bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Numbers 7

← Chapter 6
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 8 →
1
ಮೋಶೆ ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸಿ ಅದನ್ನೂ ಅದರ ಸಾಮಾನುಗಳನ್ನೂ ಯಜ್ಞವೇದಿಯನ್ನೂ ವೇದಿಯ ಉಪಕರಣಗಳನ್ನೂ ಅಭಿಷೇಕಿಸಿ ಪ್ರತಿಷ್ಠಿಸಿದಾಗ
2
ಇಸ್ರಾಯೇಲ್ಯರ ಪ್ರಧಾನಪುರುಷರು ಅಂದರೆ ಗೋತ್ರಪ್ರಮುಖರಾಗಿದ್ದು ಕುಲಾಧಿಪತಿಗಳಾಗಿಯೂ ಲೆಕ್ಕಿಸಲ್ಪಟ್ಟ ಭಟರ ಮೇಲೆ ನಾಯಕರಾಗಿಯೂ ಇದ್ದವರು ಕಾಣಿಕೆಗಳನ್ನು ತಂದು ಸಮರ್ಪಿಸಿದರು.
3
ಇಬ್ಬರಿಬ್ಬರು ಒಂದು ಕಮಾನುಬಂಡಿಯನ್ನೂ ಒಂದು ಜೋಡಿ ಎತ್ತುಗಳನ್ನೂ ಅಂತು ಆರು ಬಂಡಿಗಳನ್ನೂ ಆರು ಜೋಡಿ ಎತ್ತುಗಳನ್ನೂ ದೇವದರ್ಶನದ ಗುಡಾರದ ಮುಂದೆ ಯೆಹೋವನ ಸನ್ನಿಧಿಗೆ ತಂದು ಒಪ್ಪಿಸಿದರು.
4
ಯೆಹೋವನು ಮೋಶೆಗೆ - ನೀನು, ಇವರ ಕೈಯಿಂದ ಈ ಕಾಣಿಕೆಯ ವಸ್ತುಗಳನ್ನು ತೆಗೆದುಕೋ; ಇವು ದೇವದರ್ಶನದ ಗುಡಾರದ ಸೇವೆಗೋಸ್ಕರವಾಗಿರಲಿ; ಇವುಗಳನ್ನು ಲೇವಿಯರಿಗೆ ಅವರವರ ಕೆಲಸಕ್ಕೆ ತಕ್ಕ ಹಾಗೆ ಕೊಡಬೇಕು ಎಂದು ಆಜ್ಞಾಪಿಸಲಾಗಿ
6
ಮೋಶೆ ಆ ಬಂಡಿಗಳನ್ನೂ ಎತ್ತುಗಳನ್ನೂ ತೆಗೆದುಕೊಂಡು ಲೇವಿಯರಿಗೆ ಕೊಟ್ಟನು.
7
ಅವನು ಗೇರ್ಷೋನ್ಯರಿಗೆ ಅವರು ಮಾಡಬೇಕಾದ ಕೆಲಸಕ್ಕೆ ತಕ್ಕ ಹಾಗೆ ಎರಡು ಬಂಡಿ ಎರಡು ಜೋಡಿ ಎತ್ತುಗಳನ್ನೂ
8
ಮೆರಾರೀಯರಿಗೋಸ್ಕರ ಅವರ ಕೆಲಸಕ್ಕೆ ತಕ್ಕ ಹಾಗೆ ನಾಲ್ಕು ಬಂಡಿ ನಾಲ್ಕು ಜೋಡಿ ಎತ್ತುಗಳನ್ನೂ ಮಹಾಯಾಜಕನಾದ ಆರೋನನ ಮಗ ಈತಾಮಾರನ ಕೈಗೆ ಒಪ್ಪಿಸಿದನು.
9
ಕೆಹಾತ್ಯರಿಗೆ ಮಾತ್ರ ಏನೂ ಕೊಡಲಿಲ್ಲ; ದೇವದರ್ಶನದ ಗುಡಾರದ ಸಾಮಾನುಗಳನ್ನು ವಹಿಸುವದೇ ಅವರಿಗೆ ನೇಮಕವಾದ ಕೆಲಸ; ಅವರು ಅವುಗಳನ್ನು ಹೆಗಲಿನ ಮೇಲೆ ಹೊರುತ್ತಿದ್ದರು.
