bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Leviticus 6
Leviticus 6
Kannada Bible (KNCL) BSI 2016
← Chapter 5
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 7 →
1
ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದರು:
2
“ನಿಮ್ಮಲ್ಲಿ ಯಾರಾದರು ಮತ್ತೊಬ್ಬನಿಂದ ತಮ್ಮ ವಶಕ್ಕೆ ಕೊಡಲಾದ ವಸ್ತುವಿನ ವಿಷಯದಲ್ಲಾಗಲಿ, ತಮ್ಮ ಬಳಿಯಲ್ಲಿ ಇಡಲಾದ ಅಡವಿನ ವಿಷಯದಲ್ಲಾಗಲಿ, ತಾನು ಮಾಡಿದ ಕಳವಿನ ವಿಷಯದಲ್ಲಾಗಲಿ, ಸುಳ್ಳಾಡಿಯೋ, ಮತ್ತೊಬ್ಬನನ್ನು ಮೋಸಗೊಳಿಸಿಯೋ
3
ಮತ್ತೊಬ್ಬನು ಕಳೆದುಕೊಂಡದ್ದನ್ನು ತಾವು ಕಂಡು ಬೊಂಕಿಯೋ, ಸುಳ್ಳಾಣೆಯಿಟ್ಟೋ ಅವುಗಳನ್ನು ಹಿಂದಿರುಗಿಸದೆ ತಮ್ಮಲ್ಲೇ ಇಟ್ಟುಕೊಂಡರೆ, ಇಂಥ ವಿಷಯಗಳಲ್ಲಿ ಪಾಪಮಾಡಿ, ಸರ್ವೇಶ್ವರನಿಗೆ ದ್ರೋಹಿಗಳಾಗಿ ದೋಷಕ್ಕೆ ಒಳಗಾಗುತ್ತಾರೆ.
4
ಅಂಥವರು ಆಯಾ ವಸ್ತುಗಳನ್ನು, ಅಂದರೆ ಕದ್ದದ್ದನ್ನು, ಮೋಸದಿಂದ ಪಡೆದದ್ದನ್ನು, ತಮ್ಮ ವಶಕ್ಕೆ ತೆಗೆದುಕೊಂಡದ್ದನ್ನು ಪೂರ್ತಿಯಾಗಿ ಹಿಂದಕ್ಕೆ ತಂದುಕೊಡಬೇಕು. ಅದೂ ಅಲ್ಲದೆ, ಐದನೆಯ ಒಂದು ಪಾಲನ್ನು ಹೆಚ್ಚಾಗಿ ಸೇರಿಸಿಕೊಡಬೇಕು. ಅವರು ಪರಿಹಾರ ಮಾಡುವ ದಿನದಲ್ಲೆ ಅದನ್ನು ಅದರ ನಿಜವಾದ ಒಡೆಯನಿಗೆ ಹಿಂದಕ್ಕೆ ಕೊಡಬೇಕು.
6
ಅವರು ಪರಿಹಾರಕ್ಕಾಗಿ, ತಮ್ಮ ಹಿಂಡಿನಿಂದ ಕಳಂಕರಹಿತವಾದ ಒಂದು ಟಗರನ್ನು ಅಥವಾ ಅದಕ್ಕೆ ಸರಿಸಮಾನವಾದುದ್ದನ್ನು ತಂದು ಯಾಜಕನಿಗೆ ಒಪ್ಪಿಸಬೇಕು.
7
ಯಾಜಕನು ಅವರಿಗೋಸ್ಕರ ಸರ್ವೇಶ್ವರನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಿದಾಗ ಅವರು ಯಾವ ವಿಷಯದಲ್ಲಿ ಅಪರಾಧಕ್ಕೆ ಒಳಗಾದರೋ ಆ ವಿಷಯದಲ್ಲಿ ಅವರಿಗೆ ಕ್ಷಮೆ ದೊರಕುವುದು.”
