bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Numbers 23
Numbers 23
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 22
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 24 →
1
ಆಗ ಬಿಳಾಮನು - ಇಲ್ಲಿ ನೀನು ಏಳು ಯಜ್ಞಪೀಠಗಳನ್ನು ಕಟ್ಟಿಸಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಸಿದ್ಧಪಡಿಸಬೇಕೆಂದು ಬಾಲಾಕನಿಗೆ ಹೇಳಿದನು.
2
ಬಾಲಾಕನು ಹಾಗೆಯೇ ಮಾಡಿದನು. ಬಾಲಾಕನೂ ಬಿಳಾಮನೂ ಪ್ರತಿಯಜ್ಞಪೀಠದ ಮೇಲೆ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗ ಹೋಮವಾಗಿ ಸಮರ್ಪಿಸಿದಾಗ
3
ಬಿಳಾಮನು ಬಾಲಾಕನಿಗೆ - ನೀನು ಸರ್ವಾಂಗಹೋಮ ಮಾಡಿದ ಸ್ಥಳದಲ್ಲೇ ಇರು; ನಾನು ಸ್ವಲ್ಪ ದೂರ ಹೋಗಿ ಬರುತ್ತೇನೆ; ಒಂದು ವೇಳೆ ಯೆಹೋವನು ನನಗೆ ದರ್ಶನ ಕೊಟ್ಟಾನು; ಆತನು ನನಗೆ ಸೂಚಿಸುವ ಸಂಗತಿಯನ್ನು ನಿನಗೆ ತಿಳಿಸುವೆನು ಎಂದು ಹೇಳಿ ಮರವಿಲ್ಲದ ಒಂದು ದಿನ್ನೆಗೆ ಹೋದನು.
4
ದೇವರು ಬಿಳಾಮನಿಗೆ ಎದುರಾಗಿ ಬಂದಾಗ ಬಿಳಾಮನು ಆತನಿಗೆ - ನಾನು ಆ ಏಳು ಯಜ್ಞಪೀಠಗಳನ್ನು ಕಟ್ಟಿಸಿ ಒಂದೊಂದು ಪೀಠದಲ್ಲಿ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದ್ದೇನೆ ಎಂದು ಹೇಳಲಾಗಿ
5
ಯೆಹೋವನು ಬಿಳಾಮನಿಗೆ ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು - ನೀನು ಬಾಲಾಕನ ಬಳಿಗೆ ತಿರಿಗಿಹೋಗಿ ಹೀಗೆ ಹೀಗೆ ಹೇಳಬೇಕು ಎಂದು ಆಜ್ಞಾಪಿಸಿದನು.
6
ಬಿಳಾಮನು ಬಾಲಾಕನ ಬಳಿಗೆ ತಿರಿಗಿ ಬಂದಾಗ ಬಾಲಾಕನು ತಾನು ಸರ್ವಾಂಗಹೋಮವನ್ನು ಸಮರ್ಪಿಸಿದ್ದ ಪೀಠದ ಹತ್ತಿರ ನಿಂತಿದ್ದನು; ಮೋವಾಬ್ಯರ ಪ್ರಧಾನರೆಲ್ಲರೂ ಅವನ ಬಳಿಯಲ್ಲಿದ್ದರು.
7
ಆಗ ಬಿಳಾಮನು ಪದ್ಯರೂಪವಾಗಿ ನುಡಿದದ್ದೇನಂದರೆ - ಬಾಲಾಕನು ನನ್ನನ್ನು ಅರಾವಿುನಿಂದ ಕರಿಸಿದನು; ಮೋವಾಬ್ಯರ ಅರಸನು ಮೂಡಲಬೆಟ್ಟಗಳಿಂದ ನನ್ನನ್ನು ಬರಮಾಡಿದನು. ನೀನು ಬಂದು ಯಾಕೋಬವಂಶದವರನ್ನು ನನಗೋಸ್ಕರ ಶಪಿಸಬೇಕು; ಇಸ್ರಾಯೇಲ್ಯರಿಗೆ ದುರ್ಗತಿಯುಂಟಾಗಲಿ ಎಂದು ಆಕ್ರೋಶಿಸಬೇಕು ಎಂದು ನನಗೆ ಹೇಳಿದನು.