10
ಯಜ್ಞವೇದಿಯು ಅಭಿಷೇಕಿಸಲ್ಪಟ್ಟ ದಿನದಲ್ಲಿ ಕುಲಾಧಿಪತಿಗಳು ಅದರ ಪ್ರತಿಷ್ಠೆಗಾಗಿ ಕಾಣಿಕೆಗಳನ್ನು ತಂದು ಅದರ ಮುಂದೆ ಇಟ್ಟರು.
11
ಆಗ ಯೆಹೋವನು ಮೋಶೆಗೆ - ಒಬ್ಬೊಬ್ಬ ಕುಲಾಧಿಪತಿ ಒಂದೊಂದು ದಿನದಲ್ಲಿ ಯಜ್ಞವೇದಿಯ ಪ್ರತಿಷ್ಠೆಗಾಗಿ ತನ್ನ ಕಾಣಿಕೆಯನ್ನು ಸಮರ್ಪಿಸಬೇಕೆಂದು ಆಜ್ಞಾಪಿಸಿದನು.
12
ಮೊದಲನೆಯ ದಿನದಲ್ಲಿ ಕಾಣಿಕೆ ತಂದವನು ಯೆಹೂದ ಕುಲಾಧಿಪತಿ ಅಮ್ಮೀನಾದಾಬನ ಮಗನಾದ ನಹಶೋನನು.
13
ಅವನ ಕಾಣಿಕೆಯು ಯಾವದಂದರೆ - ದೇವರ ಸೇವೆಗೆ ನೇಮಕವಾದ ರೂಪಾಯಿಯ ತೂಕದ ಮೇರೆಗೆ ನೂರ ಮೂವತ್ತು ರೂಪಾಯಿ ತೂಕದ ಬೆಳ್ಳಿಯ ಹರಿವಾಣವು; ಎಪ್ಪತ್ತು ತೊಲೆ ತೂಕವುಳ್ಳ ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು;
14
ಧೂಪದ್ರವ್ಯ ತುಂಬಿದ್ದ ಹತ್ತು ತೊಲೆ ತೂಕವುಳ್ಳ ಚಿನ್ನದ ಧೂಪಾರತಿ;
15
ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಒಂದು ವರುಷದ ಕುರಿ;
16
ದೋಷಪರಿಹಾರಕಯಜ್ಞಕ್ಕಾಗಿ ಒಂದು ಹೋತ;
17
ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು, ವರುಷದ ಐದು ಕುರಿಗಳು ಇವುಗಳೇ. ಇದೇ ಅಮ್ಮೀನಾದಾಬನ ಮಗನಾದ ನಹಶೋನನು ಕೊಟ್ಟ ಕಾಣಿಕೆ.
18
ಎರಡನೆಯ ದಿನದಲ್ಲಿ ಇಸ್ಸಾಕಾರ್ ಕುಲಾಧಿಪತಿ ಚೂವಾರನ ಮಗನಾದ ನೆತನೇಲನು ಕಾಣಿಕೆಯನ್ನು ಸಮರ್ಪಿಸಿದನು.
19
ಅವನ ಕಾಣಿಕೆ ಯಾವದಂದರೆ - ದೇವರ ಸೇವೆಗೆ ನೇಮಕವಾದ ರೂಪಾಯಿಯ ತೂಕದ ಮೇರೆಗೆ ನೂರ ಮೂವತ್ತು ರೂಪಾಯಿ ತೂಕದ ಬೆಳ್ಳಿಯ ಹರಿವಾಣವು; ಎಪ್ಪತ್ತು ತೊಲೆ ತೂಕವುಳ್ಳ ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು;
20
ಧೂಪದ್ರವ್ಯ ತುಂಬಿದ್ದ ಹತ್ತು ತೊಲೆ ತೂಕವುಳ್ಳ ಚಿನ್ನದ ಧೂಪಾರತಿ;
21
ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಒಂದು ವರುಷದ ಕುರಿ;
22
ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತ;
23
ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು, ವರುಷದ ಐದು ಕುರಿಗಳು ಇವುಗಳೇ. ಇದೇ ಚೂವಾರನ ಮಗನಾದ ನೆತನೇಲನು ಕೊಟ್ಟ ಕಾಣಿಕೆ.
