಡೆಯನ್ನು ಕಟ್ಟಿಸಿ ತೀರಿಸಿ ಬಾಗಲುಗಳಿಗೆ ಕದಗಳನ್ನು ಇನ್ನೂ ಹಚ್ಚಿಸದಿದ್ದರೂ ಎಲ್ಲಾ ಸಂದುಗಳನ್ನು ಕೂಡಿಸಿದ ಸಂಗತಿಯು ಸನ್ಬಲ್ಲಟ್, ಟೋಬೀಯ, ಅರಬಿಯನಾದ ಗೆಷೆಮ್ ಇವರಿಗೂ
2
ನಮ್ಮ ಬೇರೆ ವಿರೋಧಿಗಳಿಗೂ ಗೊತ್ತಾದಾಗ ಅವರಲ್ಲಿ ಸನ್ಬಲ್ಲಟ್ ಗೆಷೆಮರು ನನಗೆ - ಓನೋ ತಗ್ಗಿನ ಹಕ್ಕೆಫಿರೀವಿುನಲ್ಲಿ ಒಬ್ಬರನ್ನೊಬ್ಬರು ಎದುರುಗೊಳ್ಳೋಣ ಬಾ ಎಂದು ಹೇಳಿಕಳುಹಿಸಿದರು.
3
ಅವರು ನನಗೆ ಕೇಡು ಬಗೆಯುವವರು ಎಂದು ತಿಳಿದು ನಾನು ದೂತರ ಮುಖಾಂತರವಾಗಿ ಅವರಿಗೆ - ನನಗೆ ದೊಡ್ಡ ಜಂಬರವುಂಟು; ಅದನ್ನು ಬಿಟ್ಟು ನಿಮ್ಮ ಬಳಿಗೆ ಬಂದರೆ ಕೆಲಸವು ನಿಂತುಹೋಗುವದು; ನಾನು ಬರಲಾರೆನು ಎಂದು ಹೇಳಿಸಿದೆನು.
4
ಅವರು ನಾಲ್ಕು ಸಾರಿ ನನಗೆ ಅದೇ ಪ್ರಕಾರ ಹೇಳಿ ಕಳುಹಿಸಿದರೂ ನಾನು ಅದೇ ಉತ್ತರಕೊಟ್ಟೆನು.
5
ಐದನೆಯ ಸಾರಿ ಸನ್ಬಲ್ಲಟನು ಅದೇ ಉದ್ದೇಶದಿಂದ ತನ್ನ ಸ್ವಂತ ಸೇವಕನ ಮುಖಾಂತರವಾಗಿ ಮುಚ್ಚದಿರುವ ಒಂದು ಪತ್ರವನ್ನು ಕಳುಹಿಸಿದನು.
6
ಅದರಲ್ಲಿ - ಗೆಷೆಮ್ ಎಂಬವನು ನನಗೆ ತಿಳಿಸಿದ ಪ್ರಕಾರ ನೀನೂ ಯೆಹೂದ್ಯರೂ ತಿರುಗಿಬೀಳಬೇಕೆಂದಿದ್ದೀರಿ; ಆದದರಿಂದಲೇ ನೀನು ಆ ಗೋಡೆಯನ್ನು ಕಟ್ಟಿಸುತ್ತೀ. ಮತ್ತು ನೀನು ಅವರ ಅರಸನಾಗುವಿಯೆಂಬ ಸುದ್ದಿಯು ಜನರಲ್ಲಿ ಹಬ್ಬಿರುತ್ತದೆ.
7
ಇದಲ್ಲದೆ ಯೆಹೂದದಲ್ಲಿ ಒಬ್ಬ ಅರಸನಿರುತ್ತಾನೆಂದು ನಿನ್ನನ್ನು ಕುರಿತು ಯೆರೂಸಲೇವಿುನಲ್ಲಿ ಪ್ರಕಟಿಸುವದಕ್ಕೋಸ್ಕರ ಪ್ರವಾದಿಗಳನ್ನು ನೇವಿುಸಿದ್ದಿ ಎಂಬದಾಗಿ ಹೇಳುತ್ತಾರೆ. ಈ ಸುದ್ದಿ ರಾಜನಿಗೂ ಮುಟ್ಟುವದು; ಆದದರಿಂದ ಕೂಡಿ ಮಾತಾಡೋಣ ಬಾ ಎಂದು ಬರೆದಿತ್ತು.
