bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Numbers 20
Numbers 20
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 19
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 21 →
1
ಮೊದಲನೆಯ ತಿಂಗಳಲ್ಲಿ ಇಸ್ರಾಯೇಲ್ಯರ ಸರ್ವಸಮೂಹದವರು ಚಿನ್ ಎಂಬ ಅರಣ್ಯಕ್ಕೆ ಬಂದು ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ವಿುರ್ಯಾಮಳು ತೀರಿಹೋದಳು; ಆಕೆಯ ಶವವನ್ನು ಸಮಾಧಿಮಾಡಿದರು.
2
ಸಮೂಹದವರಿಗೆ ನೀರು ಇಲ್ಲದ ಕಾರಣ ಅವರು ಮೋಶೆ ಆರೋನರಿಗೆ ವಿರೋಧವಾಗಿ ಕೂಡಿಕೊಂಡು ಮೋಶೆಯ ಸಂಗಡ ವಿವಾದಿಸುವವರಾಗಿ -
3
ನಮ್ಮ ಜನರು ಯೆಹೋವನ ಸನ್ನಿಧಿಯಲ್ಲಿ ಸತ್ತಾಗ ನಾವೂ ಸತ್ತುಹೋಗಿದ್ದರೆ ಎಷ್ಟೋ ಮೇಲಾಗಿತ್ತು ಎಂದೂ
4
ನೀವು ಯೆಹೋವನ ಸಭೆಯವರಾದ ನಮ್ಮನ್ನೂ ನಮ್ಮ ಪಶುಗಳನ್ನೂ ಈ ಮರಳುಕಾಡಿಗೆ ಕರಕೊಂಡು ಬಂದು ಯಾಕೆ ಸಾಯಿಸುತ್ತೀರಿ?
5
ನಮ್ಮನ್ನು ಐಗುಪ್ತದೇಶದಿಂದ ಬರಮಾಡಿ ಈ ಕೆಟ್ಟ ಸ್ಥಳಕ್ಕೆ ಯಾಕೆ ಕರಕೊಂಡು ಬಂದಿರಿ? ಈ ನೆಲದಲ್ಲಿ ಯಾವ ಧಾನ್ಯವೂ ಬೆಳೆಯುವದಿಲ್ಲ, ಮತ್ತು ಅಂಜೂರವಿಲ್ಲ, ದ್ರಾಕ್ಷೆಯಿಲ್ಲ, ದಾಳಿಂಬವಿಲ್ಲ, ಕುಡಿಯುವದಕ್ಕೆ ನೀರಾದರೂ ಇಲ್ಲ ಎಂದೂ ಹೇಳುತ್ತಿದ್ದರು.
6
ಮೋಶೆ ಆರೋನರು ಜನಸಮೂಹದ ಎದುರಿನಿಂದ ದೇವದರ್ಶನದ ಗುಡಾರದ ಬಾಗಲಿಗೆ ಹೋಗಿ ಅಡ್ಡಬೀಳಲಾಗಿ ಯೆಹೋವನ ತೇಜಸ್ಸು ಅವರಿಗೆ ಕಾಣಿಸಿತು.
7
ಆಗ ಯೆಹೋವನು ಮೋಶೆಗೆ - ನೀನು ಕೋಲನ್ನು ಕೈಯಲ್ಲಿ ಹಿಡಿದು ನಿನ್ನ ಅಣ್ಣನಾದ ಆರೋನನ ಜೊತೆಯಲ್ಲಿ ಸಮೂಹದವರನ್ನು ಕೂಡಿಸಿಕೊಂಡು ಅವರ ಎದುರಿನಲ್ಲೇ ಆ ಕಡಿದಾದ ಬಂಡೆಗೆ ನೀರು ಕೊಡಬೇಕೆಂದು ಆಜ್ಞಾಪಿಸು. ಅದರೊಳಗಿಂದ ನೀರು ಹೊರಟುಬರುವದು; ನೀನು ಸಮೂಹದವರಿಗೂ ಅವರ ಪಶುಗಳಿಗೂ ನೀರನ್ನು ಕುಡಿಯಕೊಡಬಹುದು ಎಂದು ಹೇಳಿದನು.