24
ಮೂರನೆಯ ದಿನದಲ್ಲಿ ಜೆಬುಲೂನ್ ಕುಲಾಧಿಪತಿ ಹೇಲೋನನ ಮಗನಾದ ಎಲೀಯಾಬನು ಕಾಣಿಕೆಯನ್ನು ಸಮರ್ಪಿಸಿದನು.
25
ಅವನ ಕಾಣಿಕೆ ಯಾವದಂದರೆ - ದೇವರ ಸೇವೆಗೆ ನೇಮಕವಾದ ರೂಪಾಯಿಯ ತೂಕದ ಮೇರೆಗೆ ನೂರ ಮೂವತ್ತು ರೂಪಾಯಿ ತೂಕದ ಬೆಳ್ಳಿಯ ಹರಿವಾಣವು; ಎಪ್ಪತ್ತು ತೊಲೆ ತೂಕವುಳ್ಳ ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು;
26
ಧೂಪದ್ರವ್ಯ ತುಂಬಿದ್ದ ಹತ್ತುತೊಲೆ ತೂಕವುಳ್ಳ ಚಿನ್ನದ ಧೂಪಾರತಿ;
27
ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಒಂದು ವರುಷದ ಕುರಿ;
28
ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತ;
29
ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು, ವರುಷದ ಐದು ಕುರಿಗಳು ಇವುಗಳೇ. ಇದು ಹೇಲೋನನ ಮಗನಾದ ಎಲೀಯಾಬನು ಕೊಟ್ಟ ಕಾಣಿಕೆ.
30
ನಾಲ್ಕನೆಯ ದಿನದಲ್ಲಿ ರೂಬೇನ್ ಕುಲಾಧಿಪತಿ ಶದೇಯೂರನ ಮಗನಾದ ಎಲೀಚೂರನು ಕಾಣಿಕೆಯನ್ನು ಸಮರ್ಪಿಸಿದನು.
31
ಅವನ ಕಾಣಿಕೆ ಯಾವದಂದರೆ - ದೇವರ ಸೇವೆಗೆ ನೇಮಕವಾದ ರೂಪಾಯಿಯ ತೂಕದ ಮೇರೆಗೆ ನೂರ ಮೂವತ್ತು ರೂಪಾಯಿ ತೂಕದ ಬೆಳ್ಳಿಯ ಹರಿವಾಣವು; ಎಪ್ಪತ್ತು ತೊಲೆ ತೂಕವುಳ್ಳ ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು;
32
ಧೂಪದ್ರವ್ಯ ತುಂಬಿದ್ದ ಹತ್ತು ತೊಲೆ ತೂಕವುಳ್ಳ ಚಿನ್ನದ ಧೂಪಾರತಿ;
33
ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಒಂದು ವರುಷದ ಕುರಿ;
34
ದೋಷಪರಿಹಾರಕಯಜ್ಞಕ್ಕಾಗಿ ಒಂದು ಹೋತ;
35
ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು, ವರುಷದ ಐದು ಕುರಿಗಳು ಇವುಗಳೇ. ಇದೇ ಶೆದೇಯೂರನ ಮಗನಾದ ಎಲೀಚೂರನು ಕೊಟ್ಟ ಕಾಣಿಕೆ.
36
ಐದನೆಯ ದಿನದಲ್ಲಿ ಸಿಮೆಯೋನ್ ಕುಲಾಧಿಪತಿ ಚೂರೀಷದ್ದೈಯ ಮಗನಾದ ಶೆಲುಮೀಯೇಲನು ಕಾಣಿಕೆಯನ್ನು ಸಮರ್ಪಿಸಿದನು.
37
ಅವನ ಕಾಣಿಕೆ ಯಾವದಂದರೆ - ದೇವರ ಸೇವೆಗೆ ನೇಮಕವಾದ ರೂಪಾಯಿಯ ತೂಕದ ಮೇರೆಗೆ ನೂರ ಮೂವತ್ತು ರೂಪಾಯಿ ತೂಕದ ಬೆಳ್ಳಿಯ ಹರಿವಾಣವು; ಎಪ್ಪತ್ತು ತೊಲೆ ತೂಕವುಳ್ಳ ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು;
38
ಧೂಪದ್ರವ್ಯ ತುಂಬಿದ್ದ ಹತ್ತು ತೊಲೆ ತೂಕವುಳ್ಳ ಚಿನ್ನದ ಧೂಪಾರತಿ;
39
ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಒಂದು ವರುಷದ ಕುರಿ;
40
ದೋಷಪರಿಹಾರಕಯಜ್ಞಕ್ಕಾಗಿ ಒಂದು ಹೋತ;
41
ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು, ವರುಷದ ಐದು ಕುರಿಗಳು ಇವುಗಳೇ. ಇದೇ ಚೂರೀಷದ್ದೈಯ ಮಗನಾದ ಶೆಲುಮೀಯೇಲನು ಕೊಟ್ಟ ಕಾಣಿಕೆ.
