bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Leviticus 20
Leviticus 20
Kannada Bible (KNCL) BSI 2016
← Chapter 19
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 21 →
1
ಇಸ್ರಯೇಲರಿಗೆ ಹೀಗೆ ಆಜ್ಞಾಪಿಸಬೇಕೆಂದು ಸರ್ವೇಶ್ವರ ಸ್ವಾಮಿ ಮೋಶೆಗೆ ಹೇಳಿದರು.
2
ಇಸ್ರಯೇಲರಲ್ಲೇ ಆಗಲಿ, ಅವರ ಮಧ್ಯೆ ವಾಸಿಸುವ ಅನ್ಯದೇಶೀಯರಲ್ಲೇ ಆಗಲಿ ಯಾವನಾದರು ತನ್ನ ಮಕ್ಕಳಲ್ಲಿ ಒಂದನ್ನು ಮೋಲೆಕ ದೇವತೆಗೆ ಅರ್ಪಿಸಿದರೆ ಅವನಿಗೆ ಮರಣ ಶಿಕ್ಷೆಯಾಗಬೇಕು; ನಾಡಿನ ಜನರು ಅವನನ್ನು ಕಲ್ಲೆಸೆದು ಕೊಲ್ಲಬೇಕು.
3
ಅವನು ತನ್ನ ಮಕ್ಕಳಲ್ಲಿ ಒಂದನ್ನು ಮೋಲೆಕ ದೇವತೆಗೆ ಅರ್ಪಿಸಿ ನನ್ನ ದೇವಸ್ಥಾನವನ್ನು ಅಶುದ್ಧಮಾಡಿ ನನ್ನ ಪವಿತ್ರ ನಾಮಕ್ಕೆ ಅಪಕೀರ್ತಿ ತಂದಿದ್ದಾನೆ. ಆದ್ದರಿಂದ ನಾನು ಅವನಿಗೆ ವಿಮುಖನಾಗಿ ಅವನನ್ನು ನನ್ನ ಜನತೆಯಿಂದ ತೆಗೆದುಹಾಕುವೆನು.
4
ಆ ವ್ಯಕ್ತಿ ತನ್ನ ಮಕ್ಕಳಲ್ಲಿ ಒಂದನ್ನು ಮೋಲೆಕ ದೇವತೆಗೆ ಅರ್ಪಿಸಿದ್ದರೂ ನಾಡಿನವರು ಅವನನ್ನು ಕೊಲ್ಲದೆ ಅವನು ಮಾಡಿದ ಕೃತ್ಯವನ್ನು ನೋಡಿಯೂ ನೋಡದವರಂತೆ ವರ್ತಿಸಿದರೆ
5
ನಾನು ಆ ವ್ಯಕ್ತಿಗೂ ಅವನ ಕುಟುಂಬದವರಿಗೂ ವಿಮುಖನಾಗುವೆನು; ಅವನನ್ನು ಮಾತ್ರವಲ್ಲ, ಅವನನ್ನು ಹೊಂದಿಕೊಂಡು ದೇವದ್ರೋಹಿಗಳಾಗಿ ಮೋಲೆಕ ದೇವತೆಗೆ ಶರಣಾದವರೆಲ್ಲರನ್ನು ತಮ್ಮ ಜನದಿಂದ ತೆಗೆದುಹಾಕುವೆನು.
6
“ಯಾರಾದರು ಭೂತ-ಪ್ರೇತಗಳನ್ನು ವಿಚಾರಿಸುವವರ ಬಳಿಗೆ ಹೋಗಿ, ಅವರ ಆಲೋಚನೆಯನ್ನು ಕೇಳಿ, ದೇವದ್ರೋಹಿಯಾದರೆ ನಾನು ಅಂಥ ವ್ಯಕ್ತಿಗೆ ವಿಮುಖನಾಗಿ ಅವನನ್ನು ತನ್ನ ಜನತೆಯಿಂದ ತೆಗೆದುಹಾಕುವೆನು.
7
ನಾನು ನಿಮ್ಮ ದೇವರಾದ ಸರ್ವೇಶ್ವರನಾಗಿರುವ ಕಾರಣ ನೀವು ನನ್ನವರಾಗಿ ಪರಿಶುದ್ಧರಾಗಿರಬೇಕು.
