bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Leviticus 1
Leviticus 1
Kannada Bible (KNCL) BSI 2016
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 2 →
1
ಸರ್ವೇಶ್ವರ ಸ್ವಾಮಿ ಮೋಶೆಯನ್ನು ಕರೆದು, ದೇವದರ್ಶನದ ಗುಡಾರದಿಂದ ಅವನ ಸಂಗಡ ಮಾತಾಡಿ, ಇಸ್ರಯೇಲರಿಗೆ ಹೀಗೆ ಆಜ್ಞಾಪಿಸಬೇಕೆಂದು ತಿಳಿಸಿದರು.
2
“ನಿಮ್ಮಲ್ಲಿ ಯಾರಾದರೂ ಸರ್ವೇಶ್ವರನಿಗೆ ಒಂದು ಪ್ರಾಣಿಯನ್ನು ಸಮರ್ಪಿಸಲು ಆಶಿಸಿದರೆ, ಅದನ್ನು ದನಕರುಗಳಿಂದಾಗಲಿ ಆಡುಕುರಿಗಳಿಂದಾಗಲಿ ಆಯ್ದುಕೊಂಡು ಸಮರ್ಪಿಸಲಿ.
3
ಅಂಥವನು ದನಕರುಗಳನ್ನು ದಹನಬಲಿಯನ್ನಾಗಿ ಸಮರ್ಪಿಸುವುದಾದರೆ ಆ ಪ್ರಾಣಿ ಕಳಂಕರಹಿತವಾದ ಗಂಡಾಗಿರಬೇಕು. ಸರ್ವೇಶ್ವರನಿಗೆ ಒಪ್ಪಿಗೆಯಾಗುವಂತೆ ಅದನ್ನು ದೇವದರ್ಶನದ ಗುಡಾರದ ಬಳಿಗೆ ತರಬೇಕು.
4
ಅರ್ಪಿಸುವವನು ಆ ಪ್ರಾಣಿಯ ತಲೆಯ ಮೇಲೆ ಕೈಯಿಡಬೇಕು. ಆಗ ಅದು ಅವನ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಅಂಗೀಕೃತವಾಗುವುದು.
5
ಅವನು ಅದನ್ನು ಸರ್ವೇಶ್ವರನ ಎದುರಿನಲ್ಲಿ ವಧಿಸಬೇಕು. ಆರೋನನ ವಂಶಜರಾದ ಯಾಜಕರು ಅದರ ರಕ್ತವನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ಬಾಗಿಲಿಗೆ ಎದುರಾಗಿರುವ ಬಲಿಪೀಠದ ಸುತ್ತಲೂ ಚಿಮುಕಿಸಬೇಕು.
6
ಅದೂ ಅಲ್ಲದೆ ಅರ್ಪಿಸುವವನು ಆ ಪ್ರಾಣಿಯ ಚರ್ಮವನ್ನು ಸುಲಿದು ಅದರ ದೇಹವನ್ನು ತುಂಡುತುಂಡಾಗಿ ಕಡಿಯಬೇಕು.
7
ಆರೋನನ ವಂಶಜರಾದ ಯಾಜಕರು ಬಲಿಪೀಠದ ಮೇಲೆ ಬೆಂಕಿಯನ್ನಿಟ್ಟು
8
ಅದರ ಮೇಲೆ ಕಟ್ಟಿಗೆಯನ್ನು ಪೇರಿಸಬೇಕು. ಪ್ರಾಣಿಯ ಆ ತುಂಡುಗಳನ್ನೂ, ತಲೆಯನ್ನೂ, ಕೊಬ್ಬನ್ನೂ ಅದರ ಮೇಲೆ ಕ್ರಮವಾಗಿ ಇಡಬೇಕು.
9
ಅದರ ಕರುಳುಗಳನ್ನೂ ಕಾಲುಗಳನ್ನೂ ನೀರಿನಲ್ಲಿ ತೊಳೆದ ನಂತರ ಯಾಜಕನು ಅದನ್ನು ಪೂರ್ತಿಯಾಗಿ ಬಲಿಪೀಠದ ಮೇಲೆ ಹೋಮಮಾಡಬೇಕು. ಅದು ದಹನಬಲಿ. ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ಬಲಿ.