8
ಮೋಶೆಗೆ ಸರ್ವೇಶ್ವರ ಹೀಗೆಂದರು:
9
“ನೀನು ಆರೋನನಿಗೂ ಅವನ ವಂಶದವರಿಗೂ ಈ ಕೆಳಕಂಡ ದಹನ ಬಲಿಯ ಈ ನಿಯಮಗಳನ್ನು ಆಜ್ಞಾಪಿಸು: ದಹನ ಬಲಿ ದ್ರವ್ಯವು ರಾತ್ರಿಯೆಲ್ಲಾ, ಮರುದಿನದ ಬೆಳಗಿನವರೆಗೂ ಬಲಿಪೀಠದ ಮೇಲೆ ಉರಿಯುತ್ತಿರಬೇಕು. ಅದರಿಂದಲೇ ಬಲಿಪೀಠದ ಮೇಲಿನ ಬೆಂಕಿ ಹೊತ್ತಿ ಉರಿಯುತ್ತಿರಬೇಕು.
10
ಯಾಜಕನು ನಾರುಮಡಿಯ ನಿಲುವಂಗಿಯನ್ನು ಧರಿಸಿಕೊಂಡು, ಮಾನರಕ್ಷಕವಾದ ನಾರುಮಡಿ ಚಡ್ಡಿಯನ್ನು ಹಾಕಿಕೊಂಡು ಬಲಿಪೀಠದ ಮೇಲಿನ ದಹನಬಲಿ ದ್ರವ್ಯದ ಬೂದಿಯನ್ನು ಎತ್ತಿ ವೇದಿಕೆಯ ಬಳಿ ಇಡಬೇಕು.
11
ಅನಂತರ ತನ್ನ ವಸ್ತ್ರಗಳನ್ನು ಬದಲಾಯಿಸಿಕೊಂಡು ಆ ಬೂದಿಯನ್ನು ಪಾಳೆಯದ ಹೊರಗೆ ಶುದ್ಧವಾದ ಒಂದು ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
12
ಬಲಿಪೀಠದ ಮೇಲಿನ ಬೆಂಕಿ ದಹನಬಲಿ ದ್ರವ್ಯದಿಂದ ಉರಿಯುತ್ತಲೇ ಇರಬೇಕು. ಅದು ಆರಿಹೋಗಬಾರದು. ಪ್ರತೀ ದಿನ ಬೆಳಿಗ್ಗೆ ಯಾಜಕನು ಕಟ್ಟಿಗೆಯನ್ನು ತಂದುಹಾಕಿ ಉರಿಸಿ, ಅದರ ಮೇಲೆ ದಹನ ದ್ರವ್ಯವನ್ನು ಕ್ರಮಪಡಿಸಿ, ಶಾಂತಿಸಮಾಧಾನ ಬಲಿಪ್ರಾಣಿಗಳ ಕೊಬ್ಬನ್ನು ಅದರ ಮೇಲೆ ಹೋಮಮಾಡಬೇಕು.
13
ಬಲಿಪೀಠದ ಮೇಲೆ ಬೆಂಕಿ ಯಾವಾಗಲೂ ಉರಿಯುತ್ತಿರಬೇಕು, ಆರಿಹೋಗಬಾರದು.
14
“ಧಾನ್ಯನೈವೇದ್ಯದ ಬಗ್ಗೆ ನಿಯಮಗಳಿವು: ಆರೋನನ ವಂಶಜರು ನೈವೇದ್ಯ ದ್ರವ್ಯವನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಬಲಿಪೀಠದ ಎದುರಿಗೇ ಸಮರ್ಪಿಸಬೇಕು.
15
ಅವರಲ್ಲಿ ಒಬ್ಬನು ನೈವೇದ್ಯವಾದುದನ್ನು ಸೂಚಿಸುವುದಕ್ಕಾಗಿ ಎಣ್ಣೆ ಹೊಯ್ದ ಹಿಟ್ಟಿನಲ್ಲಿ ಒಂದು ಹಿಡಿಯನ್ನೂ ಅದರ ಮೇಲಿರುವ ಸಾಂಬ್ರಾಣಿಯೆಲ್ಲವನ್ನೂ ತೆಗೆದುಕೊಂಡು ಬಲಿಪೀಠದ ಮೇಲೆ ಹೋಮಮಾಡಿ ಸರ್ವೇಶ್ವರನಿಗೆ ಸುವಾಸನೆಯನ್ನುಂಟು ಮಾಡಬೇಕು.