8
ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯಬೇಕು. ನಾನು ನಿಮ್ಮನ್ನು ಪವಿತ್ರಜನರಾಗುವಂತೆ ಮಾಡುವ ಸರ್ವೇಶ್ವರ.
9
“ತಂದೆಗಾಗಲಿ ತಾಯಿಗಾಗಲಿ ಶಾಪಹಾಕುವವರಿಗೆ ಮರಣಶಿಕ್ಷೆಯಾಗಬೇಕು. ತಂದೆತಾಯಿಗಳಿಗೆ ಶಾಪ ಹಾಕುವುದರಿಂದ ಅವರಿಗೆ ಸಂಭವಿಸುವ ಮರಣಶಿಕ್ಷೆಗೆ ಅವರೇ ಕಾರಣ.
10
“ಯಾವನಾದರು ಪರಪತ್ನಿಯೊಡನೆ ವ್ಯಭಿಚಾರ ಮಾಡಿದರೆ ಅವರಿಬ್ಬರಿಗೂ ಮರಣಶಿಕ್ಷೆಯಾಗಬೇಕು.
11
ಯಾವನಾದರು ಮಲತಾಯಿಯನ್ನು ಕೂಡಿದರೆ ಅವನು ತಂದೆಗೆ ಮಾನಭಂಗ ಮಾಡಿದಂತಾಯಿತು. ಅವರಿಬ್ಬರಿಗೂ ಮರಣ ಶಿಕ್ಷೆಯಾಗಬೇಕು. ಆ ಶಿಕ್ಷೆಗೆ ಅವರೇ ಕಾರಣರು.
12
ಯಾವನಾದರು ಸೊಸೆಯನ್ನು ಸಂಭೋಗಿಸಿದರೆ ಅವರಿಬ್ಬರಿಗೂ ಮರಣ ಶಿಕ್ಷೆಯಾಗಬೇಕು. ಅವರು ಅಧರ್ಮ ಕಾರ್ಯವನ್ನು ಮಾಡಿದ್ದರಿಂದ ಆ ಶಿಕ್ಷೆಗೆ ಅವರೇ ಕಾರಣರು.
13
ಯಾವನಾದರು ಸ್ತ್ರೀಯನ್ನು ಸಂಭೋಗಿಸುವಂತೆ ಪುರುಷನನ್ನು ಸಂಭೋಗಿಸಿದರೆ ಅವರಿಬ್ಬರೂ ಹೇಸಿಗೆಯ ಕೃತ್ಯ ಮಾಡಿದ್ದರಿಂದ ಅವರಿಗೆ ಮರಣಶಿಕ್ಷೆಯಾಗಬೇಕು; ಆ ಶಿಕ್ಷೆಗೆ ಅವರೇ ಕಾರಣರು.
14
ಯಾವನಾದರೂ ಒಬ್ಬ ಸ್ತ್ರೀಯನ್ನೂ ಅವಳ ತಾಯಿಯನ್ನೂ ಇಟ್ಟುಕೊಂಡರೆ ಅದು ಅತಿದುಷ್ಟಕಾರ್ಯವಾದುದರಿಂದ ಆ ಮೂರು ಮಂದಿಯನ್ನೂ ಬೆಂಕಿಯಿಂದ ಸುಡಿಸಿಬಿಡಬೇಕು; ಅಂಥ ದುರಾಚಾರವು ನಿಮ್ಮಲ್ಲಿ ಎಷ್ಟುಮಾತ್ರವೂ ನಡೆಯಬಾರದು.
15
ಯಾವನಾದರೂ ಪ್ರಾಣಿಸಂಗ ಮಾಡಿದರೆ ಅವನಿಗೆ ಮರಣಶಿಕ್ಷೆಯಾಗಬೇಕು. ಆ ಪ್ರಾಣಿಯನ್ನು ಕೊಲ್ಲಿಸಬೇಕು.
