bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Leviticus 7
Leviticus 7
Kannada Bible (KNCL) BSI 2016
← Chapter 6
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 8 →
1
“ಪ್ರಾಯಶ್ಚಿತ್ತ ಬಲಿ ನಿಯಮಗಳು ಹೀಗಿವೆ: ಈ ಬಲಿ ಮಹಾಪರಿಶುದ್ಧವಾದುದು.
2
ದಹನ ಬಲಿಪ್ರಾಣಿಯನ್ನು ವಧಿಸಿದ ಸ್ಥಳದಲ್ಲೇ ಈ ಪ್ರಾಯಶ್ಚಿತ್ತ ಬಲಿಪ್ರಾಣಿಯನ್ನು ವಧಿಸಬೇಕು. ಯಾಜಕನು ಅದರ ರಕ್ತವನ್ನು ಬಲಿಪೀಠದ ಸುತ್ತಲು ಚಿಮುಕಿಸಬೇಕು.
3
ಅವನು ಅದರ ಕೊಬ್ಬನ್ನೆಲ್ಲ, ಅಂದರೆ ಬಾಲದ ಕೊಬ್ಬನ್ನು, ಕರುಳಿನ ಸುತ್ತಲಿರುವ ಕೊಬ್ಬನ್ನು,
4
ಮೂತ್ರಪಿಂಡಗಳನ್ನು ಅದರ ಮೇಲಿರುವ ಕೊಬ್ಬನ್ನೂ ಹಾಗು ಕಾಳಿಜದ ಉತ್ತಮ ಭಾಗವನ್ನು ತೆಗೆದು
5
ಬಲಿಪೀಠದ ಮೇಲೆ ಸರ್ವೇಶ್ವರನಿಗೆ ಹೋಮಮಾಡಬೇಕು. ಇದು ಪ್ರಾಯಶ್ಚಿತ್ತ ಬಲಿ.
6
ಹೋಮ ಶೇಷವನ್ನು ಯಾಜಕರಲ್ಲಿ ಗಂಡಸರೆಲ್ಲರು ತಿನ್ನಬಹುದು; ಅದು ಮಹಾಪರಿಶುದ್ಧವಾದುದರಿಂದ ಪವಿತ್ರ ಸ್ಥಳದೊಳಗೇ ಅದನ್ನು ತಿನ್ನಬೇಕು.
7
ಈ ಪ್ರಾಯಶ್ಚಿತ್ತ ಹಾಗು ದೋಷಪರಿಹಾರಕ ಬಲಿ ಹೋಮ ಶೇಷಗಳಿಗೆ ಇರುವ ವಿಧಿ ಒಂದೇ; ಈ ಹೋಮಶೇಷಗಳು ದೋಷಪರಿಹಾರವನ್ನು ಮಾಡಿಸುವ ಯಾಜಕನಿಗೆ ಸಲ್ಲತಕ್ಕವು.
8
ಯಾರಾದರು ದಹನಬಲಿಗಾಗಿ ಒಂದು ಪ್ರಾಣಿಯನ್ನು ತಂದಾಗ, ಅದರ ಚರ್ಮ ಆ ಪಶುವನ್ನು ಸಮರ್ಪಿಸುವ ಯಾಜಕನಿಗೆ ಸೇರಬೇಕು.
9
ಒಲೆಯಲ್ಲಾಗಲಿ, ಕಬ್ಬಿಣದ ಹಂಚಿನಲ್ಲಾಗಲಿ, ಬಾಂಡ್ಲಿಯಲ್ಲಾಗಲಿ ಬೇಯಿಸಿದ ನೈವೇದ್ಯ ಪದಾರ್ಥವೆಲ್ಲ ಅದನ್ನು ಸಮರ್ಪಿಸುವ ಯಾಜಕನಿಗೆ ಸೇರತಕ್ಕದ್ದು.
10
ಆದರೆ ಎಣ್ಣೆ ಹೊಯ್ದ ಹಿಟ್ಟನ್ನಾಗಲಿ, ಬರಿ ಹಿಟ್ಟನ್ನಾಗಲಿ ಯಾರಾದರು ನೈವೇದ್ಯಕ್ಕಾಗಿ ತಂದಾಗ ಅದನ್ನು ಆರೋನನ ವಂಶದವರೆಲ್ಲರು ಸಮವಾಗಿ ಅನುಭವಿಸತಕ್ಕದ್ದು.