8
ನಾನು ಅವರನ್ನು ಏನೆಂದು ಶಪಿಸಲಿ; ದೇವರು ಶಪಿಸಲಿಲ್ಲವಲ್ಲಾ. ಏನೆಂದು ಆಕ್ರೋಶಿಸಲಿ; ಯೆಹೋವನು ಆಕ್ರೋಶಿಸಲಿಲ್ಲವಲ್ಲಾ.
9
ಬೆಟ್ಟದ ಶಿಖರದಿಂದ ನಾನು ಅವರನ್ನು ಕಂಡೆನು; ಗುಡ್ಡದಿಂದ ಅವರನ್ನು ನೋಡಿದೆನು. ಆ ಜನಾಂಗವು ತಾನು ಇತರ ಜನಾಂಗಗಳಂತಲ್ಲವೆಂದು ಭಾವಿಸಿಕೊಂಡು ಪ್ರತ್ಯೇಕವಾಗಿ ವಾಸಿಸುತ್ತದೆ.
10
ಧೂಳಿನಷ್ಟು ಅಸಂಖ್ಯವಾದ ಯಾಕೋಬ್ಯರನ್ನು ಲೆಕ್ಕಿಸುವದಕ್ಕೆ ಯಾರಿಂದಾದೀತು; ಇಸ್ರಾಯೇಲ್ಯರ ಕಾಲ್ಭಾಗವನ್ನಾದರೂ ಯಾರು ಹೇಳಬಲ್ಲರು. ಸಜ್ಜನರಾದ ಅವರು ಸಾಯುವ ರೀತಿಯಲ್ಲೇ ನಾನೂ ಸಾಯಬೇಕು. ಅವರಿಗುಂಟಾಗುವ ಅವಸಾನವು ನನಗೂ ಆಗಬೇಕು ಅಂದನು.
11
ಈ ಮಾತುಗಳನ್ನು ಕೇಳಿ ಬಾಲಾಕನು ಅವನಿಗೆ - ಇದೇನು ನೀನು ನನಗೆ ಮಾಡಿದ್ದು; ನನ್ನ ಶತ್ರುಗಳನ್ನು ಶಪಿಸುವದಕ್ಕೆ ನಿನ್ನನ್ನು ಕರಿಸಿದೆನು; ನೀನು ಅವರನ್ನು ಶಪಿಸದೆ ಆಶೀರ್ವಾದವನ್ನೇ ಮಾಡಿಬಿಟ್ಟಿ ಎಂದು ಹೇಳಿದನು.
12
ಅದಕ್ಕೆ ಬಿಳಾಮನು - ಯೆಹೋವನು ನುಡಿಸುವ ಮಾತನ್ನೇ ನಾನು ಹೇಳಬೇಕಾಗಿದೆಯಲ್ಲವೇ ಅಂದನು.
13
ಆಗ ಬಾಲಾಕನು - ದಯಮಾಡಿ ನನ್ನ ಕೂಡ ಇನ್ನೊಂದು ಸ್ಥಳಕ್ಕೆ ಬಾ; ಅಲ್ಲಿಂದ ಅವರನ್ನು ನೋಡಬಹುದು; ಆದರೆ ಅವರೆಲ್ಲರೂ ಕಾಣಿಸದೆ ಕಡೇಭಾಗವು ಮಾತ್ರ ಕಾಣಿಸುವದು;
14
ಅಲ್ಲಿಂದ ನನಗೋಸ್ಕರ ಅವರನ್ನು ಶಪಿಸಬೇಕು ಎಂದು ಹೇಳಿ ಪಿಸ್ಗಾ ಬೆಟ್ಟದ ತುದಿಯಲ್ಲಿರುವ ಚೋಫೀಮ್ ಬೈಲು ಎಂಬ ಸ್ಥಳಕ್ಕೆ ಕರಕೊಂಡುಹೋಗಿ ಅಲ್ಲಿಯೂ ಏಳು ಯಜ್ಞಪೀಠಗಳನ್ನು ಕಟ್ಟಿಸಿ ಪ್ರತಿಯೊಂದು ಪೀಠದಲ್ಲಿ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದನು.
