bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Leviticus 4
Leviticus 4
Kannada Bible (KNCL) BSI 2016
← Chapter 3
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 5 →
1
ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದರು:
2
“ನೀನು ಇಸ್ರಯೇಲರ ಸಂಗಡ ಮಾತಾಡಿ ಹೇಳಬೇಕಾದುದು ಏನೆಂದರೆ ಯಾರೇ ಆಗಲಿ ಸರ್ವೇಶ್ವರನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರು ತಿಳಿಯದೆ ಮಾಡಿ ದೋಷಿಯಾದರೆ ಅದು ಆ ದೋಷಪರಿಹಾರಕ್ಕಾಗಿ ಈ ಕ್ರಮಗಳನ್ನು ಅನುಸರಿಸಬೇಕು:
3
“ಅಭಿಷಿಕ್ತನಾದ ಯಾಜಕನೇ ಅಂಥ ದೋಷಿಯಾಗಿ ಜನರೆಲ್ಲರನ್ನು ಅಪರಾಧಕ್ಕೆ ಒಳಪಡಿಸಿದರೆ ತನ್ನ ದೋಷಪರಿಹಾರಕ್ಕಾಗಿ ಅವನು ಕಳಂಕರಹಿತವಾದ ಪ್ರಾಯದ ಹೋರಿಯೊಂದನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕು.
4
ಅವನು ಆ ಹೋರಿಯನ್ನು ಸರ್ವೇಶ್ವರನ ಸನ್ನಿಧಿಗೆ, ದೇವದರ್ಶನದ ಗುಡಾರದ ಬಾಗಿಲಿಗೆ, ತಂದು ಅದರ ತಲೆಯ ಮೇಲೆ ಕೈಯಿಟ್ಟು ಸರ್ವೇಶ್ವರನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು.
5
ಅಭಿಷಿಕ್ತ ಯಾಜಕನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವದರ್ಶನದ ಗುಡಾರದೊಳಗೆ ಬರಬೇಕು;
6
ಆ ರಕ್ತದಲ್ಲಿ ಬೆರಳನ್ನು ಅದ್ದಿ ಮಹಾಪವಿತ್ರ ಸ್ಥಾನದ ಮುಂದಿನ ತೆರೆಯ ಎದುರಿಗೆ, ಸರ್ವೇಶ್ವರನ ಸನ್ನಿಧಿಯಲ್ಲಿ ಏಳು ಸಾರಿ ಚಿಮುಕಿಸಬೇಕು.
7
ಬಳಿಕ ಯಾಜಕನು ದೇವದರ್ಶನದ ಗುಡಾರದೊಳಗೆ ಸರ್ವೇಶ್ವರನ ಸನ್ನಿಧಿಯಲ್ಲಿರುವ ಪರಿಮಳ ಧೂಪವೇದಿಕೆಯ ಕೊಂಬುಗಳಿಗೆ ಆ ರಕ್ತವನ್ನು ಹೆಚ್ಚಿ ಹೋರಿಯ ಮಿಕ್ಕ ರಕ್ತವನ್ನೆಲ್ಲ ದೇವದರ್ಶನದ ಗುಡಾರದ ಬಾಗಿಲಿಗೆ ಎದುರಾಗಿ ದಹನಬಲಿ ಕೊಡುವ ಬಲಿಪೀಠದ ಬುಡದಲ್ಲಿ ಸುರಿಯಬೇಕು.
8
ಆ ದೋಷಪರಿಹಾರಕ ಬಲಿಹೋರಿಯ ಕೊಬ್ಬನ್ನೆಲ್ಲಾ, ಅಂದರೆ ಕರುಳ ಸುತ್ತಲಿನ ಕೊಬ್ಬನ್ನೂ
9
ಮೂತ್ರಪಿಂಡಗಳನ್ನೂ ಅವುಗಳ ಮೇಲಿನ ಕೊಬ್ಬನ್ನೂ ಕಾಳಿಜದ ಉತ್ತಮಭಾಗವನ್ನು
10
ಶಾಂತಿಸಮಾಧಾನದ ಬಲಿಪ್ರಾಣಿಯಲ್ಲಿ ಪ್ರತ್ಯೇಕಿಸಿದಂತೆಯೇ ಇದರಲ್ಲೂ ಪ್ರತ್ಯೇಕಿಸಿ, ದಹನಬಲಿಪೀಠದ ಮೇಲೆ ಹೋಮಮಾಡಬೇಕು.