9
ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಆ ಕೋಲನ್ನು ಆತನ ಸನ್ನಿಧಿಯಿಂದ ತೆಗೆದುಕೊಂಡು ಹೋಗಿ
10
ಆರೋನನ ಜೊತೆಯಲ್ಲಿ ಸಮೂಹದವರನ್ನು ಆ ಕಡಿದಾದ ಬಂಡೆಗೆದುರಾಗಿ ಕೂಡಿಸಿ ಅವರಿಗೆ - ದ್ರೋಹಿಗಳೇ, ಕೇಳಿರಿ; ನಾವು ಈ ಬಂಡೆಯೊಳಗಿಂದಲೇ ನಿಮಗೋಸ್ಕರ ನೀರನ್ನು ಬರಮಾಡಬೇಕೋ ಎಂದು ಹೇಳಿ
11
ಕೈಯೆತ್ತಿ ತನ್ನ ಕೈಯಲ್ಲಿರುವ ಕೋಲಿನಿಂದ ಆ ಬಂಡೆಯನ್ನು ಎರಡು ಸಾರಿ ಹೊಡೆದನು. ಆಗ ನೀರು ಪ್ರವಾಹವಾಗಿ ಹೊರಟಿತು; ಸಮೂಹದವರೂ ಅವರ ಪಶುಗಳೂ ಕುಡಿದರು.
12
ಆಗ ಯೆಹೋವನು ಮೋಶೆ ಆರೋನರಿಗೆ - ನೀವು ನನ್ನನ್ನು ನಂಬದವರಾಗಿ ಇಸ್ರಾಯೇಲ್ಯರ ಎದುರಿನಲ್ಲಿ ನನ್ನ ಗೌರವವನ್ನು ಕಾಪಾಡದೆಹೋದದರಿಂದ ಈ ಸಮೂಹದವರನ್ನು ನಾನು ಅವರಿಗೆ ವಾಗ್ದಾನ ಮಾಡಿದ ದೇಶದೊಳಕ್ಕೆ ನೀವು ಕರಕೊಂಡು ಹೋಗಕೂಡದು ಎಂದು ಹೇಳಿದನು.
13
ಇಸ್ರಾಯೇಲ್ಯರು ಅಲ್ಲಿ ಯೆಹೋವನ ಸಂಗಡ ವಿವಾದಮಾಡಿದ್ದರಿಂದ ಆ ನೀರಿನ ಪ್ರವಾಹಕ್ಕೆ ಮೆರೀಬಾ ಎಂದು ಹೆಸರಾಯಿತು. ಅದಲ್ಲದೆ ಅಲ್ಲಿ ಯೆಹೋವನು ತನ್ನ ಮಹಾಮಹಿಮೆಯನ್ನು ತೋರ್ಪಡಿಸಿದನು.
14
ಮೋಶೆ ಕಾದೇಶಿನಿಂದ ಎದೋಮ್ಯರ ಅರಸನ ಬಳಿಗೆ ದೂತರನ್ನು ಕಳುಹಿಸಿ - ತಮ್ಮ ಸಂಬಂಧಿಕರಾದ ಇಸ್ರಾಯೇಲ್ಯರು ಕೇಳಿಕೊಳ್ಳುವದೇನಂದರೆ - ನಮಗೆ ಸಂಭವಿಸಿದ ಎಲ್ಲಾ ಕಷ್ಟವನ್ನು ತಾವು ಕೇಳಿದ್ದೀರಷ್ಟೆ.