15
ಬಿಳಾಮನು ಅವನಿಗೆ - ನೀನು ಇಲ್ಲೇ ಸರ್ವಾಂಗಹೋಮಮಾಡಿದ ಸ್ಥಳದಲ್ಲಿರು; ನಾನು ಅತ್ತಕಡೆ ಹೋಗಿ [ಯೆಹೋವನನ್ನು] ಎದುರುಗೊಳ್ಳುವೆನು ಎಂದು ಹೇಳಿದನು.
16
ಯೆಹೋವನು ಬಿಳಾಮನಿಗೆ ಎದುರಾಗಿ ಬಂದು ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು - ನೀನು ಬಾಲಾಕನ ಬಳಿಗೆ ತಿರಿಗಿ ಹೋಗಿ ಹೀಗೆ ಹೀಗೆ ಹೇಳಬೇಕು ಅಂದನು.
17
ಬಿಳಾಮನು ಬಾಲಾಕನ ಬಳಿಗೆ ಬಂದಾಗ ಬಾಲಾಕನು ತಾನು ಸರ್ವಾಂಗಹೋಮವನ್ನು ಸಮರ್ಪಿಸಿದ ಪೀಠದ ಹತ್ತಿರ ನಿಂತಿದ್ದನು; ಮೋವಾಬ್ಯರ ಪ್ರಧಾನರು ಅವನ ಸಂಗಡ ಇದ್ದರು.
18
ಬಾಲಾಕನು - ಯೆಹೋವನು ಏನು ಹೇಳಿದ್ದಾನೆ ಎಂದು ಅವನನ್ನು ಕೇಳಲು ಬಿಳಾಮನು ಪದ್ಯರೂಪವಾಗಿ ನುಡಿದದ್ದೇನಂದರೆ - ಬಾಲಾಕನೇ, ಕಿವಿಗೊಟ್ಟು ಕೇಳು; ಚಿಪ್ಪೋರನ ಮಗನೇ, ನನ್ನ ಮಾತನ್ನು ಲಾಲಿಸು.
19
ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ; ಮಾನವನಂತೆ ಮನಸ್ಸನ್ನು ಬೇರೆ ಮಾಡಿಕೊಳ್ಳುವವನಲ್ಲ. ತಾನು ಹೇಳಿದ ಮೇರೆಗೆ ನಡೆಯುವದಿಲ್ಲವೋ; ಮಾತು ಕೊಟ್ಟನಂತರ ನೆರವೇರಿಸುವದಿಲ್ಲವೋ.
20
ಅವರನ್ನು ಆಶೀರ್ವದಿಸುವದಕ್ಕೆ ನನಗೆ ಅಪ್ಪಣೆಯಾಯಿತು; ಆತನು ಆಶೀರ್ವದಿಸಿದ ನಂತರ ನಾನು ಬದಲಾಯಿಸಲಾರೆನು.
21
ಯಾಕೋಬ್ಯರಲ್ಲಿ ಯಾವ ಆಪತ್ತಿನ ಸೂಚನೆಯೂ ಇಲ್ಲ; ಇಸ್ರಾಯೇಲ್ಯರಿಗೆ ವಿಪತ್ತು ಸಂಭವಿಸುವ ಹಾಗೆ ತೋರುವದಿಲ್ಲ. ಅವರಿಗೆ ದೇವರಾಗಿರುವ ಯೆಹೋವನು ಅವರ ಸಂಗಡಲೇ ಇದ್ದಾನೆ; ಅವರು ತಮ್ಮ ಅರಸನಿಗೋಸ್ಕರ ಮಾಡುವ ಜಯಘೋಷವು ಕೇಳಿಸುತ್ತಲೇ ಇದೆ.