16
ಮಿಕ್ಕದ್ದನ್ನು ಆರೋನನೂ ಅವನ ವಂಶಜರೂ ತಿನ್ನಬಹುದು. ಅವರು ಅದರಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿಕೊಂಡು ಪವಿತ್ರಸ್ಥಳದೊಳಗೆ, ಅಂದರೆ ದೇವದರ್ಶನದ ಗುಡಾರದ ಅಂಗಳದಲ್ಲಿ ತಿನ್ನಬೇಕು.
17
ಸರ್ವೇಶ್ವರನಿಗೆ ಹೋಮ ರೂಪವಾಗಿ ಸಮರ್ಪಿಸಿದ ದ್ರವ್ಯಗಳಲ್ಲಿ ಅದನ್ನು ಅವರ ಪಾಲಿಗೆ ಬಿಡಲಾಗಿದೆ. ಅದಕ್ಕೆ ಹುಳಿ ಕಲಸಿ ಸುಡಕೂಡದು. ದೋಷಪರಿಹಾರಕ ಬಲಿಯಂತೆ ಹಾಗು ಪ್ರಾಯಶ್ಚಿತ್ತ ಬಲಿದ್ರವ್ಯದಂತೆ ಅದು ಸಹ ಮಹಾಪರಿಶುದ್ಧವಾದುದು.
18
ಆರೋನನ ವಂಶಜರಾದ ಗಂಡಸರೆಲ್ಲರು ಅದನ್ನು ತಿನ್ನಬಹುದು. ಸರ್ವೇಶ್ವರನಿಗೆ ಹೋಮವಾಗಿ ಅರ್ಪಿತವಾದ ದ್ರವ್ಯಗಳಲ್ಲಿ ಅದು ಶಾಶ್ವತ ನಿಯಮವಾಗಿ ಆರೋನನ ಸಂತತಿಗೆ ಸಲ್ಲತಕ್ಕದು. ಆ ದ್ರವ್ಯಗಳಿಗೆ ಸೋಂಕಿದೆಲ್ಲವೂ ಪರಿಶುದ್ಧವಾಗುವುದು.
19
ಮೋಶೆಗೆ ಸರ್ವೇಶ್ವರ ಹೀಗೆಂದು ತಿಳಿಸಿದರು:
20
“ಆರೋನನಿಗೆ ಅಭಿಷೇಕವಾದ ದಿನ ಮೊದಲ್ಗೊಂಡು ಅವನೂ ಅವನ ವಂಶಜರೂ ಸರ್ವೇಶ್ವರನಿಗೆ ಸಮರ್ಪಿಸಬೇಕಾದ ಧಾನ್ಯನೈವೇದ್ಯದ ಕ್ರಮ ಇದು: ಅವರು ದಿನನಿತ್ಯವೂ ಮೂರು ಸೇರು ಗೋದಿಹಿಟ್ಟನ್ನು, ಬೆಳಿಗ್ಗೆ ಅರ್ಧ, ಸಂಜೆ ಅರ್ಧ, ಸಮರ್ಪಿಸಬೇಕು.
21
ಕಬ್ಬಿಣದ ಹೆಂಚಿನ ಮೇಲೆ ಎಣ್ಣೆ ಸವರಿ ಅದನ್ನು ಸುಡಬೇಕು. ಅದನ್ನು ತರುವಾಗ ಅದು ಎಣ್ಣೆಯಿಂದ ನೆನೆದೇ ಇರಬೇಕು. ಅದನ್ನು ಭಾಗಭಾಗವಾಗಿ ಮಾಡಿ ಸರ್ವೇಶ್ವರನಿಗೆ ಸುವಾಸನೆಯುಳ್ಳ ನೈವೇದ್ಯವನ್ನಾಗಿ ಸಮರ್ಪಿಸಬೇಕು.
22
ಆರೋನನ ಸಂತತಿಯವರಲ್ಲಿ ಯಾವನು ಅವನ ತರುವಾಯ ಅಭಿಷಿಕ್ತ ಯಾಜಕಪಟ್ಟಕ್ಕೆ ಬರುತ್ತಾನೋ ಅವನೇ ಅದನ್ನು ಸಮರ್ಪಿಸಬೇಕು. ಇದು ಶಾಶ್ವತ ನಿಯಮ.
