bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Numbers 26
Numbers 26
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 25
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 27 →
1
ಆ ಘೋರವಾದ ವ್ಯಾಧಿ ನಿಂತ ಮೇಲೆ ಯೆಹೋವನು ಮೋಶೆಗೂ ಆರೋನನ ಮಗನಾದ ಎಲ್ಲಾಜಾರನಿಗೂ -
2
ನೀವು ಇಸ್ರಾಯೇಲ್ಯರ ಸರ್ವಸಮೂಹದವರಲ್ಲಿ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರನ್ನು ಅಂದರೆ ಯುದ್ಧಕ್ಕೆ ಹೊರಡತಕ್ಕವರನ್ನು ಗೋತ್ರಗೋತ್ರಗಳ ಪ್ರಕಾರ ಲೆಕ್ಕಿಸಬೇಕೆಂದು ಆಜ್ಞಾಪಿಸಿದನು.
3
ಯೆಹೋವನು ಮೋಶೆಗೂ ಐಗುಪ್ತದೇಶದಿಂದ ಬಂದಿದ್ದ ಇಸ್ರಾಯೇಲ್ಯರಿಗೂ ಆಜ್ಞಾಪಿಸಿದಂತೆ
4
ಮೋಶೆಯೂ ಮಹಾಯಾಜಕ ಎಲ್ಲಾಜಾರನೂ ಯೊರ್ದನ್ ಹೊಳೆಯ ತೀರದಲ್ಲಿ ಯೆರಿಕೋ ಪಟ್ಟಣದ ಹತ್ತಿರ ಮೋವಾಬ್ಯರ ಮೈದಾನದಲ್ಲಿ ಇಸ್ರಾಯೇಲ್ಯರಲ್ಲಿ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರನ್ನು ಲೆಕ್ಕಿಸಿದರು. [ಅದರ ವಿವರ ಹೇಗಂದರೆ - ]
5
ಇಸ್ರಾಯೇಲನ ಚೊಚ್ಚಲುಮಗನಾದ ರೂಬೇನನಿಂದುಂಟಾದ ಕುಟುಂಬಗಳು ಯಾವವಂದರೆ - ಹನೋಕನ ವಂಶಸ್ಥರಾದ ಹನೋಕ್ಯರು, ಪಲ್ಲೂವಿನ ವಂಶಸ್ಥರಾದ ಪಲ್ಲೂವಿನವರು,
6
ಹೆಚ್ರೋನನ ವಂಶಸ್ಥರಾದ ಹೆಚ್ರೋನ್ಯರು, ಕರ್ಮೀಯ ವಂಶಸ್ಥರಾದ ಕರ್ಮೀಯರು ಇವರೇ
7
ರೂಬೇನ್ಯರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರು 43,730 ಮಂದಿ.
8
ಪಲ್ಲೂವಿನ ಮಗನು ಎಲೀಯಾಬ್. ಎಲೀಯಾಬನ ಮಕ್ಕಳು - ನೆಮೂವೇಲ್, ದಾತಾನ್, ಅಬೀರಾಮ್ ಎಂಬವರೇ. ಕೋರಹನ ಗುಂಪಿನವರು ಯೆಹೋವನಿಗೆ ವಿರೋಧವಾಗಿ ವಿವಾದಿಸಿದ ಕಾಲದಲ್ಲಿ ಅವರೊಳಗೆ ಸೇರಿಕೊಂಡು ಮೋಶೆ ಆರೋನರಿಗೆ ವಿರೋಧವಾಗಿ ವಿವಾದಿಸಿದ ಆಲೋಚನಾಕರ್ತರಾದ ದಾತಾನ್ ಅಬೀರಾಮರು ಇವರೇ.
10
ಭೂವಿುಯು ಬಾಯ್ದೆರೆದು ಅವರನ್ನೂ ಕೋರಹನನ್ನೂ ನುಂಗಿಬಿಟ್ಟಿತಷ್ಟೆ; ಮತ್ತು ಬೆಂಕಿಯು ಆ ಗುಂಪಿನವರಲ್ಲಿ ಬೇರೆ ಇನ್ನೂರೈವತ್ತು ಮಂದಿಯನ್ನು ದಹಿಸಿ ಇಸ್ರಾಯೇಲ್ಯರಿಗೆ ಎಚ್ಚರವುಂಟಾಗುವಂತೆ ಮಾಡಿತಲ್ಲಾ.