22
ಅವರನ್ನು ಐಗುಪ್ತದೇಶದಿಂದ ಕರಕೊಂಡು ಬಂದವನು ದೇವರೇ; ಅವರು ಕಾಡುಕೋಣದಷ್ಟು ಬಲವುಳ್ಳವರು.
23
ಯಾಕೋಬ್ಯರಲ್ಲಿ ಶಕುನನೋಡುವದು ಇಲ್ಲ; ಇಸ್ರಾಯೇಲ್ಯರಲ್ಲಿ ಕಣಿಕೇಳುವದು ಇಲ್ಲ. ದೇವರು ತಾನು ಮಾಡುವ ಕೆಲಸವನ್ನು ತತ್ಕಾಲದಲ್ಲೇ ಯಾಕೋಬ್ಯರಿಗೆ ತಿಳಿಸುತ್ತಾನೆ; ಸಮಯೋಚಿತವಾಗಿ ಅದನ್ನು ಇಸ್ರಾಯೇಲ್ಯರಿಗೆ ತೋರಿಸುತ್ತಾನೆ.
24
ಆ ಜನಾಂಗದವರು ಪ್ರಾಯದ ಸಿಂಹದಂತೆ ಎದ್ದು ಮೃಗೇಂದ್ರನಂತೆ ನಿಂತಿದ್ದಾರೆ; ಸಿಂಹವು ಮೃಗವನ್ನು ಕೊಂದು ರಕ್ತವನ್ನು ಕುಡಿದು ಮಾಂಸವನ್ನು ತಿಂದು ತೃಪ್ತಿಹೊಂದಿದ ಹೊರತು ಮಲಗುವದಿಲ್ಲವಷ್ಟೆ ಅಂದನು.
25
ಆಗ ಬಾಲಾಕನು ಅವನಿಗೆ - ನೀನು ಅವರನ್ನು ಶಪಿಸಲೂ ಬೇಡ, ಆಶೀರ್ವದಿಸಲೂ ಬೇಡ ಎಂದು ಹೇಳಿದನು.
26
ಅದಕ್ಕೆ ಬಿಳಾಮನು - ಯೆಹೋವನು ಆಜ್ಞಾಪಿಸುವದನ್ನೇ ನಾನು ಮಾಡಬೇಕೆಂದು ನಾನು ನಿನಗೆ ಹೇಳಲಿಲ್ಲವೇ ಅಂದನು.
27
ತರುವಾಯ ಬಾಲಾಕನು ಬಿಳಾಮನಿಗೆ - ಬೇರೊಂದು ಸ್ಥಳಕ್ಕೆ ನಿನ್ನನ್ನು ಕರಕೊಂಡು ಹೋಗುತ್ತೇನೆ ಬಾ; ಅಲ್ಲಿಯಾದರೂ ನೀನು ಅವರನ್ನು ಶಪಿಸುವದಕ್ಕೆ ಒಂದು ವೇಳೆ ದೇವರು ಅನುಮತಿಸಾನು ಎಂದು ಹೇಳಿ
28
ಅವನನ್ನು ಪೆಗೋರ್ ಎಂಬ ಬೆಟ್ಟದ ತುದಿಗೆ ಕರಕೊಂಡು ಹೋದನು. ಆ ಬೆಟ್ಟದ ಮೇಲಿನಿಂದ ಕೆಳಗಿರುವ ಯೆಷೀಮೋನ್ ಎಂಬ ಅರಣ್ಯಪ್ರದೇಶವು ಕಾಣಿಸುತ್ತದೆ.
29
ಆಗ ಬಿಳಾಮನು ಬಾಲಾಕನಿಗೆ - ಇಲ್ಲಿಯೂ ಏಳು ಯಜ್ಞಪೀಠಗಳನ್ನು ಕಟ್ಟಿಸಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಸಿದ್ಧಪಡಿಸು ಎಂದು ಹೇಳಲಾಗಿ
30
ಬಾಲಾಕನು ಅವನ ಅಪ್ಪಣೆಯ ಮೇರೆಗೆ ಮಾಡಿ ಪ್ರತಿಯೊಂದು ಪೀಠದಲ್ಲಿ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದನು.
← Chapter 22
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 24 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36