bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Numbers 24
Numbers 24
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 23
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 25 →
1
ಇಸ್ರಾಯೇಲ್ಯರಿಗೆ ಶುಭವಾಗಬೇಕೆಂಬದೇ ಯೆಹೋವನ ಚಿತ್ತವೆಂದು ಬಿಳಾಮನು ತಿಳಿದು ಮೊದಲಿನಂತೆ ಶಕುನನೋಡುವದಕ್ಕೆ ಹೋಗದೆ ಅರಣ್ಯದ ಕಡೆಗೆ ಮುಖವನ್ನು ತಿರುಗಿಸಿಕೊಂಡನು.
2
ಅವನು ಕಣ್ಣೆತ್ತಿ ನೋಡಲಾಗಿ ಕುಲಗಳ ಪ್ರಕಾರ ಡೇರೆಗಳನ್ನು ಹಾಕಿಕೊಂಡಿದ್ದ ಇಸ್ರಾಯೇಲ್ಯರು ಅವನಿಗೆ ಕಾಣಿಸಿದರು.
3
ಆಗ ಅವನು ದೇವಾತ್ಮಪ್ರೇರಿತನಾಗಿ ಪದ್ಯರೂಪವಾಗಿ ಇಂತೆಂದನು - ಬೆಯೋರನ ಮಗನಾದ ಬಿಳಾಮನಿಗುಂಟಾದ ದೇವೋಕ್ತಿ, ಮನೋದೃಷ್ಟಿಯಿಂದ ನೋಡುವ ಪುರುಷನಿಗೆ ಬಂದ ದೇವೋಕ್ತಿ,
4
ದೇವರ ಮಾತುಗಳನ್ನು ಕೇಳುವವನಾಗಿಯೂ ಪರವಶವಾಗಿ ಕಣ್ಣು ತೆರೆದು ಸರ್ವಶಕ್ತನ ದರ್ಶನವನ್ನು ಹೊಂದುವವನಾಗಿಯೂ ಇರುವ ಪುರುಷನಿಗುಂಟಾದ ದೇವೋಕ್ತಿ.
5
ಯಾಕೋಬ್ಯರೇ, ನಿಮ್ಮ ಡೇರೆಗಳು ಎಷ್ಟೋ ಚೆಲುವಾಗಿವೆ; ಇಸ್ರಾಯೇಲ್ಯರೇ, ನಿಮ್ಮ ನಿವಾಸಗಳು ಎಷ್ಟೋ ರಮ್ಯವಾಗಿವೆ.
6
ಉದ್ದವಾಗಿ ಚಾಚಿಕೊಂಡಿರುವ ತಗ್ಗುಗಳಂತೆಯೂ, ನದಿಯ ಬಳಿಯಲ್ಲಿರುವ ತೋಟಗಳಂತೆಯೂ ಕಾಣಿಸುತ್ತವೆ. ಯೆಹೋವನು ನೆಟ್ಟ ಅಗರು ಮರಗಳಿಗೂ ನೀರಿನ ಬಳಿಯಲ್ಲಿರುವ ದೇವದಾರು ವೃಕ್ಷಗಳಿಗೂ ಸಮಾನವಾಗಿವೆ.
7
ಅವರ ಕಪಿಲೆಗಳಿಂದ ನೀರು ಹರಿಯುತ್ತಲೇ ಇದೆ; ಅವರ ಬಿತ್ತನೆಗೆ ಬೇಕಾದಷ್ಟು ನೀರಿದೆ. ಅವರ ಅರಸನು ಅಗಾಗ್ ರಾಜನಿಗಿಂತಲೂ ದೊಡ್ಡವನಾಗಿರುವನು; ಅವರ ರಾಜ್ಯವು ಅಭಿವೃದ್ಧಿಯಲ್ಲಿರುವದು.
8
ಅವರನ್ನು ಐಗುಪ್ತದೇಶದಿಂದ ಕರಕೊಂಡು ಬಂದವನು ದೇವರೇ; ಅವರು ಕಾಡಕೋಣದಷ್ಟು ಬಲವುಳ್ಳವರು. ಅವರು ಶತ್ರುಜನಗಳನ್ನು ನಿರ್ಮೂಲಮಾಡುವರು; ವೈರಿಗಳ ಎಲುಬನ್ನು ಮುರಿದುಹಾಕುವರು; ಅವರನ್ನು ಬಾಣಗಳಿಂದ ಗಾಯಪಡಿಸುವರು.