11
ಆ ಹೋರಿಯಲ್ಲಿ ಮಿಕ್ಕದ್ದನ್ನೆಲ್ಲಾ, ಅಂದರೆ ಅದರ ಚರ್ಮ, ಮಾಂಸ, ತಲೆ, ಕಾಲುಗಳು, ಕರುಳುಗಳು
12
ಹಾಗು ಕರುಳುಗಳಲ್ಲಿರುವ ಕಲ್ಮಶ ಇವುಗಳನ್ನೆಲ್ಲ ಪಾಳೆಯದ ಹೊರಗೆ, ವೇದಿಕೆಯ ಬೂದಿಯನ್ನು ಹಾಕುವ ಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಿ, ಕಟ್ಟಿಗೆಯ ಮೇಲಿರಿಸಿ, ಬೆಂಕಿಯಲ್ಲಿ ಸುಡಿಸಿಬಿಡಬೇಕು. ಬೂದಿಯನ್ನು ಹಾಕುವ ಸ್ಥಳದಲ್ಲೇ ಅದನ್ನು ಸುಡಿಸಿಬಿಡಬೇಕು.
13
“ಇಸ್ರಯೇಲರ ಸಮಾಜವೆಲ್ಲ ತಿಳಿಯದೆ ದೋಷಿಗಳಾದರೆ, ಅಂದರೆ ಸರ್ವೇಶ್ವರನು ನಿಷೇಧಿಸಿದ ಕಾರ್ಯಗಳಲ್ಲಿ ಅವರು ಯಾವುದನ್ನಾದರು ಮಾಡಿ ದೋಷಕ್ಕೆ ಗುರಿಯಾದರೆ,
14
ಮೊದಲು ತಮಗೂ ಮರೆಯಾಗಿದ್ದ ಆ ದೋಷವು ತಿಳಿದುಬಂದ ನಂತರ ಅದನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಹೋರಿಯೊಂದನ್ನು ಸಮರ್ಪಿಸಬೇಕು. ಆ ಹೋರಿಯನ್ನು ದೇವದರ್ಶನದ ಗುಡಾರದ ಬಾಗಿಲಿಗೆ ತರಿಸಿದಾಗ ಸಮಾಜದ ಹಿರಿಯರು
15
ಸರ್ವೇಶ್ವರನ ಸನ್ನಿಧಿಯಲ್ಲಿ ಅದರ ತಲೆಯ ಮೇಲೆ ತಮ್ಮ ಕೈಗಳನ್ನಿಡಬೇಕು. ಸರ್ವೇಶ್ವರನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು.
16
ಅಭಿಷಿಕ್ತ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ದೇವದರ್ಶನದ ಗುಡಾರದೊಳಗೆ ತಂದು
17
ಅದರಲ್ಲಿ ಬೆರಳನ್ನು ಅದ್ದಿ ತೆರೆಯ ಮುಂದೆ ಸರ್ವೇಶ್ವರನ ಸನ್ನಿಧಿಯಲ್ಲಿ ಅದನ್ನು ಏಳು ಸಾರಿ ಚಿಮುಕಿಸಬೇಕು.
18
ಆ ರಕ್ತದಲ್ಲಿ ಸ್ವಲ್ಪವನ್ನು ದೇವದರ್ಶನದ ಗುಡಾರದೊಳಗೆ ಸರ್ವೇಶ್ವರನ ಸನ್ನಿಧಿಯಲ್ಲಿರುವ ಧೂಪವೇದಿಕೆಯ ಕೊಂಬುಗಳಿಗೆ ಹಚ್ಚಬೇಕು.