11
ಆ ಗುಂಪಿನವರೆಲ್ಲರು ಸತ್ತರೂ ಕೋರಹನ ಮಕ್ಕಳು ಆ ಕಾಲದಲ್ಲಿ ಸಾಯಲಿಲ್ಲ.
12
ಸಿಮೆಯೋನ್ ಕುಲದ ಕುಟುಂಬಗಳು ಯಾವವಂದರೆ - ನೆಮೂವೇಲನ ವಂಶಸ್ಥರಾದ ನೆಮೂವೇಲ್ಯರು, ಯಾಮೀನನ ವಂಶಸ್ಥರಾದ ಯಾಮೀನ್ಯರು, ಯಾಕೀನನ ವಂಶಸ್ಥರಾದ ಯಾಕೀನ್ಯರು,
13
ಜೆರಹನ ವಂಶಸ್ಥರಾದ ಜೆರಹಿಯರು, ಸೌಲನ ವಂಶಸ್ಥರಾದ ಸೌಲ್ಯರು ಇವರೇ.
14
ಸಿಮೆಯೋನ್ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರು 22,200 ಮಂದಿ.
15
ಗಾದ್ ಕುಲದ ಕುಟುಂಬಗಳು ಯಾವವಂದರೆ - ಚೆಫೋನನ ವಂಶಸ್ಥರಾದ ಚೆಫೋನ್ಯರು, ಹಗ್ಗೀಯ ವಂಶಸ್ಥರಾದ ಹಗ್ಗೀಯರು, ಶೂನೀಯ ವಂಶಸ್ಥರಾದ ಶೂನೀಯರು,
16
ಒಜ್ನೀಯ ವಂಶಸ್ಥರಾದ ಒಜ್ನೀಯರು, ಏರೀಯ ವಂಶಸ್ಥರಾದ ಏರೀಯರು,
17
ಅರೋದನ ವಂಶಸ್ಥರಾದ ಅರೋದ್ಯರು. ಅರೇಲೀಯ ವಂಶಸ್ಥರಾದ ಅರೇಲೀಯರು ಇವರೇ.
18
ಗಾದ್ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರು 40,500 ಮಂದಿ.
19
ಯೆಹೂದನ ಮಕ್ಕಳಲ್ಲಿ ಏರ್ ಓನಾನರು ಕಾನಾನ್ ದೇಶದಲ್ಲೇ ಸತ್ತರಷ್ಟೆ.
20
ಯೆಹೂದ ಕುಲದಲ್ಲಿ ಉಳಿದ ಕುಟುಂಬಗಳು ಯಾವವಂದರೆ - ಶೇಲಹನ ವಂಶಸ್ಥರಾದ ಶೇಲಾನ್ಯರು, ಪೆರೆಚನ ವಂಶಸ್ಥರಾದ ಪೆರೆಚ್ಯರು, ಜೆರಹನ ವಂಶಸ್ಥರಾದ ಜೆರಹಿಯರು ಇವರೇ.
21
ಪೆರೆಚನಿಂದುಂಟಾದ ಕುಟುಂಬಗಳು - ಹೆಚ್ರೋನನ ವಂಶಸ್ಥರಾದ ಹೆಚ್ರೋನ್ಯರೂ ಹಾಮೂಲನ ವಂಶಸ್ಥರಾದ ಹಾಮೂಲ್ಯರೂ.
22
ಯೆಹೂದ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರು 76,500 ಮಂದಿ.
23
ಇಸ್ಸಾಕಾರ್ ಕುಲದ ಕುಟುಂಬಗಳು ಯಾವವಂದರೆ - ತೋಲನ ವಂಶಸ್ಥರಾದ ತೋಲಾಯರು, ಪುವ್ವನ ವಂಶಸ್ಥರಾದ ಪೂನ್ಯರು,
24
ಯಾಶೂಬನ ವಂಶಸ್ಥರಾದ ಯಾಶೂಬ್ಯರು, ಶಿಮ್ರೋನನ ವಂಶಸ್ಥನಾದ ಶಿಮ್ರೋನ್ಯರು ಇವರೇ.
25
ಇಸ್ಸಾಕಾರ್ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರು 64,300 ಮಂದಿ.
26
ಜೆಬುಲೂನ್ ಕುಲದ ಕುಟುಂಬಗಳು ಯಾವವಂದರೆ - ಸೆರೆದನ ವಂಶಸ್ಥರಾದ ಸೆರೆದ್ಯರು. ಏಲೋನನ ವಂಶಸ್ಥರಾದ ಏಲೋನ್ಯರು. ಯಹಲೇಲನ ವಂಶಸ್ಥರಾದ ಯಹಲೇಲ್ಯರು.