42
ಆರನೆಯ ದಿನದಲ್ಲಿ ಗಾದ್ ಕುಲಾಧಿಪತಿ ದೆಗೂವೇಲನ ಮಗನಾದ ಎಲ್ಯಾಸಾಫನು ಕಾಣಿಕೆಯನ್ನು ಸಮರ್ಪಿಸಿದನು.
43
ಅವನ ಕಾಣಿಕೆ ಯಾವದಂದರೆ - ದೇವರ ಸೇವೆಗೆ ನೇಮಕವಾದ ರೂಪಾಯಿಯ ತೂಕದ ಮೇರೆಗೆ ನೂರ ಮೂವತ್ತು ರೂಪಾಯಿ ತೂಕದ ಬೆಳ್ಳಿಯ ಹರಿವಾಣವು; ಎಪ್ಪತ್ತು ತೊಲೆ ತೂಕವುಳ್ಳ ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು;
44
ಧೂಪದ್ರವ್ಯ ತುಂಬಿದ್ದ ಹತ್ತು ತೊಲೆ ತೂಕವುಳ್ಳ ಚಿನ್ನದ ಧೂಪಾರತಿ;
45
ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಒಂದು ವರುಷದ ಕುರಿ;
46
ದೋಷಪರಿಹಾರಕಯಜ್ಞಕ್ಕಾಗಿ ಒಂದು ಹೋತ;
47
ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು, ವರುಷದ ಐದು ಕುರಿಗಳು ಇವುಗಳೇ. ಇದೇ ದೆಗೂವೇಲನ ಮಗನಾದ ಎಲ್ಯಾಸಾಫನು ಕೊಟ್ಟ ಕಾಣಿಕೆ.
48
ಏಳನೆಯ ದಿನದಲ್ಲಿ ಎಫ್ರಾಯೀಮ್ ಕುಲಾಧಿಪತಿ ಅಮ್ಮೀಹೂದನ ಮಗನಾದ ಎಲೀಷಾಮನು ಕಾಣಿಕೆಯನ್ನು ಸಮರ್ಪಿಸಿದನು.
49
ಅವನ ಕಾಣಿಕೆ ಯಾವದಂದರೆ - ದೇವರ ಸೇವೆಗೆ ನೇಮಕವಾದ ರೂಪಾಯಿಯ ತೂಕದ ಮೇರೆಗೆ ನೂರ ಮೂವತ್ತು ರೂಪಾಯಿ ತೂಕದ ಬೆಳ್ಳಿಯ ಹರಿವಾಣವು; ಎಪ್ಪತ್ತು ತೊಲೆ ತೂಕವುಳ್ಳ ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು;
50
ಧೂಪದ್ರವ್ಯ ತುಂಬಿದ್ದ ಹತ್ತು ತೊಲೆ ತೂಕವುಳ್ಳ ಚಿನ್ನದ ಧೂಪಾರತಿ;
51
ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಒಂದು ವರುಷದ ಕುರಿ;
52
ದೋಷಪರಿಹಾರಕಯಜ್ಞಕ್ಕಾಗಿ ಒಂದು ಹೋತ;
53
ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು, ವರುಷದ ಐದು ಕುರಿಗಳು ಇವುಗಳೇ. ಇದೇ ಅಮ್ಮೀಹೂದನ ಮಗನಾದ ಎಲೀಷಾಮನು ಕೊಟ್ಟ ಕಾಣಿಕೆ.
54
ಎಂಟನೆಯ ದಿನದಲ್ಲಿ ಮನಸ್ಸೆ ಕುಲಾಧಿಪತಿ ಪೆದಾಚೂರನ ಮಗನಾದ ಗಮ್ಲೀಯೇಲನು ಕಾಣಿಕೆಯನ್ನು ಸಮರ್ಪಿಸಿದನು.