11
“ಶಾಂತಿ ಸಮಾಧಾನದ ಬಲಿ ನಿಯಮಗಳು ಇವು:
12
ಯಾರಾದರು ಕೃತಜ್ಞತೆಯನ್ನು ಸಲ್ಲಿಸುವುದಕ್ಕಾಗಿ ಶಾಂತಿಸಮಾಧಾನದ ಬಲಿಯನ್ನು ಸರ್ವೇಶ್ವರನಿಗೆ ಅರ್ಪಿಸಲಾಶಿಸಿದರೆ ಆ ಬಲಿಪ್ರಾಣಿಯ ಸಮೇತ ಎಣ್ಣೆ ಮಿಶ್ರವಾದ ಹುಳಿಯಿಲ್ಲದ ಹೋಳಿಗೆಗಳನ್ನು, ಎಣ್ಣೆ ಹಾಕಿದ ಹುಳಿಯಿಲ್ಲದ ಕಡಬುಗಳನ್ನು ಹಾಗು ಎಣ್ಣೆಯಿಂದ ಪೂರ್ತಿಯಾಗಿ ತೋಯಿಸಿದ ಗೋದಿಹಿಟ್ಟಿನ ಹೋಳಿಗೆಗಳನ್ನು ಸಮರ್ಪಿಸಬೇಕು.
13
ಅದೂ ಅಲ್ಲದೆ ಹುಳಿರೊಟ್ಟಿಗಳನ್ನು ಕೂಡ ಸಮರ್ಪಿಸಬೇಕು.
14
ಸಮರ್ಪಿಸುವ ಪ್ರತಿಯೊಂದು ವಿಧವಾದ ಪದಾರ್ಥಗಳಲ್ಲಿಯೂ ಒಂದೊಂದನ್ನು ಸರ್ವೇಶ್ವರನಿಗೋಸ್ಕರ ಪ್ರತ್ಯೇಕಿಸಬೇಕು. ಅವು ಪೀಠಕ್ಕೆ ಬಲಿಪ್ರಾಣಿಯ ರಕ್ತವನ್ನು ಚಿಮುಕಿಸಿದ ಯಾಜಕನಿಗೆ ಸೇರಬೇಕು.
15
ಕೃತಜ್ಞತಾ ಬಲಿಪ್ರಾಣಿಯ ಮಾಂಸವನ್ನು ಬಲಿ ನಡೆದ ದಿನದಲ್ಲೇ ಭೋಜನ ಮಾಡಬೇಕು. ಮರುದಿನದವರೆಗೆ ಕಿಂಚಿತ್ತನ್ನೂ ಉಳಿಸಬಾರದು.
16
“ಯಾರಾದರು ಹರಕೆಯನ್ನು ಸಲ್ಲಿಸುವುದಕ್ಕಾಗಿ ಅಥವಾ ಸ್ವೇಚ್ಛೆಯಿಂದ ಅಂಥ ಬಲಿಯನ್ನು ಒಪ್ಪಿಸಿದರೆ ಅದನ್ನು ಸಮರ್ಪಿಸಿದ ದಿನದಲ್ಲೇ ಅದರ ಮಾಂಸವನ್ನು ಪೂರ್ತಿಯಾಗಿ ಊಟ ಮಾಡಬೇಕಾಗಿಲ್ಲ; ಮಿಕ್ಕದ್ದನ್ನು ಮರುದಿನ ತಿನ್ನಬಹುದು.
17
ಆದರೆ ಮೂರನೆಯ ದಿನದವರೆಗೆ ಉಳಿದಿದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
18
ಆ ಬಲಿಪ್ರಾಣಿಯ ಮಾಂಸದಲ್ಲಿ ಸ್ವಲ್ಪವನ್ನಾದರೂ ಮೂರನೆಯ ದಿನದಲ್ಲಿ ಊಟಮಾಡಿದ್ದೇ ಆದರೆ ಆ ಬಲಿ ಸ್ವೀಕೃತವಾಗುವುದಿಲ್ಲ. ಅರ್ಪಿಸಿದವನಿಗೆ ಅದರಿಂದ ಫಲವೇನೂ ದೊರಕುವುದಿಲ್ಲ. ಅದು ಹೇಯವಾದುದರಿಂದ ಅದನ್ನು ತಿಂದವನು ಆ ಪಾಪದ ಫಲವನ್ನು ಅನುಭವಿಸಬೇಕು.
19
“ಅಶುದ್ಧವಾದ ವಸ್ತುವಿಗೆ ಸೋಂಕಿದ ಮಾಂಸವನ್ನು ಬೆಂಕಿಯಲ್ಲಿ ಸುಟ್ಟುಬಿಡಬೇಕು.
20
“ಶುದ್ಧವಾಗಿರುವವರೆಲ್ಲರು ಬಲಿಪ್ರಾಣಿಯ ಮಾಂಸವನ್ನು ತಿನ್ನಬಹುದು.