15
ನಮ್ಮ ಪಿತೃಗಳು ಐಗುಪ್ತದೇಶಕ್ಕೆ ಇಳಿದು ಹೋದದ್ದೂ ನಾವು ಅಲ್ಲಿ ಬಹುದಿವಸ ವಾಸವಾಗಿದ್ದದ್ದೂ ಐಗುಪ್ತ್ಯರು ನಮ್ಮನ್ನೂ ನಮ್ಮ ಪಿತೃಗಳನ್ನೂ ಉಪದ್ರವಪಡಿಸಿದ್ದೂ
16
ನಾವು ಯೆಹೋವನಿಗೆ ಮೊರೆಯಿಡಲಾಗಿ ಆತನು ನಮ್ಮ ಪ್ರಾರ್ಥನೆಯನ್ನು ಕೇಳಿ ದೂತನನ್ನು ಕಳುಹಿಸಿ ನಮ್ಮನ್ನು ಐಗುಪ್ತದೇಶದಿಂದ ಬಿಡುಗಡೆಮಾಡಿಸಿದ್ದೂ ಇದನ್ನೆಲ್ಲಾ ತಾವು ತಿಳಿದೇ ಇದ್ದೀರಷ್ಟೆ. ಈಗ ನಾವು ತಮ್ಮ ರಾಜ್ಯದ ಕಟ್ಟ ಕಡೆಯ ಹತ್ತಿರವಿರುವ ಕಾದೇಶೆಂಬ ಊರಲ್ಲಿದ್ದೇವೆ.
17
ತಮ್ಮ ದೇಶವನ್ನು ದಾಟಿಹೋಗುವದಕ್ಕೆ ನಮಗೆ ಅಪ್ಪಣೆಯಾಗಬೇಕೆಂದು ಬೇಡಿಕೊಳ್ಳುತ್ತೇವೆ. ನಾವು ಹೊಲಗಳಲ್ಲಿ ಯಾದರೂ ದ್ರಾಕ್ಷೇತೋಟಗಳಲ್ಲಿಯಾದರೂ ಹೋಗುವದಿಲ್ಲ; ಬಾವಿಗಳ ನೀರನ್ನು ಕುಡಿಯುವದಿಲ್ಲ; ರಾಜ ಮಾರ್ಗದಲ್ಲಿಯೇ ನಡೆದು ತಮ್ಮ ದೇಶದ ಮೇರೆಗಳನ್ನು ದಾಟಿದ ತನಕ ಬಲಕ್ಕೂ ಎಡಕ್ಕೂ ತಿರುಗುವದಿಲ್ಲ ಎಂದು ಹೇಳಿಸಿದನು.
18
ಆದರೆ ಎದೋಮ್ಯರು - ನಮ್ಮ ದೇಶವನ್ನು ನೀವು ದಾಟಿ ಹೋಗಕೂಡದು; ದಾಟುವದಾದರೆ ನಾವು ನಿಮ್ಮ ಮೇಲೆ ಯುದ್ಧಕ್ಕೆ ಬರುತ್ತೇವೆ ಎಂದು ಉತ್ತರ ಕೊಟ್ಟರು.
19
ಅದಕ್ಕೆ ಇಸ್ರಾಯೇಲ್ಯರು - ನಾವು ರಾಜಮಾರ್ಗದಲ್ಲಿಯೇ ಹೋಗುವೆವು; ನಾವೂ ನಮ್ಮ ಪಶುಗಳೂ ನಿಮ್ಮ ನೀರನ್ನು ಕುಡಿದರೆ ಅದರ ಬೆಲೆಕೊಡುವೆವು; ಬೇರೆ ಏನೂ ನಮಗೆ ಬೇಡ; ಕಾಲ್ನಡೆಯಾಗಿ ದಾಟಿ ಹೋಗುವದಕ್ಕೆ ನಮಗೆ ಅಪ್ಪಣೆಯಾಗಬೇಕು ಎಂದು ಹೇಳಿದರು.
20
ಆದರೆ ಎದೋಮ್ಯರು - ನೀವು ದಾಟಿಲೇಬಾರದು ಎಂದು ಉತ್ತರ ಕೊಟ್ಟು ಬಹುಜನ ಕೂಡಿಕೊಂಡು ಬಲಾತ್ಕಾರದಿಂದ ಎದುರಿಸುವವರಾಗಿ ಬಂದರು.