55
ಅವನ ಕಾಣಿಕೆ ಯಾವದಂದರೆ - ದೇವರ ಸೇವೆಗೆ ನೇಮಕವಾದ ರೂಪಾಯಿಯ ತೂಕದ ಮೇರೆಗೆ ನೂರ ಮೂವತ್ತು ರೂಪಾಯಿ ತೂಕದ ಬೆಳ್ಳಿಯ ಹರಿವಾಣವು; ಎಪ್ಪತ್ತು ತೊಲೆ ತೂಕವುಳ್ಳ ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು;
56
ಧೂಪದ್ರವ್ಯ ತುಂಬಿದ್ದ ಹತ್ತು ತೊಲೆ ತೂಕವುಳ್ಳ ಚಿನ್ನದ ಧೂಪಾರತಿ;
57
ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಒಂದು ವರುಷದ ಕುರಿ;
58
ದೋಷಪರಿಹಾರಕಯಜ್ಞಕ್ಕಾಗಿ ಒಂದು ಹೋತ;
59
ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು, ವರುಷದ ಐದು ಕುರಿಗಳು ಇವುಗಳೇ. ಇದೇ ಪೆದಾಚೂರನ ಮಗನಾದ ಗಮ್ಲೀಯೇಲನು ಕೊಟ್ಟ ಕಾಣಿಕೆ.
60
ಒಂಭತ್ತನೆಯ ದಿನದಲ್ಲಿ ಬೆನ್ಯಾಮೀನ್ ಕುಲಾಧಿಪತಿ ಗಿದ್ಯೋನಿಯ ಮಗನಾದ ಅಬೀದಾನನು ಕಾಣಿಕೆಯನ್ನು ಸಮರ್ಪಿಸಿದನು.
61
ಅವನ ಕಾಣಿಕೆ ಯಾವದಂದರೆ - ದೇವರ ಸೇವೆಗೆ ನೇಮಕವಾದ ರೂಪಾಯಿಯ ತೂಕದ ಮೇರೆಗೆ ನೂರ ಮೂವತ್ತು ರೂಪಾಯಿ ತೂಕದ ಬೆಳ್ಳಿಯ ಹರಿವಾಣವು; ಎಪ್ಪತ್ತು ತೊಲೆ ತೂಕವುಳ್ಳ ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು;
62
ಧೂಪದ್ರವ್ಯ ತುಂಬಿದ್ದ ಹತ್ತು ತೊಲೆ ತೂಕವುಳ್ಳ ಚಿನ್ನದ ಧೂಪಾರತಿ;
63
ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಒಂದು ವರುಷದ ಕುರಿ;
64
ದೋಷಪರಿಹಾರಕಯಜ್ಞಕ್ಕಾಗಿ ಒಂದು ಹೋತ;
65
ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು, ವರುಷದ ಐದು ಕುರಿಗಳು ಇವುಗಳೇ. ಇದೇ ಗಿದ್ಯೋನಿಯ ಮಗನಾದ ಅಬೀದಾನನು ಕೊಟ್ಟ ಕಾಣಿಕೆ.
66
ಹತ್ತನೆಯ ದಿನದಲ್ಲಿ ದಾನ್ ಕುಲಾಧಿಪತಿ ಅಮ್ಮೀಷದ್ದೈಯ ಮಗನಾದ ಅಹೀಗೆಜೆರನು ಕಾಣಿಕೆಯನ್ನು ಸಮರ್ಪಿಸಿದನು.
67
ಅವನ ಕಾಣಿಕೆ ಯಾವದಂದರೆ - ದೇವರ ಸೇವೆಗೆ ನೇಮಕವಾದ ರೂಪಾಯಿಯ ತೂಕದ ಮೇರೆಗೆ ನೂರ ಮೂವತ್ತು ರೂಪಾಯಿ ತೂಕದ ಬೆಳ್ಳಿಯ ಹರಿವಾಣವು; ಎಪ್ಪತ್ತು ತೊಲೆ ತೂಕವುಳ್ಳ ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು;
68
ಧೂಪದ್ರವ್ಯ ತುಂಬಿದ್ದ ಹತ್ತು ತೊಲೆ ತೂಕವುಳ್ಳ ಚಿನ್ನದ ಧೂಪಾರತಿ;
69
ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಒಂದು ವರುಷದ ಕುರಿ;
70
ದೋಷಪರಿಹಾರಕಯಜ್ಞಕ್ಕಾಗಿ ಒಂದು ಹೋತ;
71
ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು, ವರುಷದ ಐದು ಕುರಿಗಳು ಇವುಗಳೇ. ಇದೇ ಅಮ್ಮೀಷದ್ದೈಯ ಮಗನಾದ ಅಹೀಗೆಜೆರನು ಕೊಟ್ಟ ಕಾಣಿಕೆ.