9
ಆ ಜನಾಂಗವು ಸಿಂಹದಂತೆ ಕಾಲು ಮುದುರಿ ಹೊಂಚುಹಾಕಿಕೊಂಡದೆ; ಮೃಗೇಂದ್ರನಿಗೆ ಸಮನಾದ ಆ ಜನವನ್ನು ಕೆಣಕುವದು ಯಾರಿಂದಾದೀತು. ಇಸ್ರಾಯೇಲ್ಯರೇ, ನಿಮ್ಮನ್ನು ಆಶೀರ್ವದಿಸುವವನಿಗೆ ಆಶೀರ್ವಾದವೂ ಶಪಿಸುವವನಿಗೆ ಶಾಪವೂ ಉಂಟಾಗುವದು ಅಂದನು.
10
ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು ಚಪ್ಪಾಳೆಹೊಡೆದು ಅವನಿಗೆ - ನನ್ನ ಶತ್ರುಗಳನ್ನು ಶಪಿಸುವದಕ್ಕೆ ನಿನ್ನನ್ನು ಕರಿಸಿದೆನು; ಆದರೆ ನೀನು ಅವರನ್ನು ಮೂರು ಸಾರಿಯೂ ಆಶೀರ್ವದಿಸಿದಿಯಲ್ಲಾ.
11
ಆದಕಾರಣ ನಿನ್ನ ಊರಿಗೆ ಹೋಗಿಬಿಡು; ನಿನ್ನನ್ನು ಬಹಳವಾಗಿ ಘನಪಡಿಸುವೆನೆಂದು ಹೇಳಿಕೊಂಡೆನು; ಆದರೆ ನಿನಗೆ ಘನತೆಯುಂಟಾಗದಂತೆ ಯೆಹೋವನು ಅಡ್ಡಿಮಾಡಿದ್ದಾನೆ ಎಂದು ಹೇಳಿದನು.
12
ಅದಕ್ಕೆ ಬಿಳಾಮನು - ಬಾಲಾಕನು ತನ್ನ ಮನೇ ತುಂಬುವಷ್ಟು ಬೆಳ್ಳಿಬಂಗಾರವನ್ನು ದಾನಮಾಡಿದರೂ ನಾನು ಯೆಹೋವನ ಆಜ್ಞೆಯನ್ನು ಮೀರಿ ನನ್ನ ಇಷ್ಟದಂತೆ ಯಾವ ಕೆಲಸವನ್ನೂ ಮಾಡಲಾರೆನು; ಯೆಹೋವನು ಆಜ್ಞಾಪಿಸುವದನ್ನೇ ಮಾತಾಡುವೆನೆಂದು ನೀನು ನನ್ನ ಬಳಿಗೆ ಕಳುಹಿಸಿದ ದೂತರಿಗೆ ನಾನು ಹೇಳಲಿಲ್ಲವೇ.
14
ಆಗಲಿ; ನಾನು ನನ್ನ ಸ್ವಜನರ ಬಳಿಗೆ ಹೋಗುತ್ತೇನೆ. ಆದರೆ ಕಡೆಗೆ ಆ ಜನರು ನಿನ್ನ ಜನರಿಗೆ ಏನು ಮಾಡುವರೋ ಅದನ್ನು ನಿನಗೆ ತಿಳಿಸುತ್ತೇನೆ;
15
ಕೇಳು ಎಂದು ಹೇಳಿ ಪದ್ಯರೂಪವಾಗಿ ಇಂತೆಂದನು - ಬೆಯೋರನ ಮಗನಾದ ಬಿಳಾಮನಿಗುಂಟಾದ ದೇವೋಕ್ತಿ,
16
ಮನೋದೃಷ್ಟಿಯಿಂದ ನೋಡುವ ಪುರುಷನಿಗೆ ಬಂದ ದೇವೋಕ್ತಿ, ದೇವರ ಮಾತುಗಳನ್ನು ಕೇಳುವವನೂ ಪರಾತ್ಪರನ ಜ್ಞಾನವನ್ನು ಪಡೆದವನೂ ಪರವಶವಾಗಿ ಕಣ್ಣುತೆರೆದು ಸರ್ವಶಕ್ತನ ದರ್ಶನವನ್ನು ಹೊಂದುವವನೂ ಆಗಿರುವ ಪುರುಷನಿಗುಂಟಾದ ದೇವೋಕ್ತಿ.