21
ಎದೋಮ್ಯರು ಇಸ್ರಾಯೇಲ್ಯರಿಗೆ ತಮ್ಮ ಪ್ರದೇಶದೊಳಗೆ ದಾಟಿಹೋಗುವದಕ್ಕೆ ಅಪ್ಪಣೆಕೊಡದೆಹೋದದರಿಂದ ಇಸ್ರಾಯೇಲ್ಯರು ಅವರ ಕಡೆಯಿಂದ ತಿರುಗಿಕೊಂಡು [ಬೇರೊಂದು ಮಾರ್ಗವಾಗಿ] ಹೊರಟರು.
22
ಆಗ ಇಸ್ರಾಯೇಲ್ಯರ ಸರ್ವಸಮೂಹದವರು ಕಾದೇಶಿನಿಂದ ಹೊರಟು ಹೋರ್ ಎಂಬ ಬೆಟ್ಟಕ್ಕೆ ಬಂದರು.
23
ಯೆಹೋವನು ಎದೋಮ್ಯರ ದೇಶದ ಮೇರೆಯ ಹತ್ತಿರವಿರುವ ಹೋರ್ ಎಂಬ ಬೆಟ್ಟದ ಬಳಿಯಲ್ಲಿ ಮೋಶೆ ಆರೋನರ ಸಂಗಡ ಮಾತಾಡಿ -
24
ಆರೋನನು ದೇಹವನ್ನು ಬಿಟ್ಟು ತನ್ನ ಪಿತೃಗಳ ಬಳಿಗೆ ಸೇರಬೇಕು. ನೀವಿಬ್ಬರೂ ಮೆರೀಬಾ ಪ್ರವಾಹದ ಹತ್ತಿರ ನನ್ನ ಮಾತಿಗೆ ವಿರೋಧವಾಗಿ ತಿರುಗಿಬಿದ್ದದರಿಂದ ನಾನು ಇಸ್ರಾಯೇಲ್ಯರಿಗೆ ವಾಗ್ದಾನಮಾಡಿದ ದೇಶದೊಳಗೆ ಆರೋನನು ಸೇರಕೂಡದು.
25
ನೀನು ಆರೋನನನ್ನೂ ಅವನ ಮಗನಾದ ಎಲ್ಲಾಜಾರನನ್ನೂ ಕರಕೊಂಡು ಹೋರ್ ಬೆಟ್ಟವನ್ನು ಹತ್ತಿ
26
ಆರೋನನ ವಸ್ತ್ರಗಳನ್ನು ತೆಗೆದು ಅವನ ಮಗನಾದ ಎಲ್ಲಾಜಾರನಿಗೆ ತೊಡಿಸಬೇಕು. ಆರೋನನು ಅಲ್ಲಿ ದೇಹವನ್ನು ಬಿಟ್ಟು ತನ್ನ ಪಿತೃಗಳ ಬಳಿಗೆ ಸೇರಬೇಕು ಎಂದು ಆಜ್ಞಾ ಪಿಸಿದನು.
27
ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಮಾಡಿದನು. ಸರ್ವಸಮೂಹದವರು ನೋಡುತ್ತಿರಲಾಗಿ ಅವರು ಹೋರ್ ಬೆಟ್ಟವನ್ನು ಹತ್ತಿದರು.
28
ಮೋಶೆ ಆರೋನನ ವಸ್ತ್ರಗಳನ್ನು ತೆಗೆದುಬಿಟ್ಟು ಅವನ ಮಗನಾದ ಎಲ್ಲಾಜಾರನಿಗೆ ತೊಡಿಸಿದನು. ಆರೋನನು ಅಲ್ಲೇ ಬೆಟ್ಟದ ತುದಿಯಲ್ಲಿ ಸತ್ತುಹೋದನು. ತರುವಾಯ ಮೋಶೆಯೂ ಎಲ್ಲಾಜಾರನೂ ಬೆಟ್ಟದಿಂದ ಇಳಿದುಬಂದರು.
29
ಆರೋನನು ಸತ್ತುಹೋದದ್ದನ್ನು ಇಸ್ರಾಯೇಲ್ ಜನಾಂಗದವರೆಲ್ಲರೂ ತಿಳಿದು ಮೂವತ್ತು ದಿನಗಳು ಅವನಿಗಾಗಿ ಶೋಕಿಸಿದರು.
← Chapter 19
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 21 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36