19
ಮಿಕ್ಕದ್ದನ್ನೆಲ್ಲಾ ದೇವದರ್ಶನದ ಗುಡಾರದ ಬಾಗಿಲಿಗೆ ಎದುರಾಗಿರುವ ಬಲಿಪೀಠದ ಬುಡದಲ್ಲಿ ಸುರಿದುಬಿಡಬೇಕು.
20
ಅಭಿಷಿಕ್ತ ಯಾಜಕನು ದೋಷಪರಿಹಾರಕ ಹೋರಿಯ ವಿಷಯದಲ್ಲಿ ಹೇಗೆ ಮಾಡಬೇಕೆಂದು ವಿಧಿಸಲಾಯಿತೋ ಹಾಗೆಯೆ ಇದರ ವಿಷಯದಲ್ಲೂ ಮಾಡಬೇಕು. ಯಾಜಕನು ಅವರಿಗೋಸ್ಕರ ದೋಷಪರಿಹಾರ ಮಾಡಿದ ನಂತರ ಅವರಿಗೆ ಕ್ಷಮಾಪಣೆಯಾಗುವುದು.
21
ಆ ಮೊದಲನೆಯ ಹೋರಿಯನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಸುಡಿಸಿಬಿಟ್ಟಂತೆಯೇ ಈ ಹೋರಿಯನ್ನೂ ಸುಡಿಸಿಬಿಡಬೇಕು. ಇದು ಜನಸಮಾಜದ ದೋಷಪರಿಹಾರಕ ಬಲಿ.
22
“ಮುಖ್ಯಾಧಿಕಾರಿಯೊಬ್ಬನು ತನ್ನ ದೇವರಾದ ಸರ್ವೇಶ್ವರನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ತಿಳಿಯದೆ ಮಾಡಿ ದೋಷಿಯಾದರೆ
23
ತನ್ನ ತಪ್ಪು ತನಗೆ ತಿಳಿದು ಬಂದಾಗ ಅವನು ಕಳಂಕರಹಿತವಾದ ಒಂದು ಹೋತವನ್ನು ತಂದು ಸಮರ್ಪಿಸಬೇಕು.
24
ಅವನು ಆ ಹೋತದ ತಲೆಯ ಮೇಲೆ ಕೈಯಿಟ್ಟು ಸರ್ವೇಶ್ವರನ ಸನ್ನಿಧಿಯಲ್ಲಿ, ದಹನ ಬಲಿಪ್ರಾಣಿಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ವಧಿಸಬೇಕು. ಅದು ದೋಷಪರಿಹಾರಕ ಬಲಿ.
25
ಯಾಜಕನು ಆ ಪ್ರಾಣಿಯ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ತೆಗೆದುಕೊಂಡು ಬಲಿಪೀಠದ ಕೊಂಬುಗಳಿಗೆ ಹಚ್ಚಿ, ಮಿಕ್ಕ ರಕ್ತವನ್ನು ಬಲಿಪೀಠದ ಬುಡದಲ್ಲಿ ಸುರಿದುಬಿಡಬೇಕು.
26
ಶಾಂತಿಸಮಾಧಾನದ ಬಲಿಪ್ರಾಣಿಯ ಕೊಬ್ಬನ್ನು ಅವನು ಹೋಮಮಾಡುವ ಪ್ರಕಾರವೇ ಇದರ ಎಲ್ಲ ಕೊಬ್ಬನ್ನೂ ಹೋಮಮಾಡಬೇಕು. ಹೀಗೆ ಯಾಜಕನು ಅವನಿಗೋಸ್ಕರ ದೋಷಪರಿಹಾರವನ್ನು ಮಾಡುವುದರಿಂದ ಅವನಿಗೆ ಕ್ಷಮೆ ದೊರಕುವುದು.
27
ನಿಮ್ಮ ನಾಡಿನವರಲ್ಲಿ ಬೇರೆ ಯಾರಾದರು ಸರ್ವೇಶ್ವರನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ತಿಳಿಯದೆ ಮಾಡಿ ದೋಷಿಯಾದರೆ
28
ತನ್ನ ತಪ್ಪು ತನಗೆ ತಿಳಿದು ಬಂದಾಗ ದೋಷಪರಿಹಾರಕ್ಕಾಗಿ ಕಳಂಕರಹಿತವಾದ ಒಂದು ಹೆಣ್ಣು ಮೇಕೆಯನ್ನು ತಂದು ಸಮರ್ಪಿಸಬೇಕು.