27
ಜೆಬುಲೂನ್ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರು 60,500 ಮಂದಿ.
28
ಯೋಸೇಫನ ಮಕ್ಕಳು ಮನಸ್ಸೆ ಎಫ್ರಾಯೀಮ್.
29
ಮನಸ್ಸೆ ಕುಲದ ಕುಟುಂಬಗಳು ಯಾವವಂದರೆ - ಮಾಕೀರನ ವಂಶಸ್ಥರಾದ ಮಾಕೀರ್ಯರು, ಮಾಕೀರನ ಮಗನಾದ ಗಿಲ್ಯಾದನ ವಂಶಸ್ಥರಾದ ಗಿಲ್ಯಾದ್ಯರು ಇವರೇ.
30
ಗಿಲ್ಯಾದನ ವಂಶದವರು ಯಾರಂದರೆ - ಈಯೆಜೆರನ ವಂಶಸ್ಥರಾದ ಈಯೆಜೆರ್ಯರು. ಹೇಲೆಕನ ವಂಶಸ್ಥರಾದ ಹೇಲೆಕ್ಯರು,
31
ಅಸ್ರೀಯೇಲನ ವಂಶಸ್ಥರಾದ ಅಸ್ರೀಯೇಲ್ಯರು, ಶೆಕೆಮನ ವಂಶಸ್ಥರಾದ ಶೆಕೆಮ್ಯರು,
32
ಶೆಮೀದಾಯನ ವಂಶಸ್ಥರಾದ ಶೆಮೀದಾಯರು, ಹೇಫೆರನ ವಂಶಸ್ಥರಾದ ಹೇಫೆರ್ಯರು ಇವರೇ.
33
ಹೇಫೆರನ ಮಗನಾದ ಚಲ್ಪಹಾದನಿಗೆ ಹೆಣ್ಣು ಮಕ್ಕಳು ಹುಟ್ಟಿದರೇ ಹೊರತು ಗಂಡು ಮಕ್ಕಳು ಹುಟ್ಟಲಿಲ್ಲ. ಅವನ ಹೆಣ್ಣು ಮಕ್ಕಳು ಮಹ್ಲಾ, ನೋವಾ, ಹೊಗ್ಲಾ, ವಿುಲ್ಕಾ, ತಿರ್ಚಾ ಎಂಬವರೇ.
34
ಮನಸ್ಸೆ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರು 52,700 ಮಂದಿ.
35
ಎಫ್ರಾಯೀಮ್ ಕುಲದ ಕುಟುಂಬಗಳು ಯಾವವಂದರೆ - ಶೂತೆಲಹನ ವಂಶಸ್ಥರಾದ ಶೂತೆಲಹ್ಯರು, ಬೆಕೆರನ ವಂಶಸ್ಥರಾದ ಬೆಕೆರ್ಯರು, ತಹನನ ವಂಶಸ್ಥರಾದ ತಹನಿಯರು,
36
ಶೂತೆಲಹನ ಮಗನಾದ ಏರಾನನ ವಂಶಸ್ಥರಾದ ಏರಾನ್ಯರು ಇವರೇ.
37
ಎಫ್ರಾಯೀಮ್ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರು 32,500 ಮಂದಿ. ಇದೇ ಯೋಸೇಫ್ ವಂಶದ ಕುಟುಂಬಗಳ ವಿವರ.
38
ಬೆನ್ಯಾಮೀನ್ ಕುಲದ ಕುಟುಂಬಗಳು ಯಾವವಂದರೆ - ಬೆಲಗನ ವಂಶಸ್ಥರಾದ ಬೆಲಗ್ಯರು, ಅಷ್ಬೇಲನ ವಂಶಸ್ಥರಾದ ಅಷ್ಬೇಲ್ಯರು, ಅಹೀರಾಮನ ವಂಶಸ್ಥರಾದ ಅಹೀರಾಮ್ಯರು,
39
ಶೂಫಾಮನ ವಂಶಸ್ಥರಾದ ಶೂಫಾಮ್ಯರು, ಹೂಫಾಮನ ವಂಶಸ್ಥರಾದ ಹೂಫಾಮ್ಯರು ಇವರೇ.
40
ಬೆಲಗನಿಗೆ ಅರ್ದ್, ನಾಮಾನ್ ಎಂಬ ಇಬ್ಬರು ಮಕ್ಕಳಿದ್ದರು. ಅರ್ದನ ವಂಶದವರು ಅರ್ದ್ಯರು, ನಾಮಾನನ ವಂಶದವರು ನಾಮಾನ್ಯರು.