21
“ಯಾರಾದರು ಅಶುದ್ಧರಾಗಿದ್ದು ಸರ್ವೇಶ್ವರನಿಗೆ ಸಮರ್ಪಿತವಾದ ಶಾಂತಿಸಮಾಧಾನದ ಬಲಿಪ್ರಾಣಿಯ ಮಾಂಸವನ್ನು ತಿಂದರೆ ಅಂಥವರನ್ನು ತಮ್ಮ ಕುಲದಿಂದ ತೆಗೆದುಹಾಕಬೇಕು.
22
ಯಾರಿಗಾದರು ಮನುಷ್ಯ ದೇಹದಿಂದುಂಟಾದ ಅಶುದ್ಧವಸ್ತು, ಅಶುದ್ಧ ಮೃಗ, ನಿಷಿದ್ಧವಸ್ತು, ಇವುಗಳಲ್ಲಿ ಯಾವುದಾದರೂ ಸೋಂಕಿದರೆ ಅಂಥವರು ಸರ್ವೇಶ್ವರನಿಗೆ ಸಮರ್ಪಿತವಾದ ಬಲಿಪ್ರಾಣಿಯ ಮಾಂಸವನ್ನು ತಿನ್ನಕೂಡದು; ತಿಂದರೆ ಕುಲದಿಂದ ಬಹಿಷ್ಕೃತರಾಗಬೇಕು.
23
ಸರ್ವೇಶ್ವರ ಮೋಶೆಗೆ ಇಂತೆಂದರು: “ನೀನು ಇಸ್ರಯೇಲರಿಗೆ ಹೀಗೆ ಆಜ್ಞೆ ಮಾಡು:- ನೀವು ಎತ್ತು, ಕುರಿ ಹಾಗು ಆಡುಗಳ ಕೊಬ್ಬನ್ನು ತಿನ್ನಬಾರದು.
24
ಅಂಥ ಪ್ರಾಣಿ ರೋಗದಿಂದ ಸತ್ತರೆ, ಇಲ್ಲವೆ ಕಾಡುಮೃಗದಿಂದ ಕೊಲ್ಲಲ್ಪಟ್ಟರೆ ಅದರ ಕೊಬ್ಬನ್ನು ಬೇರೆ ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು; ಆದರೆ ಎಷ್ಟು ಮಾತ್ರಕ್ಕೂ ತಿನ್ನಬಾರದು.
25
ಜನರು ಸರ್ವೇಶ್ವರನಿಗೆ ಹೋಮ ಮಾಡುವಂಥ ಪ್ರಾಣಿಪಶುಗಳ ಕೊಬ್ಬನ್ನು ಯಾರಾದರು ತಿಂದರೆ ಅವರು ಕುಲದಿಂದ ಬಹಿಷ್ಕೃತರಾಗಬೇಕು.
26
ಪಕ್ಷಿಯದಾಗಲಿ, ಪ್ರಾಣಿಯದಾಗಲಿ ಯಾವ ರಕ್ತವನ್ನೂ ನೀವು ಎಲ್ಲಿಯೂ ಊಟಮಾಡಬಾರದು.
27
ರಕ್ತವನ್ನು ಭೋಜನ ಮಾಡಿದವನು ಕುಲದಿಂದ ಬಹಿಷ್ಕೃತನಾಗಬೇಕು.”
28
ಮೋಶೆಗೆ ಸರ್ವೇಶ್ವರ ಹೇಳಿದ್ದೇನೆಂದರೆ:
29
“ಇಸ್ರಯೇಲರಿಗೆ ಹೀಗೆಂದು ಆಜ್ಞಾಪಿಸು: ಶಾಂತಿಸಮಾಧಾನದ ಬಲಿಪ್ರಾಣಿಯನ್ನು ಸರ್ವೇಶ್ವರನಿಗೆ ಸಮರ್ಪಿಸುವವನು ಆ ಬಲಿದ್ರವ್ಯಗಳಲ್ಲಿ ಸರ್ವೇಶ್ವರನಿಗೆ ಸಲ್ಲಬೇಕಾದುದನ್ನು ತಂದುಕೊಡಬೇಕು.
30
ಸರ್ವೇಶ್ವರನಿಗೆ ಹೋಮರೂಪವಾಗಿ ಸಮರ್ಪಿಸಬೇಕಾದುದನ್ನು ಅಂದರೆ ಪ್ರಾಣಿಯ ಕೊಬ್ಬನ್ನು ತನ್ನ ಕೈಯಿಂದಲೆ ಕೊಡಬೇಕು. ಅದರೊಂದಿಗೆ ಅದರ ಎದೆಯ ಭಾಗವನ್ನು ನೈವೇದ್ಯರೂಪವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿಯೆತ್ತಲು ತಂದು ಸಮರ್ಪಿಸಬೇಕು.
31
ಯಾಜಕನು ಆ ಕೊಬ್ಬನ್ನು ಬಲಿಪೀಠದ ಮೇಲೆ ಹೋಮಮಾಡಬೇಕು. ಎದೆಯ ಭಾಗ ಆರೋನನಿಗೂ ಅವನ ವಂಶಜರಿಗೂ ಸೇರಬೇಕು.