72
ಹನ್ನೊಂದನೆಯ ದಿನದಲ್ಲಿ ಆಶೇರ್ ಕುಲಾಧಿಪತಿ ಒಕ್ರಾನನ ಮಗನಾದ ಪಗೀಯೇಲನು ಕಾಣಿಕೆಯನ್ನು ಸಮರ್ಪಿಸಿದನು.
73
ಅವನ ಕಾಣಿಕೆ ಯಾವದಂದರೆ - ದೇವರ ಸೇವೆಗೆ ನೇಮಕವಾದ ರೂಪಾಯಿಯ ತೂಕದ ಮೇರೆಗೆ ನೂರ ಮೂವತ್ತು ರೂಪಾಯಿ ತೂಕದ ಬೆಳ್ಳಿಯ ಹರಿವಾಣವು; ಎಪ್ಪತ್ತು ತೊಲೆ ತೂಕವುಳ್ಳ ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು;
74
ಧೂಪದ್ರವ್ಯ ತುಂಬಿದ್ದ ಹತ್ತು ತೊಲೆ ತೂಕವುಳ್ಳ ಚಿನ್ನದ ಧೂಪಾರತಿ;
75
ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಒಂದು ವರುಷದ ಕುರಿ;
76
ದೋಷಪರಿಹಾರಕಯಜ್ಞಕ್ಕಾಗಿ ಒಂದು ಹೋತ;
77
ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು, ವರುಷದ ಐದು ಕುರಿಗಳು ಇವುಗಳೇ. ಇದೇ ಒಕ್ರಾನನ ಮಗನಾದ ಪಗೀಯೇಲನು ಕೊಟ್ಟ ಕಾಣಿಕೆ.
78
ಹನ್ನೆರಡನೆಯ ದಿನದಲ್ಲಿ ನಫ್ತಾಲಿ ಕುಲಾಧಿಪತಿ ಏನಾನನ ಮಗನಾದ ಅಹೀರನು ಕಾಣಿಕೆಯನ್ನು ಸಮರ್ಪಿಸಿದನು.
79
ಅವನ ಕಾಣಿಕೆ ಯಾವದಂದರೆ - ದೇವರ ಸೇವೆಗೆ ನೇಮಕವಾದ ರೂಪಾಯಿಯ ತೂಕದ ಮೇರೆಗೆ ನೂರ ಮೂವತ್ತು ರೂಪಾಯಿ ತೂಕದ ಬೆಳ್ಳಿಯ ಹರಿವಾಣವು; ಎಪ್ಪತ್ತು ತೊಲೆ ತೂಕವುಳ್ಳ ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು;
80
ಧೂಪದ್ರವ್ಯ ತುಂಬಿದ್ದ ಹತ್ತು ತೊಲೆ ತೂಕವುಳ್ಳ ಚಿನ್ನದ ಧೂಪಾರತಿ;
81
ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಒಂದು ವರುಷದ ಕುರಿ;
82
ದೋಷಪರಿಹಾರಕಯಜ್ಞಕ್ಕಾಗಿ ಒಂದು ಹೋತ;
83
ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು, ವರುಷದ ಐದು ಕುರಿಗಳು ಇವುಗಳೇ. ಇದೇ ಏನಾನನ ಮಗನಾದ ಅಹೀರನು ಕೊಟ್ಟ ಕಾಣಿಕೆ.