23
“ಯಾಜಕರು ತಮಗೋಸ್ಕರ ಸಮರ್ಪಿಸುವ ನೈವೇದ್ಯ ದ್ರವ್ಯಗಳನ್ನು ನಿಶ್ಯೇಷವಾಗಿ ಹೋಮಮಾಡಿ ಬಿಡಬೇಕು; ಅದನ್ನು ತಿನ್ನಲೇಕೂಡದು.”
24
ಮೋಶೆಗೆ ಸರ್ವೇಶ್ವರ ಹೀಗೆಂದರು:
25
“ನೀನು ಆರೋನನಿಗೂ ಅವನ ವಂಶಜರಿಗೂ ದೋಷಪರಿಹಾರಕ ಬಲಿ ನಿಯಮಗಳ ಬಗ್ಗೆ ಹೀಗೆ ಆಜ್ಞಾಪಿಸು: ದಹನ ಬಲಿಪ್ರಾಣಿಯನ್ನು ವಧಿಸುವ ಸ್ಥಳದಲ್ಲೇ ದೋಷಪರಿಹಾರಕ ಬಲಿಪ್ರಾಣಿಗಳನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ವಧಿಸಬೇಕು.
26
ಅದು ಮಹಾಪರಿಶುದ್ಧವಾದ್ದರಿಂದ ಸಮರ್ಪಿಸುವ ಯಾಜಕನು ಅದರ ಮಾಂಸವನ್ನು ಊಟಮಾಡಬೇಕು. ಅದನ್ನು ಪವಿತ್ರ ಸ್ಥಳದೊಳಗೆ, ಅಂದರೆ ದೇವದರ್ಶನದ ಗುಡಾರದ ಅಂಗಳದಲ್ಲಿ ಊಟಮಾಡಬೇಕು.
27
ಆ ಪ್ರಾಣಿಯ ಮಾಂಸಕ್ಕೆ ಸೋಂಕಿದ್ದೆಲ್ಲವೂ ಪರಿಶುದ್ಧವಾಗುವುದು, ಅದರ ರಕ್ತದಲ್ಲಿ ಸ್ವಲ್ಪವಾದರೂ ಬಟ್ಟೆಯ ಮೇಲೆ ಬಿದ್ದರೆ ಆ ಬಟ್ಟೆಯನ್ನು ಪವಿತ್ರ ಸ್ಥಳದಲ್ಲೇ ಒಗೆದುಕೊಳ್ಳಬೇಕು.
28
ಅದನ್ನು ಬೇಯಿಸಿದ ಮಣ್ಣಿನ ಪಾತ್ರೆಯನ್ನು ಒಡೆದುಬಿಡಬೇಕು. ತಾಮ್ರದ ಪಾತ್ರೆಯಲ್ಲಿ ಬೇಯಿಸಿದ್ದಾದರೆ ಆ ಪಾತ್ರೆಯನ್ನು ಬೆಳಗಿ ನೀರಿನಿಂದ ತೊಳೆಯಬೇಕು.
29
ಯಾಜಕರಲ್ಲಿ ಗಂಡಸರೆಲ್ಲರು ಅದನ್ನು ತಿನ್ನಬಹುದು; ಅದು ಮಹಾಪರಿಶುದ್ಧವಾದುದು.
30
ಆದರೆ ದೋಷಪರಿಹಾರಕ ಬಲಿಪ್ರಾಣಿಗಳಲ್ಲಿ ಯಾವ ಪ್ರಾಣಿಯ ರಕ್ತವು ದೋಷಪರಿಹಾರಕ್ಕಾಗಿ ದೇವದರ್ಶನದ ಗುಡಾರದೊಳಗೆ ತರಲಾಗಿದೆಯೋ ಅದರ ಮಾಂಸವನ್ನು ತಿನ್ನಲೇಬಾರದು; ಅದನ್ನು ಬೆಂಕಿಯಲ್ಲಿ ಸುಟ್ಟುಬಿಡಬೇಕು.
← Chapter 5
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 7 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27