32
ನೀವು ಶಾಂತಿಸಮಾಧಾನದ ಬಲಿದ್ರವ್ಯಗಳಲ್ಲಿ ಪ್ರಾಣಿಯ ಬಲತೊಡೆಯನ್ನು ಯಾಜಕನಿಗಾಗಿ ಪ್ರತ್ಯೇಕಿಸಿ ಕೊಡಬೇಕು.
33
ಆರೋನನ ವಂಶಜರಲ್ಲಿ ಯಾವನು ಆ ಬಲಿಪ್ರಾಣಿಯ ರಕ್ತವನ್ನು ಹಾಗು ಕೊಬ್ಬನ್ನು ಅರ್ಪಿಸುತ್ತಾನೋ, ಆ ಪ್ರಾಣಿಯ ಬಲತೊಡೆ ಅವನ ಪಾಲಿಗೆ ಸೇರಬೇಕು.
34
ಶಾಂತಿಸಮಾಧಾನದ ಬಲಿಪ್ರಾಣಿಯ ಮಾಂಸದಲ್ಲಿ ನೈವೇದ್ಯರೂಪವಾಗಿ ಆರತಿಯೆತ್ತುವ ಎದೆಯ ಭಾಗವನ್ನು ಮತ್ತು ಯಾಜಕನಿಗಾಗಿ ಪ್ರತ್ಯೇಕಿಸುವ ತೊಡೆಯನ್ನು ಸರ್ವೇಶ್ವರ ಇಸ್ರಯೇಲ್ ಜನರಿಂದ ತೆಗೆದುಕೊಂಡು ಮಹಾಯಾಜಕ ಆರೋನನಿಗೂ ಅವನ ವಂಶಜರಿಗೂ ಕೊಟ್ಟು, ಅದು ಶಾಶ್ವತ ನಿಯಮವಾಗಿ ಅವರಿಗೆ ಸಲ್ಲುವಂತೆ ಮಾಡಿದ್ದಾರೆ.
35
ಸರ್ವೇಶ್ವರನಿಗೆ ಹೋಮರೂಪವಾಗಿ ಅರ್ಪಿತವಾದ ದ್ರವ್ಯಗಳಲ್ಲಿ ಇವೇ ಆರೋನನಿಗೂ ಅವನ ವಂಶಜರಿಗೂ ಶಾಶ್ವತವಾಗಿ ಸಲ್ಲತಕ್ಕ ಭಾಗಗಳು. ಮೋಶೆ ಅವರನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಯಾಜಕ ಸೇವಾವೃತ್ತಿಗಾಗಿ ಪ್ರತಿಷ್ಠಾಪಿಸಿದ ದಿನದಂದೇ ಇದು ನೇಮಕವಾಯಿತು.
36
ಇಸ್ರಯೇಲರು ಇವುಗಳನ್ನು ಯಾಜಕರಿಗೆ ಸಲ್ಲಿಸಬೇಕೆಂದು ಸರ್ವೇಶ್ವರ ಅವರನ್ನು ಮೋಶೆಯ ಮುಖಾಂತರ ಪ್ರತಿಷ್ಠಿಸಿ ಅಭಿಷೇಕಿಸಿದ ದಿನದಲ್ಲೇ ವಿಧಿಸಿದರು.”
37
ದಹನಬಲಿದಾನ, ಧಾನ್ಯನೈವೇದ್ಯ, ದೋಷಪರಿಹಾರಕ ಬಲಿ, ಪ್ರಾಯಶ್ಚಿತ್ತ ಬಲಿ, ಯಾಜಕ ಅಭ್ಯಂಜನ ಬಲಿ, ಶಾಂತಿಸಮಾಧಾನ ಬಲಿ ಎಂಬ ಇವುಗಳ ವಿಷಯದಲ್ಲಿ ಮೇಲೆ ಹೇಳಿದ್ದೇ ಬಲಿದಾನ ವಿಧಿಗಳು.
38
ಸರ್ವೇಶ್ವರ ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಈ ಆಜ್ಞೆಗಳನ್ನು ಕೊಟ್ಟರು. ಸೀನಾಯಿ ಮರುಭೂಮಿಯಲ್ಲಿ ಇಸ್ರಯೇಲರು ಅರ್ಪಿಸಬೇಕಾದುದನ್ನು ಸರ್ವೇಶ್ವರನಿಗೆ ಅರ್ಪಿಸಬೇಕೆಂದು ಮೋಶೆ ಆಜ್ಞಾಪಿಸಿ ಮೇಲ್ಕಂಡ ವಿಧಿಗಳನ್ನು ಕೊಟ್ಟನು.
← Chapter 6
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 8 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27