84
ಯಜ್ಞವೇದಿಯು ಅಭಿಷೇಕಿಸಲ್ಪಟ್ಟ ದಿನದಲ್ಲಿ ಇಸ್ರಾಯೇಲ್ಯರ ಕುಲಾಧಿಪತಿಗಳು ಅದರ ಪ್ರತಿಷ್ಠೆಗಾಗಿ ಕೊಟ್ಟ ಕಾಣಿಕೆಗಳು ಒಟ್ಟಾಗಿ 12 ಬೆಳ್ಳಿಯ ಹರಿವಾಣಗಳು,12 ಬೆಳ್ಳಿಯ ಬಟ್ಟಲುಗಳು,12 ಚಿನ್ನದ ಧೂಪಾರತಿಗಳು.
85
ಒಂದೊಂದು ಬೆಳ್ಳಿಯ ಹರಿವಾಣವು 130 ರೂಪಾಯಿ ತೂಕವುಳ್ಳದ್ದು; ಒಂದೊಂದು ಬಟ್ಟಲು 70 ರೂಪಾಯಿ ತೂಕದ್ದು. ಆ ಬೆಳ್ಳಿಯ ಪಾತ್ರೆಗಳ ಒಟ್ಟು ತೂಕ ದೇವರ ಸೇವೆಗೆ ನೇಮಕವಾದ ರೂಪಾಯಿಯ ಪ್ರಕಾರ 2,400 ರೂಪಾಯಿ.
86
ಧೂಪದ್ರವ್ಯ ತುಂಬಿದ್ದ ಒಂದೊಂದು ಚಿನ್ನದ ಧೂಪಾರತಿಯ ತೂಕವು ದೇವರ ಸೇವೆಗೆ ನೇಮಕವಾದ ತೊಲೆಯ ಪ್ರಕಾರ ಹತ್ತು ಹತ್ತು ತೊಲೆಯ ಮೇರೆಗೆ ಇರುವದರಿಂದ ಆ ಹನ್ನೆರಡು ಧೂಪಾರತಿಗಳ ಚಿನ್ನವು ಒಟ್ಟಾಗಿ 120 ತೊಲೆ.
87
ಸರ್ವಾಂಗಹೋಮಕ್ಕಾಗಿ ಕೊಟ್ಟ ಪಶುಗಳು - ಹೋರಿಗಳು 12, ಟಗರುಗಳು 12, ವರುಷದ ಕುರಿಗಳು 12; ಇವುಗಳೊಂದಿಗೆ ಸಮರ್ಪಿಸಬೇಕಾದ ಧಾನ್ಯದ್ರವ್ಯವನ್ನೂ ಕೊಟ್ಟರು. ದೋಷಪರಿಹಾರಕಯಜ್ಞಕ್ಕಾಗಿ ಕೊಟ್ಟದ್ದು 12 ಹೋತಗಳು.
88
ಸಮಾಧಾನಯಜ್ಞಕ್ಕಾಗಿ ಕೊಟ್ಟ ಪಶುಗಳು - ಹೋರಿಗಳು 24, ಟಗರುಗಳು 60, ಹೋತಗಳು 60, ವರುಷದ ಕುರಿಗಳು 60. ಯಜ್ಞವೇದಿಯು ಅಭಿಷೇಕಿಸಲ್ಪಟ್ಟ ನಂತರ ಇದೇ ಅದರ ಪ್ರತಿಷ್ಠೆಗೆ ಸಮರ್ಪಿಸಲ್ಪಟ್ಟ ಕಾಣಿಕೆ.
89
ಮೋಶೆ ಯೆಹೋವನ ಸಂಗಡ ಮಾತಾಡಬೇಕೆಂದು ದೇವದರ್ಶನದ ಗುಡಾರದೊಳಗೆ ಹೋದಾಗ ಆಜ್ಞಾಶಾಸನಗಳ ಮಂಜೂಷದ ಮೇಲಣ ಕೃಪಾಸನದ ಮೇಲಿನಿಂದ ಆ ಎರಡು ಕೆರೂಬಿಗಳ ನಡುವೆಯಿಂದ ತನ್ನ ಸಂಗಡ ಮಾತಾಡುವ ಯೆಹೋವನ ಸ್ವರವು ಅವನಿಗೆ ಕೇಳಿಸಿತು. ಹೀಗೆ ಆತನು ಅವನ ಸಂಗಡ ಮಾತಾಡಿದನು.
← Chapter 6
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 8 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
Recommended Reading
Commentary
Numbers Commentaries
→
Devotional
Numbers Devotional Guide
→
Get This Bible
BSI Study Bible
→