16
ಯಾವ ಸ್ತ್ರೀಯಾದರೂ ಪ್ರಾಣಿಯಿಂದ ಸಂಗಮಮಾಡಿಸಿಕೊಂಡರೆ ಆ ಸ್ತ್ರೀಯನ್ನೂ ಪ್ರಾಣಿಯನ್ನು ಕೊಲ್ಲಿಸಬೇಕು; ಅವಳಿಗೂ ಅದಕ್ಕೂ ಮರಣವೇ ವಿಧಿ. ಆ ಮರಣ ಶಿಕ್ಷೆಗೆ ತಾವೇ ಕಾರಣರು.
17
ಯಾವನಾದರೂ ತನ್ನ ಒಡಹುಟ್ಟಿದವಳನ್ನು ಅಂದರೆ ತಂದೆಯ ಮಗಳನ್ನಾಗಲಿ ತಾಯಿಯ ಮಗಳನ್ನಾಗಲಿ ಕರೆದುಕೊಂಡು ಅವಳ ಮಾನವನ್ನು ಇವನೂ ಇವನ ಮಾನವನ್ನು ಅವಳೂ ನೋಡಿದರೆ ಅದು ನಾಚಿಕೆಗೇಡಾದ ಕೆಲಸವಾಗಿರುವುದರಿಂದ ಅವರ ಕುಲದವರ ಎದುರಾಗಿಯೇ ಅವರಿಗೆ ಮರಣಶಿಕ್ಷೆಯನ್ನು ಮಾಡಿಸಬೇಕು. ಆ ಮನುಷ್ಯನು ಒಡಹುಟ್ಟಿದವಳನ್ನು ಸಂಗಮಿಸಿದುದರಿಂದ ತನ್ನ ಪಾಪದ ಫಲವನ್ನು ಅನುಭವಿಸಬೇಕು.
18
ಯಾವನಾದರೂ ಮುಟ್ಟಾದ ಸ್ತ್ರೀಯನ್ನು ಸಂಗಮಿಸಿದರೆ ಅವನು ಅವಳ ಶೋಣಿತಸ್ಥಾನವನ್ನು ಬಯಲುಪಡಿಸಿದವನು, ಅವಳು ಬಯಲುಪಡಿಸಿಕೊಂಡವಳು; ಆದ್ದರಿಂದ ಅವರಿಬ್ಬರೂ ಕುಲದಿಂದ ತೆಗೆದುಹಾಕಲ್ಪಡಬೇಕು.
19
ತಂದೆಯ ಅಥವಾ ತಾಯಿಯ ಒಡಹುಟ್ಟಿದವಳ ಸಂಗಮಾಡಬಾರದು; ಹಾಗೆ ಮಾಡಿದವನು ರಕ್ತಸಂಬಂಧಿಯನ್ನು ಸಂಗಮಿಸಿದವನಾದುದರಿಂದ ಅವರಿಬ್ಬರೂ ತಮ್ಮ ಪಾಪದ ಫಲವನ್ನು ಅನುಭವಿಸಬೇಕು.
20
ಯಾವನಾದರೂ ದೊಡ್ಡಮ್ಮನನ್ನಾಗಲಿ ಚಿಕ್ಕಮ್ಮನನ್ನಾಗಲಿ ಸಂಗಮಿಸಿದರೆ ಅವನು ದೊಡ್ಡಪ್ಪ ಚಿಕ್ಕಪ್ಪನವರ ಮಾನವನ್ನು ಭಂಗಪಡಿಸಿದವನಾದುದರಿಂದ ಆ ಸ್ತ್ರೀಪುರುಷರು ಆ ಪಾಪದ ಫಲವನ್ನು ಅನುಭವಿಸಬೇಕು; ಅವರು ಸಂತಾನವಿಲ್ಲದೆ ಸಾಯುವರು.
21
ಯಾವನಾದರೂ ಅತ್ತಿಗೆ ನಾದಿನಿಯವರನ್ನು ಇಟ್ಟುಕೊಂಡರೆ ಅದು ಅಶುದ್ಧವಾದ ಕೆಲಸ; ಅವನು ಅಣ್ಣತಮ್ಮಂದಿರ ಮಾನವನ್ನೇ ಭಂಗಪಡಿಸಿದವನು. ಅವರಿಗೆ ಸಂತಾನವಿರುವುದಿಲ್ಲ.