41
ಬೆನ್ಯಾಮೀನ್ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರು 45,600 ಮಂದಿ.
42
ದಾನ್ ಕುಲದ ಕುಟುಂಬಗಳು ಯಾವವಂದರೆ - ಶೂಹಾಮನ ವಂಶಸ್ಥರಾದ ಶೂಹಾಮ್ಯರು.
43
ದಾನ್ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರು 64,400 ಮಂದಿ.
44
ಆಶೇರ್ ಕುಲದ ಕುಟುಂಬಗಳು - ಇಮ್ನಾಹನ ವಂಶಸ್ಥರಾದ ಇಮ್ನಾಹ್ಯರು, ಇಷ್ವೀಯ ವಂಶಸ್ಥರಾದ ಇಷ್ವೀಯರು, ಬೆರೀಯನ ವಂಶಸ್ಥರಾದ ಬೆರೀಯರು.
45
ಬೆರೀಯನ ಮಕ್ಕಳಿಂದುಂಟಾದ ಕುಟುಂಬಗಳು - ಹೇಬೆರನ ವಂಶಸ್ಥರಾದ ಹೇಬೆರ್ಯರು, ಮಲ್ಕೀಯೇಲನ ವಂಶಸ್ಥರಾದ ಮಲ್ಕೀಯೇಲ್ಯರು.
46
ಆಶೇರನಿಗೆ ಸೆರಹಳೆಂಬ ಮಗಳು ಸಹ ಇದ್ದಳು.
47
ಆಶೇರ್ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರು 53,400 ಮಂದಿ.
48
ನಫ್ತಾಲಿ ಕುಲದ ಕುಟುಂಬಗಳು - ಯಹಚೇಲನ ವಂಶಸ್ಥರಾದ ಯಹಚೇಲ್ಯರು, ಗೂನೀಯ ವಂಶಸ್ಥರಾದ ಗೂನೀಯರು,
49
ಯೇಚೆರನ ವಂಶಸ್ಥರಾದ ಯೇಚೆರ್ಯರು, ಶಿಲ್ಲೇಮನ ವಂಶಸ್ಥರಾದ ಶಿಲ್ಲೇಮ್ಯರು.
50
ನಫ್ತಾಲಿ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರು 45,400 ಮಂದಿ.
51
ಇಸ್ರಾಯೇಲ್ಯರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 601,730.
52
ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನಂದರೆ -
53
ನೀವು ಈ ಕುಲಗಳಿಗೆ ಅವರವರ ಸಂಖ್ಯೆಯ ಪ್ರಕಾರ ಆ ದೇಶವನ್ನು ಸ್ವದೇಶವಾಗುವಂತೆ ಹಂಚಿಕೊಡಬೇಕು.
54
ಹೆಚ್ಚು ಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ ಕಡಿಮೆಯಾದ ಕುಲಕ್ಕೆ ಕಡಿಮೆಯಾಗಿಯೂ ಕೊಡಬೇಕು. ಲೆಕ್ಕಿಸಿದ ಸಂಖ್ಯೆಯ ಪ್ರಕಾರವೇ ಪ್ರತಿಯೊಂದು ಕುಲಕ್ಕೆ ಭೂವಿುಯನ್ನು ಸ್ವಾಸ್ತ್ಯಕ್ಕಾಗಿ ಕೊಡಬೇಕು.
55
ಪ್ರತಿಯೊಂದು ಕುಲದ ಪಿತೃವಿನ ಹೆಸರನ್ನು ಬರೆದು ಚೀಟುಹಾಕಿ ಆಯಾ ಕುಲಕ್ಕೆ ಸ್ವಾಸ್ತ್ಯವನ್ನು ಗೊತ್ತುಮಾಡಬೇಕು.
56
ಹೆಚ್ಚು ಮಂದಿಯುಳ್ಳ ಕುಲಕ್ಕಾಗಲಿ ಕಡಿಮೆಯಾದ ಕುಲಕ್ಕಾಗಲಿ ಚೀಟು ಬಂದ ಪ್ರಕಾರವೇ ಸ್ವಾಸ್ತ್ಯವನ್ನು ಗೊತ್ತುಮಾಡಬೇಕು.