10
“ಒಬ್ಬನು ಆಡನ್ನಾಗಲಿ, ಕುರಿಯನ್ನಾಗಲಿ ದಹನಬಲಿದಾನ ಮಾಡಬೇಕೆಂದಿದ್ದರೆ ಅಂಥವನು ಕಳಂಕರಹಿತವಾದ ಗಂಡನ್ನು ತರಲಿ.
11
ಅದನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಬಲಿಪೀಠದ ಉತ್ತರದ ಕಡೆ ವಧಿಸಲಿ. ತರುವಾಯ ಆರೋನನ ವಂಶಜರಾದ ಯಾಜಕರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಲಿ.
12
ಅರ್ಪಿಸುವವನು ಆ ಪ್ರಾಣಿಯ ದೇಹವನ್ನು ತುಂಡುತುಂಡಾಗಿ ಕಡಿದ ಮೇಲೆ ಯಾಜಕನು ಆ ತುಂಡುಗಳನ್ನೂ ತಲೆಯನ್ನೂ, ಕೊಬ್ಬನ್ನೂ ಬಲಿಪೀಠದ ಮೇಲಿನ ಬೆಂಕಿಯಲ್ಲಿ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು.
13
ಅದರ ಕರುಳುಗಳನ್ನೂ, ಕಾಲುಗಳನ್ನೂ ನೀರಿನಲ್ಲಿ ತೊಳೆಸಿದ ನಂತರ ಯಾಜಕನು ಅದನ್ನು ಪೂರ್ತಿಯಾಗಿ ಬಲಿಪೀಠದ ಮೇಲೆ ಹೋಮಮಾಡಬೇಕು. ಅದು ದಹನಬಲಿ, ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ಬಲಿ.
14
ಸರ್ವೇಶ್ವರನಿಗೆ ದಹನಬಲಿಯಾಗಿ ಸಮರ್ಪಿಸುವಂಥದ್ದು ಪಕ್ಷಿ ಜಾತಿಯಾಗಿದ್ದರೆ ಅದು ಬೆಳವಕ್ಕಿಯಾಗಿರಲಿ, ಅಥವಾ ಮರಿ ಪಾರಿವಾಳ ಆಗಿರಲಿ.
15
ಯಾಜಕನು ಅದನ್ನು ಬಲಿಪೀಠದ ಬಳಿಗೆ ತಂದು ಕುತ್ತಿಗೆ ಮುರಿದು ಬಲಿಪೀಠದ ಮೇಲೆ ಹೋಮಮಾಡಲಿ; ಅದರ ರಕ್ತವನ್ನು ಬಲಿಪೀಠದ ಪಕ್ಕದಲ್ಲಿ ಹಿಂಡಲಿ.
16
ಅದರ ಕರುಳುಗಳನ್ನೂ, ಗರಿಗಳನ್ನೂ ತೆಗೆದುಬಿಟ್ಟು ಬಲಿಪೀಠದ ಪೂರ್ವದಿಕ್ಕಿನಲ್ಲಿರುವ ಬೂದಿಯ ಎಡೆಯಲ್ಲಿ ಬಿಸಾಡಲಿ.
17
ಯಾಜಕನು ಆ ಹಕ್ಕಿಯ ದೇಹವನ್ನು ಇಬ್ಭಾಗವಾಗಿ ಸೀಳಲಿ; ಒಂದೊಂದು ಭಾಗದಲ್ಲಿ ಒಂದು ರೆಕ್ಕೆ ಇರುವಂತೆ ಸೀಳಲಿ. ಅನಂತರ ಅದನ್ನು ಬಲಿಪೀಠದ ಮೇಲಿನ ಬೆಂಕಿಯಲ್ಲಿರುವ ಕಟ್ಟಿಗೆಯ ಮೇಲೆ ಹೋಮಮಾಡಲಿ. ಅದು ದಹನಬಲಿ, ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ಬಲಿ.
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 2 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
Recommended Reading
Commentary
Leviticus Commentaries
→
Devotional
Leviticus Devotional Guide
→
Get This Bible
KNCL Study Bible
→