22
ಈ ನನ್ನ ಆಜ್ಞಾವಿಧಿಗಳನ್ನೆಲ್ಲಾ ನೀವು ಅನುಸರಿಸಿ ನಡೆಯಬೇಕು; ಹಾಗೆ ನಡೆದರೆ ನಾನು ನಿಮ್ಮನ್ನು ಯಾವ ದೇಶಕ್ಕೆ ಬರಮಾಡಿ ಅದನ್ನು ನಿವಾಸಕ್ಕಾಗಿ ಕೊಡುತ್ತೇನೋ ಆ ದೇಶವು ನಿಮ್ಮನ್ನು ಕಾರಿಬಿಡುವುದಿಲ್ಲ.
23
ನಾನು ನಿಮ್ಮ ಎದುರಿನಿಂದ ಹೊರಡಿಸುವ ಜನಾಂಗದ ಆಚಾರಗಳನ್ನು ನೀವು ಅನುಸರಿಸಬಾರದು; ಅವರು ಈ ದುರಾಚಾರಗಳನ್ನೆಲ್ಲಾ ನಡಿಸಿದುದರಿಂದ ನನಗೆ ಹೇಸಿಗೆಯಾದರು.
24
ನಿಮಗಾದರೋ - ನೀವು ಅವರ ದೇಶವನ್ನು ಸ್ವಾಧೀನಪಡಿಸಿಕೊಳ್ಳುವಿರಿ; ಹಾಲೂ ಜೇನೂ ಹರಿಯುವಂಥ ಆ ದೇಶವನ್ನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವೆನು ಎಂದು ನಾನು ಮಾತುಕೊಟ್ಟೆನಲ್ಲವೇ? ನಾನು ನಿಮ್ಮನ್ನು ಇತರ ಜನಾಂಗಗಳಿಂದ ಪ್ರತ್ಯೇಕಿಸಿದ ನಿಮ್ಮ ದೇವರಾದ ಸರ್ವೇಶ್ವರ.
25
ನೀವು ಶುದ್ಧಾಶುದ್ಧ ಜಂತುಗಳನ್ನು ಪಕ್ಷಿಗಳನ್ನು ವಿವೇಚನೆಮಾಡಿ ನಾನು ಅಶುದ್ಧವೆಂದು ನಿರ್ಣಯಿಸಿರುವ ಯಾವ ಪ್ರಾಣಿಪಕ್ಷಿ ಕ್ರಿಮಿಕೀಟಗಳಿಂದಲೂ ನಿಮ್ಮನ್ನು ಹೇಯಮಾಡಿಕೊಳ್ಳಬಾರದು.
26
ಸರ್ವೇಶ್ವರನೆಂಬ ನಾನು ಪರಿಶುದ್ಧನಾಗಿದ್ದೇನೆ, ಮತ್ತು ನೀವು ನನ್ನ ಜನರಾಗುವಂತೆ ನಿಮ್ಮನ್ನು ಇತರ ಜನಾಂಗಗಳಿಂದ ಪ್ರತ್ಯೇಕಿಸಿದ್ದೇನೆ; ಆದ್ದರಿಂದ ನೀವು ನನಗೆ ಮೀಸಲಾಗಿರಬೇಕು.
27
ಭೂತಪ್ರೇತಗಳನ್ನು ವಿಚಾರಿಸುವವರು ಸ್ತ್ರೀಯರಾಗಲಿ ಪುರುಷರಾಗಲಿ ಮರಣಶಿಕ್ಷೆ ಹೊಂದಬೇಕು. ಕಲ್ಲೆಸೆದು ಅವರನ್ನು ಕೊಲ್ಲಬೇಕು; ಆ ಶಿಕ್ಷೆಗೆ ಅವರೇ ಕಾರಣರು.
← Chapter 19
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 21 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
Recommended Reading
Commentary
Leviticus Commentaries
→
Devotional
Leviticus Devotional Guide
→
Get This Bible
KNCL Study Bible
→