8
ಅದಕ್ಕೆ - ನೀನು ಬರೆದಂಥದು ಏನೂ ನಡೆದಿಲ್ಲ; ಅದನ್ನು ನೀನೇ ನಿನ್ನ ಮನಸ್ಸಿನಲ್ಲಿ ಕಲ್ಪಿಸಿಕೊಂಡಿದ್ದಿ ಎಂದು ಹೇಳಿ ಕಳುಹಿಸಿದೆನು.
9
ಹೀಗೆ ಎಲ್ಲರೂ - ಇವರ ಕೈಗಳು ಜೋಲು ಬಿದ್ದು ಕೆಲಸವನ್ನು ತೀರಿಸದೆ ಬಿಡಲಿ ಅಂದುಕೊಂಡು ನಮ್ಮನ್ನು ಹೆದರಿಸುವದಕ್ಕೆ ಪ್ರಯತ್ನಿಸಿದರು. [ನನ್ನ ದೇವರೇ,] ನನ್ನ ಕೈಗಳನ್ನು ಬಲಪಡಿಸು.
10
ಒಂದು ದಿವಸ ನಾನು ಮೆಹೇಟಬೇಲನ ಮೊಮ್ಮಗನೂ ದೆಲಾಯನ ಮಗನೂ ಆದ ಶೆಮಾಯನ ಮನೆಗೆ ಹೋದೆನು. ಅವನು ಅಲ್ಲಿ ಅಡಗಿಕೊಂಡಿದ್ದನು. ಅವನು ನನಗೆ - ನಿನ್ನನ್ನು ಕೊಲ್ಲುವದಕ್ಕೆ ಬರುತ್ತಾರೆ, ಈ ರಾತ್ರಿಯೇ ಬರುತ್ತಾರೆ. ಆದದರಿಂದ ನಾವಿಬ್ಬರೂ ದೇವಾಲಯಕ್ಕೆ ಹೋಗಿ ಪವಿತ್ರಸ್ಥಾನವನ್ನು ಪ್ರವೇಶಿಸಿ ಅದರ ಕದಗಳನ್ನು ಮುಚ್ಚಿಕೊಳ್ಳೋಣ ಬಾ ಎಂದು ಹೇಳಿದನು.
11
ನಾನು - ನನ್ನಂಥ ಪುರುಷನು ಓಡಿಹೋಗುವದು ಯೋಗ್ಯವೋ? ಇದಲ್ಲದೆ ನನ್ನಂಥವನು ಪ್ರಾಣ ರಕ್ಷಣೆಗಾಗಿ ಪವಿತ್ರಸ್ಥಾನವನ್ನು ಪ್ರವೇಶಿಸುವನೇ? ನಾನು ಬರುವದಿಲ್ಲ ಎಂದು ಉತ್ತರಕೊಟ್ಟೆನು.
12
ನಾನು ಸೂಕ್ಷ್ಮವಾಗಿ ವಿಚಾರಮಾಡಿದಾಗ ನನ್ನ ವಿಷಯವಾಗಿ ಆ ಕಾಲಜ್ಞಾನವಚನವನ್ನು ಉಚ್ಚರಿಸುವದಕ್ಕೆ ಇವನನ್ನು ಪ್ರೇರಿಸಿದವನು ದೇವರಲ್ಲ, ಟೋಬೀಯನೂ ಸನ್ಬಲ್ಲಟನೂ ಇವನಿಗೆ ಲಂಚಕೊಟ್ಟು ಹಾಗೆ ಹೇಳಿಸಿದರು ಎಂದು ನನಗೆ ಗೊತ್ತಾಯಿತು.