29
ಅವನು ಅದರ ತಲೆಯ ಮೇಲೆ ಕೈಯಿಟ್ಟು ನಂತರ ದಹನ ಬಲಿಪ್ರಾಣಿಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ವಧಿಸಬೇಕು.
30
ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ತೆಗೆದುಕೊಂಡು ಬಲಿಪೀಠದ ಕೊಂಬುಗಳಿಗೆ ಹಚ್ಚಿ ಮಿಕ್ಕ ರಕ್ತವನ್ನೆಲ್ಲಾ ಬಲಿಪೀಠದ ಬುಡದಲ್ಲಿ ಸುರಿದುಬಿಡಲಿ.
31
ಶಾತಿಸಮಾಧಾನದ ಬಲಿಪ್ರಾಣಿಗಳ ಕೊಬ್ಬನ್ನು ಪ್ರತ್ಯೇಕಿಸುವ ಪ್ರಕಾರ ಯಾಜಕನು ಇದರ ಎಲ್ಲ ಕೊಬ್ಬನ್ನು ಪ್ರತ್ಯೇಕಿಸಿ ಸರ್ವೇಶ್ವರನಿಗೆ ಸುವಾಸನೆಯನ್ನುಂಟುಮಾಡಲು ಬಲಿಪೀಠದ ಮೇಲೆ ಹೋಮಮಾಡಲಿ. ಹೀಗೆ ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡುವುದರಿಂದ ಅವನಿಗೆ ಕ್ಷಮೆ ದೊರಕುವುದು.
32
ಅವನು ತನ್ನ ದೋಷಪರಿಹಾರಾರ್ಥವಾಗಿ ತರುವುದು ಒಂದು ಕುರಿಯಾದರೆ ಅದು ಕಳಂಕರಹಿತವಾದ ಹೆಣ್ಣಾಗಿರಬೇಕು.
33
ಅವನು ಅದರ ತಲೆಯ ಮೇಲೆ ಕೈಯಿಟ್ಟನಂತರ ದಹನ ಬಲಿಪ್ರಾಣಿಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ದೋಷಪರಿಹಾರಾರ್ಥವಾಗಿ ವಧಿಸಬೇಕು.
34
ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ತೆಗೆದುಕೊಂಡು ಬಲಿಪೀಠದ ಕೊಂಬುಗಳಿಗೆ ಹಚ್ಚಿ ಮಿಕ್ಕ ರಕ್ತವನ್ನೆಲ್ಲಾ ಬಲಿಪೀಠದ ಬುಡದಲ್ಲಿ ಸುರಿದುಬಿಡಲಿ.
35
ಶಾಂತಿಸಮಾಧಾನದ ಬಲಿಪ್ರಾಣಿಗಳ ಕೊಬ್ಬನ್ನು ಪ್ರತ್ಯೇಕಿಸುವ ಪ್ರಕಾರ ಯಾಜಕನು ಇದರ ಎಲ್ಲ ಕೊಬ್ಬನ್ನು ಪ್ರತ್ಯೇಕಿಸಿ ಬಲಿಪೀಠದಲ್ಲಿ ಉರಿಯುವ ಹೋಮದ್ರವ್ಯಗಳ ಮೇಲೆ ಸರ್ವೇಶ್ವರನಿಗೆ ಹೋಮಮಾಡಲಿ. ಅವನ ತಪ್ಪಿನ ನಿಮಿತ್ತ ಯಾಜಕನು ಹೀಗೆ ಅವನಿಗೋಸ್ಕರ ದೋಷಪರಿಹಾರ ಮಾಡುವುದರಿಂದ ಅವನಿಗೆ ಕ್ಷಮೆ ದೊರಕುವುದು.
← Chapter 3
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 5 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27