57
ಲೇವಿಯರೊಳಗೆ ಲೆಕ್ಕಿಸಲ್ಪಟ್ಟ ಕುಟುಂಬಗಳು - ಗೇರ್ಷೋನನ ವಂಶದವರಾದ ಗೇರ್ಷೋನ್ಯರು, ಕೆಹಾತನ ವಂಶದವರಾದ ಕೆಹಾತ್ಯರು, ಮೆರಾರೀಯ ವಂಶದವರಾದ ಮೆರಾರೀಯರು.
58
ಲೇವಿ ಕುಲದವರ ಕುಟುಂಬಗಳು - ಲಿಬ್ನೀಯರ ಕುಟುಂಬ, ಹೆಬ್ರೋನ್ಯರ ಕುಟುಂಬ, ಮಹ್ಲೀಯರ ಕುಟುಂಬ, ಮೂಷೀಯರ ಕುಟುಂಬ, ಕೋರಹಿಯರ ಕುಟುಂಬ ಇವುಗಳೇ.
59
ಕೆಹಾತನು ಅಮ್ರಾಮನನ್ನು ಪಡೆದನು. ಅಮ್ರಾಮನ ಹೆಂಡತಿ ಯಾರಂದರೆ ಐಗುಪ್ತದೇಶದಲ್ಲಿ ಲೇವಿಯಿಂದ ಹುಟ್ಟಿದ ಯೋಕೆಬೆದಳು. ಈಕೆಯಲ್ಲಿ ಅಮ್ರಾಮನಿಂದ ಆರೋನನೂ ಮೋಶೆಯೂ ಇವರ ಅಕ್ಕನಾದ ವಿುರ್ಯಾಮಳೂ ಹುಟ್ಟಿದರು.
60
ಆರೋನನಿಂದ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬವರು ಹುಟ್ಟಿದರು.
61
ನಾದಬ್ ಅಬೀಹೂ ಎಂಬಿಬ್ಬರು ಯೆಹೋವನ ಸನ್ನಿಧಿಯಲ್ಲಿ ಆತನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯಿಂದ ಧೂಪವನ್ನು ಸಮರ್ಪಿಸಿದದರಿಂದ ಸತ್ತು ಹೋದರು.
62
ಬೇರೆ ಇಸ್ರಾಯೇಲ್ಯರಿಗೆ ಸ್ವಾಸ್ತ್ಯದೊರಕಿದಂತೆ ಲೇವಿಯರಿಗೆ ಸ್ವಾಸ್ತ್ಯದೊರೆಯದೆ ಹೋದದರಿಂದ ಅವರು ಇಸ್ರಾಯೇಲ್ಯರೊಡನೆ ಲೆಕ್ಕಿಸಲ್ಪಡಲಿಲ್ಲ. ಲೇವಿಯರೊಳಗೆ ಒಂದು ತಿಂಗಳು ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳ ಗಂಡಸರನ್ನು ಲೆಕ್ಕಿಸಲಾಗಿ ಅವರ ಸಂಖ್ಯೆ 23,000.
63
ಯೊರ್ದನ್ ಹೊಳೆಯ ತೀರದಲ್ಲಿ ಯೆರಿಕೋ ಪಟ್ಟಣದ ಹತ್ತಿರ ಮೋವಾಬ್ಯರ ಮೈದಾನದಲ್ಲಿ ಮೋಶೆಯೂ ಯಾಜಕನಾದ ಎಲ್ಲಾಜಾರನೂ ಇಸ್ರಾಯೇಲ್ಯರ ಜನಸಂಖ್ಯೆ ನೋಡಿದಾಗ ಲೆಕ್ಕಿಸಲ್ಪಟ್ಟವರು ಇವರೇ.
64
ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲ್ಯರ ಸಂಖ್ಯೆಯನ್ನು ನೋಡಿದಾಗ ಲೆಕ್ಕಿಸಲ್ಪಟ್ಟವರೊಳಗೆ ಒಬ್ಬರಾದರೂ ಇವರಲ್ಲಿರಲಿಲ್ಲ.
65
ಅವರೆಲ್ಲರೂ ಅರಣ್ಯದಲ್ಲಿಯೇ ಸಾಯುವರೆಂದು ಯೆಹೋವನು ಅವರ ವಿಷಯದಲ್ಲಿ ಹೇಳಿದ್ದನಷ್ಟೆ; ಆದದರಿಂದ ಯೆಫುನ್ನೆಯ ಮಗನಾದ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವ ಇವರಿಬ್ಬರೇ ಹೊರತಾಗಿ ಅವರಲ್ಲಿ ಯಾರೂ ಉಳಿಯಲಿಲ್ಲ.
← Chapter 25
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 27 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36