17
ಒಬ್ಬಾತನನ್ನು ನೋಡುತ್ತಿದ್ದೇನೆ, ಆತನು ಈಗಿನವನಲ್ಲ; ಆತನು ಕಾಣಿಸುತ್ತಾನೆ, ಆದರೆ ಸಮೀಪದಲ್ಲಿ ಅಲ್ಲ. ಯಾಕೋಬವಂಶದವರಲ್ಲಿ ನಕ್ಷತ್ರಪ್ರಾಯನೊಬ್ಬನು ಉದಯಿಸಿದ್ದಾನೆ; ಇಸ್ರಾಯೇಲ್ಯರಲ್ಲಿ ರಾಜದಂಡ ಹಿಡಿದವನು ಕಂಡುಬಂದಿದ್ದಾನೆ. ಅವನು ಮೋವಾಬ್ಯರ ತಲೆಯನ್ನು ಸೀಳಿಹಾಕಿದ್ದಾನೆ; ಯುದ್ಧವೀರರೆಲ್ಲರನ್ನೂ ಕೆಡವಿ ಬಿಟ್ಟಿದ್ದಾನೆ.
18
ಅದಲ್ಲದೆ ಎದೋಮ್ಯರ ದೇಶವನ್ನೂ ಸ್ವಾಧೀನ ಪಡಿಸಿಕೊಂಡಿದ್ದಾನೆ; ಹಗೆಗಳಾದ ಸೇಯೀರಿನವರು ಅವನಿಗೆ ಅಧೀನರಾದರು.
19
ಇಸ್ರಾಯೇಲ್ಯರೋ ಬಲಗೊಂಡವರು; ಯಾಕೋಬ್ಯರಿಗೇ ದೊರೆತನವಾಯಿತು; ಪಟ್ಟಣಗಳಿಂದ ತಪ್ಪಿಸಿಕೊಂಡವರೂ ನಾಶವಾದರು ಅಂದನು.
20
ತರುವಾಯ ಅಮಾಲೇಕ್ಯರನ್ನು ನೋಡಿ ಅವರ ವಿಷಯದಲ್ಲಿ ನುಡಿದದ್ದೇನಂದರೆ - ಅಮಾಲೇಕ್ಯರು ಜನಾಂಗಗಳಲ್ಲಿ ಪ್ರಮುಖರಲ್ಲವೇ; ಆದರೂ ನಾಶವೇ ಅವರ ಗತಿ.
21
ಬಳಿಕ ಅವನು ಕೇನ್ಯರನ್ನು ನೋಡಿ ಅವರ ವಿಷಯದಲ್ಲಿ ನುಡಿದದ್ದೇನಂದರೆ - ನಿಮ್ಮ ನಿವಾಸಸ್ಥಳವು ಶಾಶ್ವತವಾಗಿಯೇ ತೋರುತ್ತದೆ; ಬೆಟ್ಟದ ತುದಿಯಲ್ಲಿ ಗೂಡನ್ನು ಮಾಡಿಕೊಂಡಿದ್ದೀರಿ.
22
ಆದರೂ ಕೇನ್ಯರೂ ನಾಶವಾಗುವರು. ಅದು ಎಷ್ಟು ದೂರ ಅನ್ನುತ್ತೀರೋ? ಅಶ್ಯೂರ್ಯರೇ ನಿಮ್ಮನ್ನು ಸೆರೆಹಿಡಿದುಕೊಂಡು ಹೋಗುವರು.
23
ಅವನು ಮತ್ತೂ ನುಡಿದದ್ದೇನಂದರೆ - ಅಯ್ಯೋ, ದೇವರು ಹೀಗೆ ಮಾಡುವಾಗ ಯಾರು ಉಳಿಯುವರು.
24
ಕಿತ್ತೀಮೆಂಬ ಸ್ಥಳದಿಂದ ಜನರು ಹಡಗುಗಳಲ್ಲಿ ಬಂದು ಅಶ್ಯೂರ್ಯರನ್ನೂ ಏಬೆರ್ ಜನರನ್ನೂ ಸೋಲಿಸುವರು; ಅವರಿಗೂ ನಾಶವುಂಟಾಗುವದು ಅಂದನು.
25
ತರುವಾಯ ಬಿಳಾಮನು ಸ್ವದೇಶಕ್ಕೆ ತಿರಿಗಿ ಹೋದನು; ಬಾಲಾಕನೂ ಹೊರಟು ಹೋದನು.
← Chapter 23
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 25 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36