13
ನಾನು ಅಂಜಿಕೊಂಡು ಇವನ ಮಾತಿನಂತೆ ನಡೆದು ದೋಷಿಯಾಗಿ ತಮ್ಮ ನಿಂದೆಗೂ ಕೆಟ್ಟ ಹೆಸರಿಗೂ ಒಳಗಾಗಲಿ ಎಂದು ಅವರು ಇವನಿಗೆ ಲಂಚಕೊಟ್ಟಿದ್ದರು.
14
ನನ್ನ ದೇವರೇ, ಟೋಬೀಯ ಸನ್ಬಲ್ಲಟರು ಮಾಡಿದ ಈ ದುಷ್ಕೃತ್ಯಗಳು ನಿನ್ನ ನೆನಪಿನಲ್ಲಿರಲಿ; ನನ್ನನ್ನು ಹೆದರಿಸುವದಕ್ಕೆ ಪ್ರಯತ್ನಿಸಿದ ಪ್ರವಾದಿನಿಯಾದ ನೋವದ್ಯ ಮುಂತಾದ ಪ್ರವಾದಿಗಳನ್ನು ಮರೆಯಬೇಡ.
15
ಗೋಡೆಯು ಭಾದ್ರಪದ ಮಾಸದ ಇಪ್ಪತ್ತೈದನೆಯ ದಿನದಲ್ಲಿ ತೀರಿತು. ಅದನ್ನು ಕಟ್ಟುವದಕ್ಕೆ ಒಟ್ಟು ಐವತ್ತೆರಡು ದಿನಗಳು ಹಿಡಿದವು.
16
ಈ ಸುದ್ದಿಯು ನಮ್ಮ ವಿರೋಧಿಗಳಾದ ಸುತ್ತಣ ಎಲ್ಲಾ ಜನಾಂಗಗಳವರಿಗೆ ಮುಟ್ಟಿದಾಗ ಅವರು ಭಯವುಳ್ಳವರಾಗಿ ಸೊಕ್ಕನ್ನು ಬಿಟ್ಟು ಬಹಳ ಮನಗುಂದಿದವರಾದರು. ಈ ಕಾರ್ಯವು ನಮ್ಮ ದೇವರಿಂದಲೇ ಪೂರೈಸಿತು ಎಂದು ಅವರಿಗೆ ಮಂದಟ್ಟಾಯಿತು.
17
ಅದೇ ಸಮಯದಲ್ಲಿ ಯೆಹೂದ್ಯ ಶ್ರೀಮಂತರಿಗೂ ಟೋಬೀಯನಿಗೂ ಬಹಳ ಪತ್ರವ್ಯವಹಾರ ನಡೆಯುತ್ತಿತ್ತು.
18
ಯಾಕಂದರೆ ಅವನು ಆರಹನ ಮಗನಾದ ಶೆಕನ್ಯನ ಅಳಿಯನೂ ಯೆಹೋಹಾನಾನನೆಂಬ ಅವನ ಮಗನು ಬೆರೆಕ್ಯನ ಮಗನಾದ ಮೆಷುಲ್ಲಾಮನ ಮಗಳನ್ನು ಮದುವೆಮಾಡಿಕೊಂಡವನೂ ಆಗಿದ್ದದರಿಂದ ಯೆಹೂದ್ಯರಲ್ಲಿ ಅನೇಕರು ಅವನಿಗೆ ಪ್ರಮಾಣಮಾಡಿ ವಶರಾಗಿದ್ದರು.
19
ಅವರು ಅವನ ಒಳ್ಳೆತನವನ್ನೇ ನನ್ನ ಮುಂದೆ ವರ್ಣಿಸುತ್ತಾ ನನ್ನ ಮಾತುಗಳನ್ನು ಅವನಿಗೆ ತಿಳಿಸುತ್ತಾ ಇದ್ದರು. ಟೋಬೀಯನೂ ನನ್ನಲ್ಲಿ ಭಯಹುಟ್ಟಿಸುವದಕ್ಕೋಸ್ಕರ ನನಗೆ ಪತ್ರಗಳನ್ನು ಕಳುಹಿಸುತ್ತಿದ್ದನು.
← Chapter 5
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 7 →
All chapters:
1
2
3
4
5
6
7
8
9
10
11
12
13